ಕಾಂಗ್ರೆಸ್ಗೆ ಕೈಕೊಟ್ಟು ಬಿಜೆಪಿ ಸೇರಿರುವ RRನಗರ ಅಭ್ಯರ್ಥಿ ಮುನಿರತ್ನ ಆಸ್ತಿ ಎಷ್ಟಿದೆ ಗೊತ್ತಾ?
ಕಾಂಗ್ರೆಸ್ಗೆ ಕೈಕೊಟ್ಟು ಆಪರೇಷನ್ಗೆ ಒಳಗಾಗಿ ಬಿಜೆಪಿ ಸೇರಿರುವ ಹಾಗೂ ರಾಜರಾಜೇಶ್ವರಿನ ನಗರ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 78 ಕೋಟಿ ರೂ.ಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. ಅಲ್ಲದೆ, ದ್ವಿಚಕ್ರ ವಾಹನ, ಕಾರು ಸೇರಿದಂತೆ 30 ವಾಹನಗಳಿವೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ತಿಳಿದು ಬಂದಿದೆ.
ಮುನಿರತ್ನ ಅವರು 10.66 ಲಕ್ಷ ರು.ನಗದು. ತಮ್ಮ ಹೆಸರಲ್ಲಿ 26.11 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 51.91 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಬಳಿ 3. 98 ಲಕ್ಷ ರೂ. ನಗದು, 40.97 ಲಕ್ಷ ರೂ. ಮೌಲ್ಯದ ಚರಾಸ್ತಿ, 24.14 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ವಿವರದಲ್ಲಿ ವಿವರಿಸಿದ್ದಾರೆ.
ಅಲ್ಲದೆ, ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಯ ಖಾತೆಯಲ್ಲಿ1. 08 ಕೋಟಿ ರೂ. ಇದ್ದು, 21. 37ಕೋಟಿ ರೂ. ಸಾಲ ನೀಡಿದ್ದಾರೆ. ದ್ವಿಚಕ್ರ ವಾಹನ, ಕಾರುಗಳು ಸೇರಿ 1.31 ಕೋಟಿ ರೂ. ಮೌಲ್ಯದ ವಾಹನಗಳು ಇವೆ.
ಮುನಿರತ್ನ ಹೆಸರಲ್ಲಿ 42.03 ಕೋಟಿ ರೂ. ಸಾಲ, ಪತ್ನಿ ಹೆಸರಲ್ಲಿ 4.38 ಕೋಟಿ ರೂ. ಸಾಲ ಇದೆ. ಮುನಿರತ್ನ ಹೆಸರಲ್ಲಿ 1.23 ಕೋಟಿ ರೂ. ಮೌಲ್ಯದ 3 ಕೆಜಿಗೂ ಅಧಿಕ ಚಿನ್ನ, 40.94 ಕೆಜಿ ಬೆಳ್ಳಿ ಹೊಂದಿದ್ದಾರೆ. ಪತ್ನಿ ಬಳಿ 4.40 ಲಕ್ಷ ರೂ. ಮೌಲ್ಯದ 360 ಗ್ರಾಂ ಚಿನ್ನ ಇದೆ ಎಂದು ಆಸ್ತಿ ವಿವರದಲ್ಲಿ ತಿಳಿಸಲಾಗಿದೆ.
ಮುನಿರತ್ನ ವಿರುದ್ಧ ಮೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ಬಗ್ಗೆಯೂ ನಮೂದಿಸಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ರಂಗೇರಿದ ಉಪಚುನಾವಣೆಯ ಕಾವು : ‘ಕೈ’ ಆಟ ನಡೆಯಲ್ಲ ಎಂದ ‘ತೆನೆ ಹೊತ್ತ ಮಹಿಳೆ’!

