ರಿಪಬ್ಲಿಕ್‌ ಟಿವಿ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸುಶಾಂತ್‌ ಸ್ನೇಹಿತ!

ರಿಪಬ್ಲಿಕ್ ಟಿವಿ ಮತ್ತದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಪ್ರಮುಖ ಸಂಚುಕೋರ ಮತ್ತು ಕೊಲೆಗಾರ ಎಂದು ಹೇಳಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳೆಯ ಸಂದೀಪ್ ಸಿಂಗ್, ರಿಪಬ್ಲಿಕ್‌ ಟಿವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಲ್ಲದೆ, 200 ಕೋಟಿ ರೂ. ಪರಿಹಾರ ಕೇಳಿ ರಿಪಬ್ಲಿಕ್‌ ಟಿವಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಪ್ರಕಟಿಸಿದ ಸಂದೀಪ್ ಸಿಂಗ್, “ಸುದ್ದಿ ಚಾನೆಲ್, ಕ್ರಿಮಿನಲ್ ಉದ್ದೇಶ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಹಲವಾರು ಸಂದೇಶಗಳನ್ನು ತನಗೆ ಕಳುಹಿಸಿದೆ” ಎಂದು ಆರೋಪಿಸಿದ್ದಾರೆ.

“ನ್ಯೂಸ್ ಚಾನೆಲ್‌ನ ಅಧಿಕಾರಿಯೊಬ್ಬರು ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಚಾನೆಲ್‌ಗೆ ಆರ್ಥಿಕವಾಗಿ ಲಾಭವಾಗಲು ಅವರು ಒಪ್ಪದಿದ್ದರೆ, ನಮ್ಮ ವಿರುದ್ಧ ಸುದ್ದಿ ಪ್ರಸಾರವಾಗಲಿದೆ ಎಂದು ಬೆದರಿಕೆ ಹಾಕಿದ್ದರು. ಈ ಆರೋಪವು ನಿಜ ಎಂಬುದು ಎಂದು ಸಾಬೀತಾಗಿದೆ. ಏಕೆಂದರೆ ನನ್ನ ವಿರುದ್ಧ ಈ ಚಾನೆಲ್ ಅಪಪ್ರಚಾರದ ವರದಿಗಳನ್ನು ಪ್ರಸಾರ ಮಾಡುತ್ತಲೇ ಇದೆ” ಎಂದು ಸಂದೀಪ್ ಸಿಂಗ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಕೋಮುದ್ವೇಷ ಸುದ್ದಿ ಪ್ರಸಾರ: ಅನಾರ್ಬ್ ಗೋಸ್ವಾಮಿಗೆ ಶೋಕಾಸ್‌ ನೋಟಿಸ್‌!

ನೋಟಿಸ್‌ನಲ್ಲಿ ಮತ್ತೊಂದು ಪ್ರಮುಖ ವಿಷಯವನ್ನು ಉಲ್ಲೇಖಿಸಿ, “ಸುಶಾಂತ್ ಮೃತ ದೇಹವನ್ನು ಹೊತ್ತ ಆಂಬುಲೆನ್ಸ್‌ ಕೂಪರ್ ಆಸ್ಪತ್ರೆಗೆ ಹೋಗಲಿ ಎಂದು ಅವರ ಗೆಳೆಯ ಸಂದೀಪ್ ಸಿಂಗ್ ಒತ್ತಾಯಿಸಿದ್ದಾರೆ. ಈ ವಿಷಯವನ್ನು ಮಾಧ್ಯಮದಲ್ಲಿ ಹರಡಲು ಸಂದೀಪ್ ಸಿಂಗ್ ಅವರ ಪಿಆರ್ ಇದರ ಚಿತ್ರವನ್ನು ಕ್ಲಿಕ್ಕಿಸಿದ್ದರು ಎಂಬುದಾಗಿ ಚಾನೆಲ್‌ನ ಪ್ಯಾನಲಿಸ್ಟ್ ಹೇಳಿದ್ದಾರೆ” ಎಂದು ಆರೋಪಿಸಲಾಗಿದೆ.

View this post on Instagram

It's Payback time @republicworld #Defamation #EnoughIsEnough

A post shared by Sandip Ssingh (@officialsandipssingh) on

“ಈ ಮಾಧ್ಯಮ ತಮ್ಮ ವರದಿಯಲ್ಲಿ, ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಯಬಾರದು ಎಂದು ಸಂದೀಪ್ ಸಿಂಗ್ ಹೇಳಿರುವುದಾಗಿ, ಅವರ ವಿರುದ್ಧ #ArrestSandeepSsingh ಅಭಿಯಾನ ಆರಂಭಿಸಿ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಜೊತೆಗೆ ಈ ತನಿಖೆಯಿಂದ ತಪ್ಪಿಸಿಕೊಳ್ಳಲು ಇಂಗ್ಲೆಂಡ್‌ಗೆ ಓಡಿ ಹೋಗುವುದಾಗಿ ಸುಳ್ಳು ಹೇಳಿದ್ದಾರೆ” ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.


ಇದನ್ನೂ ಓದಿ: ನಕಲಿ ಟಿಆರ್‌ಪಿ ಪ್ರಕರಣ: ರಿಪಬ್ಲಿಕ್‌ ಟಿವಿಯ ಇಬ್ಬರು ಸಂಪಾದಕರು ಪೊಲೀಸರ ಮುಂದೆ ಹಾಜರ್‌

Spread the love

Leave a Reply

Your email address will not be published. Required fields are marked *