ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ : ಆರು ಜನ ಸಾವು-19 ಮಂದಿಗೆ ಗಾಯ!

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ನಡೆದ ಸ್ಫೋಟದಿಂದಾಗಿ ಆರು ಜನ ಸಾವನ್ನಪ್ಪಿದ್ದು 19 ಮಂದಿ ಗಾಯಗೊಂಡಿದ್ದಾರೆ.

ಹೌದು… ನಿನ್ನೆ ಸಂಜೆ ತಮಿಳುನಾಡಿನ ಶಿವಕಾಸಿ ಬಳಿಯ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಆರು ಜನ ಸಾವನ್ನಪ್ಪಿದ್ದಾರೆ ಮತ್ತು 19 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಪೋಟದ ತೀವ್ರತೆಗೆ ರಾಸಾಯನಿಕಗಳನ್ನು ಸಂಗ್ರಹಿಸಲಾಗಿದ್ದ ಹತ್ತು ಕ್ಕೂ ಹೆಚ್ಚು ಶೆಡ್‌ಗಳು ನೆಲಕ್ಕೆ ಉರುಳಿವೆ. ಈ ತಿಂಗಳಿನಲ್ಲಿ ದೇಶದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಪಟಾಕಿ ಕೇಂದ್ರವಾದ ಕ್ರ್ಯಾಕರ್ ಉತ್ಪಾದನಾ ಘಟಕದಿಂದ ಈಗಾಗಲೇ 5 ಶವಗಳು ಪತ್ತೆಯಾಗಿದ್ದು 6 ಜನರಿಗೆ ಗಾಯಗಳಾಗಿವೆ. ಅವರನ್ನು ರಕ್ಷಣಾ ಅಧಿಕಾರಿಗಳು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

factory fire

ಘಟನೆಗೆ ನಿಖರ ಕಾರಣವೇನೆಂಬುದು ಇನ್ನೂ ಪತ್ತೆಯಾಗಿಲ್ಲ. ಫೆಬ್ರವರಿ ಮೊದಲ ವಾರದಲ್ಲಿ ಶಿವಕಾಶಿಯ ಅಚ್ಚಂಕುಲಂ ಪಟಾಕಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು 20ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದರು. ಇದು ಎರಡನೇ ಬಾರಿಗೆ ನಡೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights