FACT CHECK | ಅಲ್ಪಸಂಖ್ಯಾತರ ಓಲೈಕೆಗೆಂದು ರೂ 200 ಕೋಟಿ ನೀಡಿರುವ ಸಿದ್ದರಾಮಯ್ಯ, ಶಾಲೆಗಳ ಅಭಿವೃದ್ದಿಗೆ ಕೇವಲ ರೂ 50 ಕೋಟಿ ನೀಡಿದ್ದಾರೆಯೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2024-25 ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ಪ್ರೌಢಶಾಲೆಗಳ ಅಭಿವೃದ್ಧಿಗೆ 50 ಕೋಟಿ ನೀಡಿದೆ ಅದೇ ಅಲ್ಪಸಂಖ್ಯಾತರ ಓಲೈಕೆಗೆಂದು 200 ಕೋಟಿ ನೀಡಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹೇಗಿದೆ ಢೊಂಗಿ ಜಾತ್ಯಾತೀತ ಸರ್ಕಾರ !! ಶಿಕ್ಷಣಕ್ಕಿಂತ ಒಟ್ ಬ್ಯಾಂಕಿನ ಅಭಿವೃದ್ಧಿಯ ಕಡೆಗೆ ತುಘಲಕರು ಎಂದು ಪ್ರತಿಪಾದಿಸಿ ಫೇಸ್‌ಬುಕ್‌ನಲ್ಲಿ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಫೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ನೀವು ಅಯೋಧ್ಯೆಯ ರಾಮ ಮಂದಿರ ಕಟ್ಟಿದ್ದು ಸಾಕು… ಈಗ ವಿದ್ಯಾಮಂದಿರಗಳೇ ಬೇಕು ಎಂದು ಪ್ರಚಾರ ಮಾಡಿದ್ದೀರಿ… ಹಾಗೇ ಹಲವರು ಅತೀ ಜಾತ್ಯಾತೀತರೂ ಪ್ರಚಾರ ಮಾಡಿದ್ದರು….. ಈಗ ಎಲ್ಲರೂ ಯಾವ ತೂತಿನೊಳಗೆ ಅಡಗಿದ್ದಾರೋ…..?

ಮಂದಿರದ ಬದಲು, ಶಾಲೆ ಕಟ್ಟಿ ಅಂತ ಹೇಳಿದ ಮಹಾನ್ ವ್ಯಕ್ತಿಗಳು ಇವಾಗ ಕಾಣೆ ಆಗ್ತಾರೆ. ಯಾಕೆಂದರೆ ವಕ್ಫ್‌ ಬೋರ್ಡ್‌ ಅಭಿವೃದ್ಧಿಗೆ 100 ಕೋಟಿ , ಕ್ರಿಶ್ಚಿಯನ್ ಮಿಷನರಿ ಅಭಿವೃದ್ಧಿಗೆ 200 ಕೋಟಿ. ಆದರೆ ಶಾಲೆಗೆ ಮಾತ್ರ 50 ಕೋಟಿ ಸಾಕಲ್ವಾ?” ಎಂಬ ಹೇಳಿಕೆಯೊಂದಿಗೆ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಕೇವಲ ರೂ 50 ಕೋಟಿ ಮಾತ್ರ ನೀಡಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಸರ್ಕಾರ ಮಂಡಿಸಿದ ಬಜೆಟ್‌ಅನ್ನು ಅವಲೋಕಿಸಿದಾಗ  ಪುಟ 43ರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಶೀರ್ಷಿಕೆಯಡಿ ಪ್ರಕಟವಾಗಿರುವ 95ನೇ ಅಂಶದಲ್ಲಿ, 2023-24ನೇ ಸಾಲಿನಲ್ಲಿ 600 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿತ್ತು. 2024-25ನೇ ಸಾಲಿನಲ್ಲಿ ಶಾಲಾ/ಕಾಲೇಜುಗಳ ಕೊಠಡಿ ನಿರ್ಮಾಣ, ದುರಸ್ತೆ, ಶೌಚಾಲಯ, ನಿರ್ಮಾಣದಂತಹ ಕಾಮಗಾರಿಗಳನ್ನು 850 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು” ಎಂದು ಉಲ್ಲೇಖಿಸಲಾಗಿದೆ.

“ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್‌ ಲ್ಯಾಬ್‌, ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಲು ಮೀಸಲಿಡಲಾಗಿದೆ” ಎಂದು ತಿಳಿಸಿದೆ. ಈ ಬಾರಿ ಒಟ್ಟು ಬಜೆಟ್‌ 12% ಹಣವನ್ನು, ಅಂದರೆ 44, 422 ಕೋಟಿ ರೂ.ಗಳನ್ನು ಶಿಕ್ಷಣ ವಲಯಕ್ಕೆ ನೀಡಲಾಗಿದೆ ಎಂದು ಬಜೆಟ್‌ನ ಪುಟ 45ರಲ್ಲಿ ವಿವರಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಜ್ಯಸರ್ಕಾರ ಫೆಬ್ರವರಿ 16ರಂದು ಮಂಡಿಸಿದ ಬಜೆಟ್‌ನಲ್ಲಿ ಸರ್ಕಾರಿ ಪ್ರೌಢಶಾಲೆಗಳ ಅಭಿವೃದ್ಧಿಗೆ 50 ಕೋಟಿ ನೀಡಿ, ವಕ್ಫ್‌ ಬೋರ್ಡ್‌ ಅಭಿವೃದ್ಧಿಗೆ 100 ಕೋಟಿ , ಕ್ರಿಶ್ಚಿಯನ್ ಮಿಷನರಿ ಅಭಿವೃದ್ಧಿಗೆ 200 ಕೋಟಿಗೂ ಹೆಚ್ಚಿನ ಹಣ ನೀಡಿದೆ ಎಂದು ಬಲಪಂಥೀಯ ಸಿದ್ದಾಂತದ ಪ್ರತಿಪಾದಕರು ಸುಳ್ಳು ಮತ್ತು ನರನ್ನು ದಾರಿತಪ್ಪಿಸುವ ಪೋಸ್ಟ್‌ಅನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.  2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಶಾಲಾ/ಕಾಲೇಜುಗಳ ಅಭಿವೃದ್ದಿಗೆ 850 ಕೋಟಿ ರೂ ಮೀಸಲಿಟ್ಟಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ‘ಪ್ರೊ ನಿತಾಶಾ ಕೌಲ್‌’ ಪಾಕಿಸ್ತಾನದವರಲ್ಲ ಭಾರತದ ಮೂಲದವರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights