ನೆನ್ನೆ ‘ಎಸ್ ಬ್ಯಾಂಕ್’ ಇಂದು ರಾಜ್ಯ ಖಾಕಿಗೂ ಸಂಬಳವಿಲ್ಲದ ಸಂಕಟ..!

ನೆನ್ನೆ ‘ಎಸ್ ಬ್ಯಾಂಕ್’ ನಲ್ಲಿ ಹಣ ಹೂಡಿದ ಗ್ರಾಹಕರು ನಮ್ಮ ಹಣ ವಾಪಸ್ಸು ಕೊಡೆ ಎಂದು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಇಂದು ಅದೇ ರೀತಿ ರಾಜ್ಯ ಖಾಕಿಗೂ ಸಂಬಳ ಕೊಡೆ ಎನ್ನುವ ಸಂಕಟ ಶುರುವಾಗಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಬಳಕ್ಕಾಗಿ ಪೀಕಲಾಟ ಶುರುವಾಗಿದ್ದು, ನೆನ್ನೆ ಎಸ್ ಬ್ಯಾಂಕ್ ಸರದಿ ಇಂದು ಪೊಲೀಸ್ ಇಲಾಖೆ ಸರದಿಯಾ..? ಎನ್ನುವ ಪ್ರಶ್ನೆ ಜನರಲ್ಲಿ ಉದ್ಬವಿಸಿದೆ.

ಹೌದು… ತಿಂಗಳಾಂತ್ಯಕ್ಕೆ ಸರಿಯಾಗಿ ಸಂಬಳ ಕೈಸೇರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸಂಬಳ ಏಳು ದಿನವಾದರೂ ಕೈ ಸೇರಿಲ್ಲಾ ಎಂದರೆ  ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳು ಗಾಬರಿಗೊಂಡಿದ್ದಾರೆ. ರಾಜ್ಯದಲ್ಲಿ ಖಜಾನೆ ಒಂದರಲ್ಲಿ ಸಂಬಳವಾಗಿದೆ. ಆದರೆ ಖಜಾನೆ 2 ಅಡಿಯಲ್ಲಿ ಬರುವಂತವರಿಗೆ ಇನ್ನೂ ಸಂಬಳವಾಗಿಲ್ಲ. ಹೀಗಾಗಿ ಕೆಲವರಿಗೆ ಆಗಿದೆ ಕೆಲವರಿಗೆ ಆಗಿಲ್ಲ ಯಾಕೆ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

ಉದ್ಯೋಗವಕಾಶ ಸೃಷ್ಟಿಸಬೇಕಾದ ಸರ್ಕಾರದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಸಂಬಳ ಕೊಡಲು ಹಣವಿಲ್ಲ ಎಂದರೆ ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಯಾವ ಹಂತ ತಲುಪಿದೆ ಅನ್ನೋದನ್ನ ಕಲ್ಪಿಸಿಕೊಳ್ಳಲಾಗುತ್ತಿಲ್ಲ.

ಮೊನ್ನೆಯಷ್ಟೇ ಯಡಿಯೂರಪ್ಪ ಸರ್ಕಾರ ಆರ್ಥಿಕ ಸಂಕಷ್ಟದ ಹೇಳಿಕೆ ಕೊಟ್ಟು ವಿಳಂಬವಾಗಿ ರಾಜ್ಯ ಬಜೆಟ್ ಮಂಡನೆ ಮಾಡಿದೆ. ಯಾವದು ಅಗ್ಗ ? ಯಾವುದು ದುಬಾರಿ ಎಂದು ಕಾಯುತ್ತಿದ್ದ ಬಹುತೇಕ ಜನರಿಗೆ ನಿರಾಸೆ ಉಂಟುಮಾಡಿದ ಬಿಎಸ್ ವೈ ನ ಈ ಬಜೆಟ್ ನಿಂದ ಹೊರಬರುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ.

ಖಾಕಿಗೆ ಸಂಬಳ ನೀಡದಕ್ಕೆ ಅನುದಾನ ವಿಳಂಬವೇ ಕಾರಣ ಎನ್ನುವ ಸಮಜಾಯಿಸಿ ನಿಡಲಾಗುತ್ತಿದ್ದರು. ಇದಕ್ಕೆ ನಿಖರ ಕಾರಣ ಏನು ಅನ್ನೋದು ಮಾತ್ರ ಲಭ್ಯವಾಗಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights