ಕರಿಯ ಜನಾಂಗದ ಆಟಗಾರರಿಗೆ ನಿಂದನೆ : ಅಸಮಾಧಾನಗೊಂಡ ಫುಟ್ಬಾಲ್ ಅಭಿಮಾನಿಗಳು!

ಯೂರೋ 2020 ಫೈನಲ್‌ನಲ್ಲಿ ಇಟಲಿ ವಿರುದ್ಧ ಇಂಗ್ಲೆಂಡ್ ಸೋತ ಬಳಿಕ ಇಂಗ್ಲೆಂಡ್‌ನ ಮೂವರು ಕರಿಯ ಜನಾಂಗದ ಆಟಗಾರರು ನಿಂದನೆಗೆ ಗುರಿಯಾಗಿದ್ದಾರೆ.

ಇಂಗ್ಲೆಂಡ್ ಆಟಗಾರರಾದ ಮಾರ್ಕಸ್ ರಾಶ್‌ಫೋರ್ಡ್, ಜಾಡಾನ್ ಸ್ಯಾಂಚೊ ಮತ್ತು ಬುಕಾಯೊ ಸಾಕಾ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾರೆ. ಪಂದ್ಯದಲ್ಲಿ ಮೂವರೂ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲ್ ಬಾರಿಸಲು ವಿಫಲರಾಗಿದ್ದರು. ಪಂದ್ಯದಲ್ಲಿ ಇಟಲಿ 3-2ರಿಂದ ಗೆದ್ದಿತ್ತು. ಹೀಗಾಗಿ ಈ ಮೂವರು ಆಟಗಾರರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲಾಗಿದೆ.

ಆದರೆ ಜನಾಂಗೀಯ ನಿಂದನೆ ಮಾಡಿದ ಫೋಸ್ಟರ್ ಗಳನ್ನು ತಕ್ಷಣ ತೆಗೆದು ಹಾಕದ ಕಾರಣ ಸಾಮಾಜಿಕ ಜಾಲತಾಣ ದೈತ್ಯರಾದ ಫೇಸ್ಬುಕ್ ಮತ್ತು ಟ್ವಿಟರ್ ವಿರುದ್ಧ ಫುಟ್ಬಾಲ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಇದರ ಹಿಂದೆ ಯಾರಿದ್ದಾರೆ ಅನ್ನೋದು ನಮಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಇಂಥ ಕೆಟ್ಟ ನಡೆಗಳನ್ನು ಯಾವತ್ತೂ ಬೆಂಬಲಿಸುವುದಿಲ್ಲ. ಆಟಗಾರರನ್ನು ನಿಂದಿಸಿದವರಿಗೆ ಕಠಿಣ ಶಿಕ್ಷೆ ನೀಡಲು ಬೇಕಾದ ಎಲ್ಲದಕ್ಕೂ ನಾವು ಬೆಂಬಲಿಸುತ್ತೇವೆ,” ಎಂದು ಫುಟ್ಬಾಲ್ ಅಸೋಸಿಯೇಶನ್ ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights