ಬೈಕ್ ಗೆ ಡಿಕ್ಕಿ ಹೊಡೆದ ಟ್ರಕ್ ನಿಲ್ಲಿಸಲು ಮೇಲೆ ಹತ್ತಿದ ಯುವಕರು! : ವೀಡಿಯೋ ವೈರಲ್!

ಅತಿವೇಗವಾಗಿ ಚಲಿಸುವ ಟ್ರಕ್ ಮುಂಭಾಗದಲ್ಲಿ ಯುವಕರು ನಿಂತಿರುವುದನ್ನ ನೋಡಿದರೆ ಯಾವುದಾರು ಕಸರತ್ತು ಮಾಡುತ್ತಿರಬಹುದು ಅನ್ಸುತ್ತೆ. ಆದರೆ ತೋರಿಕೆಗೆ ಸಿನಿಮಾ ಸ್ಟೈಲ್ ನಲ್ಲಿ ಕಾಣುವ ಈ ವೀಡಿಯೋದ ಅಸಲಿಯತ್ತೇ ಬೇರೆ. ಹೀಗೆ ವೇಗವಾಗಿ ಚಲಿಸುತ್ತಿರುವ ಟ್ರಕ್ ಚಾಲಕ ಪುರುಷರೊಬ್ಬರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ವಾಹನ ನಿಲ್ಲಿಸದ ಕಾರಣ ಹುಡುಗರಿಬ್ಬರು ಟ್ರಕ್ ಮುಂಭಾಗದಲ್ಲಿ ಹತ್ತಿ ನಿಂತಿದ್ದಾರೆ.

ಬೈಕ್ ಗೆ ಡಿಕ್ಕಿ ಹೊಡೆದ  ಟ್ರಕ್ಕನ್ನು ನಿಲ್ಲಿಸಲು ಯುವಕರು ಟ್ರಕ್ ಮೇಲೆ ಹತ್ತಿದ ಘಟನೆ ಮಧ್ಯಪ್ರದೇಶದ ಮೊರೆನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಜೊತೆಗೆ ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಬೈಕ್‌ನಲ್ಲಿ ವಾಹನವನ್ನು ಬೆನ್ನಟ್ಟಿದ ಇಬ್ಬರು ವ್ಯಕ್ತಿಗಳು ಟ್ರಕ್ ಅನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಆದರೂ ಟ್ರಕ್ ಚಾಲಕ ವಾಹನವನ್ನು ನಿಲ್ಲಿಸದ ಕಾರಣ ಬೈಕ್ ಸವಾರರು ಈ ವೀಡಿಯೋವನ್ನು ಮಾಡಿದ್ದಾರೆ. ನಂತರ ಪುರುಷರು ಘಟನೆಯನ್ನು ಟ್ರಾಫಿಕ್ ಪೋಲೀಸ್ಗೆ ವಿವರಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಟ್ರಾಫಿಕ್ ಪೋಲೀಸರು ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.

ಮಾತ್ರವಲ್ಲದೇ ಟ್ರಕ್‌ನ ಹುಡ್‌ನಲ್ಲಿ ಕಾಣಿಸಿಕೊಂಡ ಪುರುಷರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights