ಅಪ್ರಾಪ್ತ ಬಾಲಕಿಯನ್ನು ಕೊಂದು, ಮೃತ ದೇಹದ ಮೇಲೆ ಅತ್ಯಾಚಾರ: ಆರೋಪಿ ಬಂಧನ
05 ವರ್ಷದ ಅಪ್ರಾಪ್ತ ಬಾಲಕಿಯನ್ನು ಹತ್ಯೆಗೈದು, ಮೃತ ದೇಹದ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಒಡಿಶಾ ರಾಜ್ಯದ ನಯಾಗರ್ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ14 ರಂದು ಬಾಲಕಿಯನ್ನು ಕೊಲೆ ಮಾಡಲಾಗಿದ್ದು, ಜುಲೈ 23 ರಂದು ಆಕೆಯ ಶವವನ್ನು ಹಿತ್ತಲಿನ ಬಳಿ ಎಸೆಯಲಾಗಿತ್ತು. ಅಸ್ಥಿಪಂಜರದ ಅವಶೇಷಗಳು ಪತ್ತೆಯಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸಿದೆ.
ಬಂಧಿತ ಆರೋಪಿಗೆ ಮಕ್ಕಳ ಅಶ್ಲೀಲ ಚಿತ್ರಗಳನ್ನು ನೋಡುವ ಚಟವಿತ್ತು. ಈತ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ. ಈ ವೇಳೆ ಅಪ್ರಾಪ್ತ ಬಾಲಕಿ ವಿರೋಧ ವ್ಯಕ್ತಪಡಿಸಿದ್ದರಿಂದ ಆರೋಪಿ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹದ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಎಸ್ಐಟಿ ಮುಖ್ಯಸ್ಥ ಅರುಣ್ ಬೊತ್ರಾ ಮಾಹಿತಿ ನೀಡಿದ್ದಾರೆ.
ತನ್ನ 22 ವರ್ಷಗಳ ಪೊಲೀಸ್ ಸೇವೆಯಲ್ಲಿ ಈ ರೀತಿಯ ಅಪ್ರಾಪ್ತ ಬಾಲಕಿಯ ಕ್ರೂರ ಮತ್ತು ಭಯಂಕರ ಕೊಲೆಯನ್ನು ನೋಡಿಲ್ಲ. ಆರೋಪಿ ತನ್ನ ಮೊಬೈಲ್ ಫೋನ್ನಲ್ಲಿ ಗೂಗಲ್ ಹಿಸ್ಟರಿಯನ್ನು ಕ್ಲಿಯರ್ ಮಾಡಿದ್ದಾನೆ ಎಂದು ಬೋತ್ರ ಹೇಳಿದ್ದಾರೆ.
ಇದನ್ನೂ ಓದಿ: ಬಾರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ; ಯುವತಿ ಮೇಲೆ ಸರಣಿ ಅತ್ಯಾಚಾರ
ಆರೋಪಿಯ ಮೊಬೈಲ್ ಪರೀಕ್ಷಿಸಿದಾಗ, 3 ವರ್ಷದ ಬಾಲಕಿಯ ಕೊಲೆ ಮತ್ತು ಅತ್ಯಾಚಾರ ದೃಶ್ಯಗಳು ಕಂಡು ಬಂದವು. ಆತ ಚಿಕ್ಕ ಮಕ್ಕಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಇಂಟರ್ನೆಟ್ನಲ್ಲಿ ನೋಡುತ್ತಿದ್ದ. ಜೊತೆಗೆ ಅದರಿಂದ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
ಆದರೆ ಆರೋಪಿಯ ತಾಯಿ ಮತ್ತು ತಂಗಿ ಹಾಗೂ ಅಪ್ರಾಪ್ತೆಯ ಪೋಷಕರು ಎಸ್ಐಟಿ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ತನ್ನ ಮಗ ತುಂಬಾ ಮುಗ್ಧ ಎಂದು ಆರೋಪಿಯ ತಾಯಿ ಹೇಳಿದರೆ, ಆತ ಒಳ್ಳೆಯ ಹುಡುಗ ಎಂದು ಬಾಲಕಿಯ ಪೋಷಕರು ಹೇಳಿದ್ದಾರೆ.
ನನ್ನ ಮಗ ಮುಗ್ಧ , ಆತನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಎಸ್ಐಟಿ ಮುಖ್ಯಸ್ಥ ಬೋತ್ರ, ನನ್ನ ಮಗನಿಗೆ 5 ಲಕ್ಷ ರೂಪಾಯಿ ನೀಡಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೋ ಎಂದು ಒತ್ತಡ ಹಾಕಿದ್ದಾರೆ. ಈ ಅಪರಾಧ ಒಪ್ಪಿಕೊಳ್ಳುವಂತೆ ನನ್ನ ಮಗನಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಯ ತಾಯಿ ನಯಾಗರ್ನ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜುಲೈ 14 ರಂದು ಆರೋಪಿಯ ತಂಗಿಯನ್ನು ನೋಡಲು ಸಂತ್ರಸ್ತ ಬಾಲಕಿ ಮನೆಗೆ ಬಂದಿದ್ದಾಳೆ. ಆದರೆ, ಆರೋಪಿಯ ತಂಗಿ ಮತ್ತು ತಾಯಿ ಹೊರಗೆ ಹೋಗಿದ್ದರು. ಈ ವೇಳೆ ಮನೆಗೆ ಬಂದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧ ಒಡ್ಡಿದ ಬಾಲಕಿಯನ್ನು ಕತ್ತುಹಿಸುಕಿ ಕೊಂದಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹತ್ರಾಸ್ ಪ್ರಕರಣ: ಸಾಮೂಹಿಕ ಅತ್ಯಾಚಾರ ಎಸಗಿ; ಕೊಲೆಗೈದಿದ್ದಾರೆ; ಸಿಬಿಐ ಜಾರ್ಜ್ಶೀಟ್

