ಮಂಡ್ಯ ಡಿಸಿಸಿ ಬ್ಯಾಂಕ್ ಚುಣಾವಣೆ: ಕಾಂಗ್ರೆಸ್ ಸೋಲಿಸಲು BJP ಮೊರೆಹೋದ JDS
ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯ ನವೆಂಬರ್ 17 ರಂದು ನಡೆಯಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಧ್ಯಕ್ಷ ಸ್ಥಾನ ದೊರಕದಂತೆ ಮಾಡುವ ಉದ್ದೇಶದಿಂದ ಜೆಡಿಎಸ್ ಮತ್ತೆ ಬಿಜೆಪಿಯ ನೆರವು ಕೋರಿದೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರಲ್ಲಿ ಹಾಲಿ ಎಂಟು ಮಂದಿ ಕಾಂಗ್ರೆಸ್ ನವರಿದ್ದಾರೆ. ನಾಲ್ವರು ಜೆಡಿಎಸ್ನವರಿದ್ದಾರೆ. ಹಾಗಾಗಿ ಕಾಂಗ್ರೆಸ್ನ ಬಲವೇ ಹೆಚ್ಚಗಿದೆ. ಈ ಹಿನ್ನಲೆಯಲ್ಲಿ ಮೂವರು ಸರ್ಕಾರಿ ನಾಮನಿರ್ದೇಶಿತರ ಬೆಂಬಲ ಪಡೆಯಲು ಜೆಡಿಎಸ್ ಬಿಜೆಪಿಯ ನೆರವು ಕೋರಿದೆ. ಆದರೂ, ಬಿಜೆಪಿ ಬೆಂಬಲ ಪಡೆದರೂ ಜೆಡಿಎಸ್ಗೆ ಏಳು ನಿರ್ದೇಶಕರಷ್ಟೇ ಆಗಲಿದ್ದಾರೆ. ಹಾಗಾಗಿ ಕಾಂಗ್ರೆಸ್ ಪ್ರತಿನಿಧಿಸುವ ಒಬ್ಬ ನಿರ್ದೇಶಕರ ಮನವೊಲಿಸಿ ಬೆಂಬಲ ಪಡೆಯಲು ಜೆಡಿಎಸ್ ಮುಂದಾಗಿದೆ ಎಂದು ಹೇಳಲಾಗಿದೆ.
ಮಂಡ್ಯದಲ್ಲಿ ಒಕ್ಕಲಿಗರ ಪ್ರಭಲ್ಯ ಹೆಚ್ಚಾಗಿದೆ. ಹಾಗಾಗಿ ಇಲ್ಲಿ ಕಾಂಗ್ರೆಸ್ ಗೆದ್ದರೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರ ವರ್ಚಸ್ಸು ಹೆಚ್ಚಲಿದೆ. ಇಲ್ಲಿ ಗೆಲುವು ಸಾಧಿಸುವುದರೊಂದಿಗೆ ಶಿವಕುಮಾರ್ ರಾಜಕೀಯ ಸ್ಥಾನಮಾನವನ್ನು ಗಟ್ಟಿಮಾಡಿಕೊಳ್ಳದಂತೆ ತಡೆಯುವುದು ಜೆಡಿಎಸ್ನ ಯೋಜನೆಯಾಗಿದೆ. ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಿವಕುಮಾರ್ ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು ಆ ಸಮುದಾಯದ ಮತದಾರರ ನೆಲೆಯನ್ನೇ ಗುರಿಯಾಗಿಸಿಕೊಂಡಿದ್ದಾರೆ.
ಮಂಡ್ಯ ಡಿಡಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್ಗೆ ದೊರಕದಂತೆ ತಡೆಯಲಿ ಜೆಡಿಎಸ್ ಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರದ ನಾಮನಿರ್ದೇಶಿತರ ಬೆಂಬಲ ಕೋರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರನ್ನು ಸಂಪರ್ಕಿಸಿದ್ದಾರೆ.
ಕಳೆದ ವರ್ಷ ಕೆಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ವಿರೋಧ ತೋರಿದ್ದ ಕಾರಣ ಜೆಡಿಎಸ್ ಜೊತೆ ಮೈತ್ರಿಗೆ ಕೆಲವು ಬಿಜೆಪಿ ನಾಯಕರುವಿರೋಧ ವ್ಯಕ್ತಪಡಿಸಿದ್ದಾರೆ. ಅಂತಹ ಯಾವುದೇ ಮೈತ್ರಿಯು ಶೀಘ್ರದಲ್ಲೇ ನಡೆಯಲಿರುವ ಪಂಚಾಯತ್ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ಥಳೀಯ ಬಿಜೆಪಿ ನಾಯಕರು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡರಿಂದಲೂ ಸಮಾನ ಅಂತರ ಕಾಪಾಡಿಕೊಳ್ಳುವುದು ಈ ಒಕ್ಕಲಿಗ ಪ್ರಾಬಲ್ಯದ ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿಗೆ ತನ್ನ ನೆಲೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ.”ನಾವು ನಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದೇವೆ. ಆದರೆ ಪಕ್ಷವು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ” ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
Read Also: ನೆಯಾಗಿದ್ದ ಭತ್ತಕ್ಕೆ ಗೊಬ್ಬರ ಹಾಕಿದ ಕೃಷಿ ಸಚಿವ ಬಿ.ಸಿ.ಪಾಟೀಲ್; ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್

