ಡ್ರಗ್ಸ್ ಪ್ರಕರಣ : ಮಾಜಿ ಸಿಎಂರಿಂದ ಅನುಶ್ರೀಯ ರಕ್ಷಣೆ – ಪ್ರಶಾಂತ್ ಸಂಬರಗಿ ಸ್ಪೋಟಕ ಹೇಳಿಕೆ!
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ನಿರೂಪಕಿ ಅನುಶ್ರೀ ಹೆಸರು ತಳುಕು ಹಾಕಿಕೊಂಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರಶಾಂತ್ ಸಂಬರಗಿ, ಅನುಶ್ರೀ ಕೋಟಿ ಕೋಟಿ ಒಡೆತನದ ಬಗ್ಗೆ ಪ್ರಶಾಂತ್ ಪ್ರಶ್ನೆ ಎತ್ತಿದ್ದಾರೆ. ಮಂಗಳೂರು, ಬೆಂಗಳೂರಿನಲ್ಲಿ ಅನುಶ್ರೀ ಮನೆ ಮಾಡಿದ್ದಾರೆ. 12 ಕೋಟಿ ಮನೆ ಮಾಡಿದ್ದಾರೆ. ಅದು ಹೇಗೆ ಬಂತು? ಇಷ್ಟೊಂದು ಒಡೆತನ ಹೇಗೆ ಬರಲು ಸಾಧ್ಯ” ಎಂದು ಪ್ರಶ್ನೆ ಮಾಡಿದ್ದಾರೆ. ಅನುಶ್ರೀ ಅವರ ವಿಚಾರಣೆಯಲ್ಲೂ ಪೊಲೀಸರ ದೋಷಗಳು ಕಂಡು ಬರುತ್ತಿವೆ ಎಂದು ಆರೋಪ ಮಾಡಿದ್ದಾರೆ.
ಮಾತ್ರವಲ್ಲದೇ ಮಾಜಿ ಸಿಎಂರಿಂದ ಅನುಶ್ರೀ ಯನ್ನು ರಕ್ಷಣೆ ಮಾಡುತ್ತಿದ್ದಾರೆ. ನನಗೆ ಕರೆ ಮಾಡಿದ ಮಾಜಿ ಸಿಎಂ ‘ಯಾವುದೇ ಕಾರಣಕ್ಕೂ ಮಂಗಳೂರು ಡ್ರಗ್ಸ್ ಬಗ್ಗೆ ಮಾತನಾಡಬೇಡಿ. ಬೆಂಗಳೂರು ಡ್ರಗ್ಸ್ ಬಗ್ಗೆ ಮಾತ್ರ ಮಾತನಾಡಿ’ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಮುಂದಿನ ದಿನದಲ್ಲಿ ಸಾಕ್ಷಿ ಸಮೇತ ಆಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಪೊಲೀಸರು ಕೂಡ ಗಂಭೀರವಾಗಿ ತನಿಖೆ ಮಾಡಿಲ್ಲ. ವಿಚಾರಣೆ ಮಾಡಿಲ್ಲ ಎಂದು ಪೊಲೀಸ್ ತನಿಖೆಯ ಮೇಲೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಪ್ರಶಾಂತ್ ಸಂಬರಗಿ ಹೇಳಿದ ಮಾಜಿ ಸಿಎಂ ಯಾರು..? ಯಾರಿಂದ ಅವರಿಗೆ ಕರೆ ಬಂದಿತ್ತು..? ಮಾಜಿ ಸಿಎಂ ಅಂದ್ರೆ ಸಿದ್ದರಾಮಯ್ಯ ಅವರಾ..? ಅಥವಾ ಹೆಚ್ ಡಿ ಕುಮಾರಸ್ವಾಮಿ ಅವರಾ? ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.

