ಆಂಧ್ರಪ್ರದೇಶ 1st Phase ಚುನಾವಣೆ: YSR ಕಾಂಗ್ರೆಸ್‌ಗೆ ಭರ್ಜರಿ ಮುನ್ನಡೆ; BJPಗೆ ಮುಖಭಂಗ!

ಆಂಧ್ರಪ್ರದೇಶ ಪಂಚಾಯತ್‌ಗಳ ಮೊದಲ ಹಂತದ ಚುನಾವಣೆಯ ಫಲಿತಾಂಶಗಳು ಪ್ರಕರಟವಾಗುತ್ತಿದ್ದು, 3,249 ಪಂಚಾಯತ್ ಸ್ಥಾನಗಳಲ್ಲಿ 2850 ಸ್ಥಾನಗಳಿಗೆ ಫಲಿತಾಂಶಗಳನ್ನು ಘೋಷಿಸಲಾಗಿದೆ. ಈ ಪೈಕಿ YSR ಕಾಂಗ್ರೆಸ್ 2319 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಟಿಡಿಪಿ 44, ಬಿಜೆಪಿ ಮತ್ತು ಅದರ ಸ್ಥಳೀಯ ಮಿತ್ರ ಪಕ್ಷಗಳು 31 ಸ್ಥಾನಗಳನ್ನು ಗೆದಿದ್ದು, ಸ್ವತಂತ್ರರು ಸೇರಿದಂತೆ ಇತರರು 56 ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಆಂಧ್ರಪ್ರದೇಶದಲ್ಲಿ ಮೊದಲ ಹಂತದಲ್ಲಿ 2,723 ಪಂಚಾಯಿತ್‌ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಅಲ್ಲದೆ, 525 ಸ್ಥಾನಗಳಿಗೆ ಅವಿರೋಧವಾಗಿ ಚುನಾವಣೆಗೂ ಮುನ್ನವೇ ಆಯ್ಕೆ ಮಾಡಲಾಗಿದೆ.

ನಿನ್ನೆ (ಬುಧವಾರ) ನಡೆದ ಚುನಾವಣೆಯಲ್ಲಿ 3,249 ಸ್ಥಾನಗಳ ಪೈಕಿ 525 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ 2,723 ಸ್ಥಾನಗಳಿಗೆ 7,506 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಮತದಾನ ಬೆಳಿಗ್ಗೆ 6.30 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3.30 ಕ್ಕೆ ಕೊನೆಗೊಂಡಿತು.

ಲಭ್ಯವಿರುವ ಮಾಹಿತಿಯ ಪ್ರಕಾರ, ಮೊದಲ ಹಂತದ ಚುನಾವಣೆಗಳಲ್ಲಿ ಸುಮಾರು 82% ಮತದಾನವಾಗಿದೆ.

ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಯುತ್ತಿದೆ. ಫೆಬ್ರವರಿ 21 ರವರೆಗೆ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಸಲಾಗುವುದು. ನಾಲ್ಕು ಹಂತಗಳಲ್ಲಿ ಒಟ್ಟು 20,157 ಗ್ರಾಮ ಪಂಚಾಯತಿ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: Fact Check: ಆಂಧ್ರಪ್ರದೇಶ ಸರ್ಕಾರದ ಪಡಿತರ ಚೀಟಿಯ ಮೇಲೆ ಯೇಸುವಿನ ಚಿತ್ರ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights