ಅನುಶ್ರೀಗೆ ಬ್ಲಡ್, ಹೇರ್ ಫಾಲಿಕ್ ಟೆಸ್ಟ್ ಮಾಡಿಲ್ಲ – ಇಂದ್ರಜಿತ್ ಲಂಕೇಶ್ ಆರೋಪ!
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಎಗ್ಗಿಲ್ಲದಂತೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಪತ್ರಕರ್ತ ಇಂದ್ರಜಿತ್ ಲಂಕೇಶ್ ಮತ್ತೊಮ್ಮೆ ಈ ಬಗ್ಗೆ ಧ್ವನಿ ಎತ್ತಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ನಿರೂಪಕಿ ಅನುಶ್ರೀ ಹೆಸರು ತಳುಕು ಹಾಕಿಕೊಂಡಿದ್ದು ಈ ಬಗ್ಗೆ ಇಂದ್ರಜಿತ್ ಲಂಕೇಶ್ ಪ್ರಶ್ನಾರ್ಹ ಹೇಳಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,” ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀ ಹೆಸರು ಇದ್ದು ಆದರೆ ಈಕೆಯ ವಿಚಾರಣೆ ಮಾಡದಿರಲು ರಾಜಕಾರಣಿಗಳಿಂದ ಒತ್ತಡ ಹೇರಿದ್ದಾರೆ. ಅನುಶ್ರೀಗೆ ಯೂರಿನ್, ಬ್ಲಡ್, ಹೇರ್ ಫಾಲಿಕ್ ಟೆಸ್ಟ್ ಮಾಡಬೇಕಿತ್ತು. ಆದರೆ ಮಾಡಿಲ್ಲ. ಅನುಶ್ರೀ ವಿಚಾರದಲ್ಲಿ ರಾಜಕೀಯ ಒತ್ತಡ ಇತ್ತು. ಮತ್ತೆ ಟೆಸ್ಟ್ಗೆ ಒಳಪಡಿಸಬೇಕು” ಎಂದಿದ್ದಾರೆ.
“ರಾಜಕಾರಣಿ ಹಾಗೂ ನಿರ್ದೇಶಕರು, ನಟರ ಮಕ್ಕಳು ಇನ್ನೂ ಹಲವರು ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಕೊರೊನಾ 2ನೇ ಅಲೆ ನಂತರ ಪಾರ್ಟಿಗಳು ಹೆಚ್ಚಾಗುತ್ತಿವೆ. ಸಿಸಿಬಿ ಸ್ಟೇಟ್ ಮೆಂಟ್ ತಗೊಂಡವ್ರು ಈ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದಾರೆ. ಸಿಸಿಬಿಗೆ ಮತ್ತೆ ನಾನು ಮಾಹಿತಿ ನೀಡಬಲ್ಲೆ. 2ನೇ ಅಲೆ ನಂತರದ ಪಾರ್ಟಿ ಬಗ್ಗೆ ಮಾಹಿತಿ ಕೊಡಬಲ್ಲೆ. ಕಾನೂನಾತ್ಮಕವಾಗಿ ಡ್ರಗ್ಸ್ ಪೆಡ್ಲರ್ಗೆ ಹೆಚ್ಚು ಶಿಕ್ಷೆ ಆಗಬೇಕು. ಡ್ರಗ್ಸ್ ಸೇವನೆ ಮಾಡಿದವರಿಗೆ ಕಡಿಮೆ ಪ್ರಮಾಣದ ಶಿಕ್ಷೆ ಇದೆ ಎಂದಿದ್ದಾರೆ” ಎಂದು ಆರೋಪ ಮಾಡಿದ್ದಾರೆ.
ಡ್ರಗ್ಸ್ ಸೇವನೆ ಮಾಡ್ತಿರೋರು ಯೂತ್ಸ್. ಕೋಟಿ ಕೋಟಿ ವ್ಯಾಪಾರ ನಡೆಯುತ್ತೆ. ಡ್ರಗ್ಸ್ ಸೇವನೆ ಮಾಡೋರು ಹಾಗೂ ಡ್ರಗ್ಸ್ ಡೀಲಿಂಗ್ ಮಾಡೋರ ಮಧ್ಯೆ ವ್ಯತ್ಯಾಸವಿದೆ. ಮೆಡಿಕಲ್ ಸ್ಕ್ಯಾಮ್ ನನಗೆ ಕಾಣಿಸ್ತಿದೆ. ಪೆಡ್ಲರ್ಗಳು ಹಣವನ್ನ ಡಂಪ್ ಮಾಡ್ತಾರೆ. ಇಷ್ಟೆಲ್ಲ ನಡೆದ್ರು ಇನ್ನೂ ಸೆಲೆಬ್ರೆಟಿಗಳ ಪಾರ್ಟಿ ನಿಂತಿಲ್ಲ ಎಂದರು.

