ನಕಲಿ ಟಿಆರ್‌ಪಿ ಪ್ರಕರಣ: ರಿಪಬ್ಲಿಕ್‌ ಟಿವಿಯ ಇಬ್ಬರು ಸಂಪಾದಕರು ಪೊಲೀಸರ ಮುಂದೆ ಹಾಜರ್‌

ನಕಲಿ ಟಿಆರ್‌ಪಿ ಪ್ರಕರಣದಲ್ಲಿ ಮುಂಬೈ ಪೊಲೀಸರು ರಿಪಬ್ಲಿಕ್‌ ಟಿವಿ ಮತ್ತು ಮುಂಬೈನ ಸ್ಥಳೀಯ ಎರಡು ನ್ಯೂಸ್‌f ಚಾನೆಲ್‌ಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಹೇಳಿಕೆಗಳನ್ನು ದಾಖಲಿಸುವುದಕ್ಕಾಗಿ ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಮತ್ತು ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಅಭಿಷೇಕ್ ಕಪೂರ್ ಬುಧವಾರ ಮುಂಬೈ ಅಪರಾಧ ಶಾಖೆಯ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಅಕ್ಟೋಬರ್ 10 ರಂದು ರಿಪಬ್ಲಿಕ್ ಟಿವಿ ಹನ್ಸಾ ರಿಸರ್ಚ್ ಗ್ರೂಪ್ ಗೆ ಸೇರಿದ ಡಾಕ್ಯುಮೆಂಟರಿಯನ್ನು ಪ್ರಸಾರ ಮಾಡಿತು. ಮಂಗಳವಾರ ನಾರಾಯಣಸ್ವಾಮಿ ಮತ್ತು ಕಪೂರ್ ಅವರಿಗೆ ನೀಡಿದ ಸಮನ್ಸ್, ನಲ್ಲಿ ದಂಧೆಗೆ ಸಂಬಂಧಿಸಿದಂತೆ “ನಂಬಲು ಸಮಂಜಸವಾದ ಆಧಾರಗಳಿವೆ” ಅವರು “ದಾಖಲೆಯ ಕೆಲವು ಸಂಗತಿಗಳು ಮತ್ತು ಸಂದರ್ಭಗಳನ್ನು ಬಹಿರಂಗಪಡಿಸಿದ್ದಾರೆ.” ಆದ್ದರಿಂದ ಅವರ ಹೇಳಿಕೆಗಳನ್ನು ದಾಖಲಿಸುವುದು ಅವಶ್ಯಕವಾಗಿದೆ ಎಂದು ಹೇಳಿತ್ತು.

ಇದನ್ನೂ ಓದಿ: ಟಿಆರ್‌ಪಿ ಹಗರಣ: ಗೋಸ್ವಾಮಿಗೆ ಒಂದೆಡೆ ಪೊಲೀಸ್‌, ಮೊತ್ತೊಂದೆಡೆ ಇಂಡಿಯಾ ಟುಡೆ ಚಾರ್ಜ್‌!

ರಿಪಬ್ಲಿಕ್ ಟಿವಿ ಟ್ವೀಟ್ ನಲ್ಲಿ, “ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ನಮ್ಮ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಮತ್ತು ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಅಭಿಷೇಕ್ ಕಪೂರ್ ಅವರ ಬೆನ್ನಿಗೆ ಬೆಂಬಲವಾಗಿ ನಿಂತಿದೆ. ರಿಪಬ್ಲಿಕ್ ತನ್ನ ವರದಿಯನ್ನು ಮಾಡಲು ಮತ್ತು ಮೂಲಗಳ ರಕ್ಷಿಸಲು ಮಾಧ್ಯಮಗಳ ಹಕ್ಕಿಗೆ ಸಂಪೂರ್ಣವಾಗಿ ಬದ್ದವಿದೆ” ಎಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಅಪರಾಧ ವಿಭಾಗವು ಈವರೆಗೆ ಐದು ಜನರನ್ನು ಬಂಧಿಸಿದೆ.


ಇದನ್ನೂ ಓದಿ: ಮಾಧ್ಯಮಗಳ ವಿರುದ್ಧ ಸಿಡಿದ ಬಾಲಿವುಡ್‌: ಸುದ್ದಿ ಚಾನೆಲ್‌ಗಳ ಮೇಲೆ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights