ಅಮೇರಿಕಾದ ಸೂಪರ್ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ : ಓರ್ವ ಮೃತ – 12 ಮಂದಿಗೆ ಗಾಯ!

ಅಮೇರಿಕಾದ ಸೂಪರ್ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಓರ್ವ ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ.

ಅಮೇರಿಕಾದ ಟೆನ್ನೆಸ್ಸೀಯ ಮೆಂಫಿಸ್ ಬಳಿಯ ಕೊಲಿಯರ್‌ವಿಲ್ಲೆಯಲ್ಲಿರುವ ಸೂಪರ್ ಮಾರ್ಕೆಟ್ ನ ಕ್ರೋಗರ್ ಕಿರಾಣಿ ಅಂಗಡಿಯಲ್ಲಿ ಗುರುವಾರ ಈ ಅವಘಡ ಸಂಭವಿಸಿದೆ. ಏಕಾಏಕಿ ಮಾರುಕಟ್ಟೆಗೆ ನುಗ್ಗಿದ ದಾಳಿಕೋರ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ ಓರ್ವ ಮೃತಪಟ್ಟಿದ್ದು 12 ಮಂದಿ ಗಾಯಗೊಂಡಿದ್ದಾರೆ.

ಬಳಿಕ ಶೂಟರ್ ಸ್ವಯಂ ಗುಂಡನ್ನು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಕೊಲಿಯರ್ವಿಲ್ಲೆ ಪೊಲೀಸ್ ಮುಖ್ಯಸ್ಥ ಡೇಲ್ ಲೇನ್ ಸುದ್ದಿಗಾರರಿಗೆ ತಿಳಿಸಿದರು.

ಘಟನೆಯಲ್ಲಿ ಕೆಲವರು ಅತ್ಯಂತ ಗಂಭೀರವಾದ ಗಾಯಗೊಂಡಿದ್ಧಾರೆ. ಗಾಯಗೊಂಡವರ ಸಂಖ್ಯೆಯು ಹೆಚ್ಚಾಗಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

S.W.A.T ತಂಡಗಳು ಸೇರಿದಂತೆ ಬಹು ಪಡೆಗಳು ಪರಿಸ್ಥಿತಿಯನ್ನು ನಿಭಾಯಿಸಲು ಸೂಪರ್ ಮಾರ್ಕೆಟ್‌ಗೆ ಪ್ರವೇಶಿಸಿವೆ. ಉದ್ಯೋಗಿಗಳು ಮತ್ತು ವ್ಯಾಪಾರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಹಾಯ ಮಾಡಲು ಪೊಲೀಸರು ನಿರತರಾಗಿದ್ದಾರೆ.

ಏಕಾಏಕಿ ಗುಂಡಿನ ದಾಳಿಯನ್ನು ಕಂಡು ಹೆದರಿದ ಜನ ಭಯಾನಕ ಸನ್ನಿವೇಶವನ್ನು ವಿವರಿಸಿದ್ದಾರೆ. ಈ ವೇಳೆ ಕೆಲ ಜನರು ಫ್ರೀಜರ್‌ಗಳಲ್ಲಿ ಮತ್ತು ಬೀಗ ಹಾಕಿದ ಕಚೇರಿಗಳಲ್ಲಿ ಅಡಗಿಕೊಂಡಿರುವುದನ್ನು ಪೊಲೀಸರು ಕಂಡಿದ್ದಾರೆ.

ದಾಳಿಕೋರ ಸ್ಥಳೀಯ ಉದ್ಯೋಗಿಯಾಗಿದ್ದಾನೆಯೇ ಎನ್ನುವುದು ತಿಳಿದುಬಂದಿಲ್ಲ. ಗುಂಡಿನ ದಾಳಿ ಘಟನೆ ಎಫ್‌ಬಿಐ ಮತ್ತು ಇತರ ಏಜೆನ್ಸಿಗಳ ತನಿಖೆಯಲ್ಲಿದೆ.

ಸಾಮೂಹಿಕ ಗುಂಡಿನ ದಾಳಿಗಳು ಮತ್ತು ಇತರ ಗನ್ ಹಿಂಸಾಚಾರಗಳು ಅಮೇರಿಕಾದಲ್ಲಿ ಆಗಾಗ ಸೃಷ್ಟಿಯಾಗುತ್ತಲೇ ಇರುತ್ತವೆ. ಬಂದೂಕು ನಿಯಂತ್ರಣ ಮೀರಿ ಜನರ ಕೈಗೆ ಸಿಗುತ್ತಿರುವುದರಿಂದ ಇಂಥಹ ಘಟನೆಗಳು ಉತ್ತೇಜಿಸಲ್ಪಡುತ್ತಿವೆ. ಇದರಿಂದ ಜನ ಪ್ರಾಣವನ್ನ ಕೈಯಲ್ಲಿಡಿದುಕೊಂಡು ಓಡಾಡುವ ಸ್ಥಿತಿ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights