ಜೆಲ್ಲಿಫಿಶ್ ಗಿಂತಲೂ ಹೆಚ್ಚು ಮಾಸ್ಕ್: ಸಮುದ್ರವನ್ನು ಕಲುಶಿತಗೊಳಿಸುತ್ತಿರುವ ಕೊರೊನವೈರಸ್ ತ್ಯಾಜ್ಯ

ಕೊರೊನ ವೈರಸ್ ನಿಂದ ಉತ್ಪಾದನೆಯಾಗುವ ತ್ಯಾಜ್ಯ ಸಮುದ್ರ ಮಾಲಿನ್ಯಕ್ಕೆ ಕಾರಣವಾಗಿ ಅದು ಸಮುದ್ರ ಜಲಚರಗಳ ಜೀವಕ್ಕೆ ಹಾನಿಯುಂಟುಮಾಡಲಿದೆ ಎಂದು ಪರಿಸರವಾದಿಗಳು ಎಚ್ಚರಿಸುತ್ತಲೇ ಬಂದಿದ್ದರು.

ಈಗ ಫ್ರಾನ್ಸ್ ದೇಶದ ಎನ್ ಜಿ ಒ ಒಂದು ಸಮುದ್ರದಲ್ಲಿ ರಾಶಿಗಟ್ಟಲೆ ಶೇಖರಗೊಂಡಿರುವ ಕೋವಿಡ್ ತ್ಯಾಜ್ಯದ ಮಾಸ್ಕ್ ಗಳನ್ನು ಹೊರತೆಗೆಯಲು ಶ್ರಮಿಸುತ್ತಿದೆ. ಮೆಡಿಟರೇನಿಯನ್ ಸಮುದ್ರದಲ್ಲಿ ಕೈಗವಚಗಳು, ಮಾಸ್ಕ್ ಗಳು, ಸ್ಯಾನಿಟೈಸರ್ ಬಾಟೆಲ್ ಗಳು ಈಗ ಹಿಂದಿನ ತ್ಯಾಜ್ಯಗಳಾದ ಬಳಸಿ ಎಸೆಯುವ ಕಪ್ ಗಳು, ಅಲ್ಯುಮಿನಿಯಮ್ ಕ್ಯಾನ್ ಗಳ ಜೊತೆ ಸೇರಿರುವುದನ್ನು ಸಂಸ್ಥೆಯ ಜಫ್ರಿ ಪೆಲ್ಟಿಯರ್ ಕಂಡು  ಹೇಳಿರುವುದಾಗಿ ದ ಗಾರ್ಡಿಯನ್ ವರದಿ ಮಾಡಿದೆ.

ಇಲ್ಲಿ ಸಿಕ್ಕಿರುವ ಮುಖಕವಚ ಮತ್ತು ಕೈಗವಚಗಳ ರಾಶಿ ಊಹಿಸಲೂ ಅಸಾಧ್ಯ ಎಂದಿದ್ದಾರೆ ಪೆಲ್ಟಿಯರ್. ಕೊರೊನ ತಡೆಯಲು ಬಳಕೆ ಮಾಡಿ ಎಸೆಯುವ ಪ್ಲಾಸ್ಟಿಕ್ ವಸ್ತುಗಳ ಮೊರೆ ಹೋಗಿರುವುದು ಆತಂಕಕಾರಿ ಎನ್ನುತ್ತಾರೆ.

ಫ್ರಾನ್ಸ್ ಒಂದರಲ್ಲೇ ಅಧಿಕಾರಿಗಳು ಎರಡು ಬಿಲಿಯನ್ ಬಳಸಿ ಬಿಸಾಕುವ ಮಾಸ್ಕ್ ಗಳನ್ನು ಆರ್ಡರ್ ಮಾಡಿದ್ದರು. 450 ವರ್ಷಗಳ ಕಾಲ ಕರಗದೆ ಉಳಿಯಬಹುದಾದ ಈ ಮಾಸ್ಕ್ ಗಳು ಪರಿಸರದ ಟೈಮ್ ಬಾಂಬ್ ಎನ್ನುವ ಅವರು ಇದು ನಮ್ಮ ಭೂಮಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎನ್ನುತ್ತಾರೆ.

ಇಡೀ ವಿಶ್ವ ಕೊರೊನ ತ್ಯಾಜ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಈಗಾಗಲೇ ಮಾಲಿನ್ಯಕ್ಕೆ ಪ್ಲಾಸ್ಟಿಕ್ ಕೊಡುಗೆ ಅಪಾರವಾಗಿದ್ದು, ಈಗ ಕೊರೊನ ತಡೆಯಲು ಬಳಸುವ ಮಾಸ್ಕ್ ಗಳು ಸಮುದ್ರ ಜೀವಿಗಳ ಮೇಲೆ ಪರಿಣಾಮ ಬೀರಿ ಅದು ಇಡೀ ಇಕಾಲಜಿಯ ಸಮತೋಲನಕ್ಕೆ ಭೀಕರ ಸಮಸ್ಯೆ ಉಂಟುಮಾಡುವುದನ್ನು ತಡೆಯಲು ಎಚ್ಚೆತ್ತುಕೊಳ್ಳಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights