ಕಾಂಗ್ರೆಸ್‌ ಎಂದಿಗೂ ಪರಿಣಾಮಕಾರಿ ಪರ್ಯಾಯ ಪಕ್ಷವಾಗಿಲ್ಲ: ಕೈ ಮುಖಂಡ ಕಪಿಲ್‌ ಸಿಬಲ್‌

“ಕಾಂಗ್ರೆಸ್ ಪಕ್ಷವು ದೇಶದಲ್ಲಿ ಪರಿಣಾಮಕಾರಿ ಪರ್ಯಾಯ ಪಕ್ಷವೇ ಆಗಿರಲಿಲ್ಲ. ದೇಶದ ಜನತೆ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ಒಂದು ಉತ್ತಮ ಪರ್ಯಾಯ ಎಂದೂ ಭಾವಿಸಲಿಲ್ಲ” ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ 70 ಸ್ತಾನಗಳಿಗೆ ಸ್ಪರ್ಧಿಸಿ, 19 ಸ್ಥಾನಗಳನ್ನು ಗೆದ್ದು ಹೀನಾಯ ಸೋಲು ಕಂಡ ಬಳಿಕ ಮಾತನಾಡಿರುವ ಕಪಿಲ್‌ ಸಿಬರ್, “ಬಿಹಾರ ಹಾಗೂ ಉತ್ತರ ಪ್ರದೇಶ ದೇಶದ ಬಹುದೊಡ್ಡ ರಾಜ್ಯಗಳು. ಆದರೆ ಈ ಎರಡೂ ರಾಜ್ಯಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪರ್ಯಾಯ ಪಕ್ಷವಾಗಿಯೇ ಇಲ್ಲ. ದೇಶದಲ್ಲಿ ನಡೆಯುವ ಚುನಾವಣೆಗಳ ರೂಪುರೇಷೆ ಬದಲಾಗಿದೆ. ಚುನಾವಣೆಗಳು ಅಧ್ಯಕ್ಷೀಯ ಮಾದರಿಯಾಗಿ ಪರಿವರ್ತನೆಯಾಗಿದೆ. ಹಾಗಾಗಿ ಇಂದು ನಾವು ಕಾಂಗ್ರೆಸ್ ಕುಸಿಯುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು” ಎಂದು ಹೇಳಿದ್ದಾರೆ.

“ಬಿಹಾರ ವಿಧಾನಸಭೆ ಹಾಗೂ ಇತರೆ ರಾಜ್ಯಗಳ ಉಪಚುನಾವಣೆಯಲ್ಲಿ ನಮ್ಮ ಇತ್ತೀಚಿನ ಸಾಧನೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಭಿಪ್ರಾಯಗಳನ್ನು ಕೇಳಬೇಕಾದ ಅಗತ್ಯವಿಲ್ಲ. ಆತ್ಮಾವಲೋಕನದ ಸಮಯ ಮುಗಿದಿದೆ. ಪಕ್ಷದ ಪುನರುಜ್ಜೀವನಕ್ಕಾಗಿ ಅನುಭವಿ ಮನಸ್ಸು, ಅನುಭವಿ ಕೈಗಳು ಹಾಗೂ ರಾಜಕೀಯದ ವಾಸ್ತವಾಂಶವನ್ನು ಅರಿತವರ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.

“ಆರು ವರ್ಷಗಳಿಂದ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಂಡಿಲ್ಲ. ಈಗ ಆತ್ಮಾವಲೋಕನ ಮಾಡಿಕೊಳ್ಳುತ್ತದೆ ಎನ್ನುವ ಭರವಸೆ ಇಲ್ಲ.  ಸಾಂಸ್ಥಿಕವಾಗಿ ಏನೇನು ತಪ್ಪುಗಳಿದೆ ಎನ್ನುವುದು ನನಗೆ ಗೊತ್ತು. ನಮ್ಮಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಗಳಿವೆ. ಆದರೆ ಕಾಂಗ್ರೆಸ್‌ ನಾಯಕರು ಉತ್ತರಗಳನ್ನು ಗುರುತಿಸಲು ಸಿದ್ಧರಿಲ್ಲ” ಎಂದು ಸಿಬಲ್ ಹೇಳಿದ್ದಾರೆ.


ಇದನ್ನೂ ಓದಿ: ಮಂಡ್ಯ ಡಿಸಿಸಿ ಬ್ಯಾಂಕ್‌ ಚುಣಾವಣೆ: ಕಾಂಗ್ರೆಸ್‌ ಸೋಲಿಸಲು BJP ಮೊರೆಹೋದ JDS

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights