ವಾಟ್ಸಾಪ್‌ ಮೇಲೆ ಬಿಜೆಪಿ ಪ್ರಭಾವವಿದೆ: ಸುಳ್ಳು ಸುದ್ದಿ ಹರಡಲು ಬಳಸಿಕೊಳ್ಳುತ್ತಿದೆ: ಕಾಂಗ್ರೆಸ್‌

ಅಮೆರಿಕಾದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯು ಬಿಜೆಪಿ ಮತ್ತು ಫೇಸ್‌ಬುಕ್‌ ನಡುವಿನ ಸಂದಭದ ಬಗ್ಗೆ ವರದಿ ಮಾಡಿದ ನಂತರ, ಫೇಸ್‌ಬುಕ್‌ ಹಾಗೂ ಬಿಜೆಪಿ ವಿರುದ್ಧ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ, ಆನ್‌ಲೈನ್‌ ಮೆಸೆಂಜರ್ ಅಪ್ಲಿಕೇಷನ್‌ ವಾಟ್ಸಾಪ್‌ ಮೇಲೂ ಕೂಡ ಬಿಜೆಪಿ ನಿಯಂತ್ರಣ ಸಾಧಿಸಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಆರೋಪಿಸಿದ್ದಾರೆ.

“ಅಮೆರಿಕದ ಟೈಮ್ ನಿಯತಕಾಲಿಕೆಯು ವಾಟ್ಸಪ್-ಬಿಜೆಪಿ ಸಂಪರ್ಕವನ್ನು ಬಹಿರಂಗಪಡಿಸಿದ್ದು, 40 ಕೋಟಿ ಭಾರತೀಯರು ಇದನ್ನು ಬಳಸುತ್ತಿದ್ದಾರೆ. ಮೋದಿ ಸರ್ಕಾರದ ಅನುಮೋದನೆ ಸಿಕ್ಕೊಡನೆ ವಾಟ್ಸಪ್ ಭಾರತದಲ್ಲಿ ತನ್ನ ಪಾವತಿ ಸೇವೆ ಪ್ರಾರಂಭಿಸಲಿದೆ ಎಂದು ಹೇಳಿದೆ.  ಅಲ್ಲದೆ, ಮುಂದಿನ ದಿನಗಳಲ್ಲಿ ಸರ್ಕಾರದ ಅನುಮೋದನೆಗೆ ಅಗತ್ಯವಿರುವ ಕ್ರಮಗಳನ್ನು ಪೂರ್ಣಗೊಳಿಸಲು ಮಾಡಲು ವಾಟ್ಸಪ್ ಮುಂದಾಗಿದೆ. ಅನುಮೋದನೆ ದೊರೆತ ಕೂಡಲೆ ಪಾವತಿ ಕಾರ್ಯಗಳನ್ನು  ಆರಂಭಿಸಲಿದೆ ಎಂದು ವರದಿ ಮಾಡಿದೆ.

ಈ ವರದಿಯನ್ನು ಉಲ್ಲೇಖಿಸಿರುವ ರಾಹುಲ್‌ಗಾಂಧಿ, “ಭಾರತದಲ್ಲಿರುವ ವಾಟ್ಸಾಪ್‌ ಕಂಪನಿಯ ನಾಯಕತ್ವದ ತಂಡದಲ್ಲಿ ಒಬ್ಬರಿಗಿಂತ ಹೆಚ್ಚು ಜನರು ತಮ್ಮ ವೃತ್ತಿಪರ ಪ್ರಯತ್ನಗಳಲ್ಲಿ ಆಡಳಿತಾರೂ BJP ಪರವಾಗಿ ಪಕ್ಷಪಾತ ಮಾಡುತ್ತಿದ್ದಾರೆ” ಎಂದು ಆರೋಪಸಿದ್ದಾರೆ.

ವಾಟ್ಸಪ್ ಫೇಸ್‌ಬುಕ್ ಇಂಕ್ ಸಂಸ್ಥೆಯ ಅಂಗವಾಗಿದೆ. ಹಾಗಾಗಿ ಬಿಜೆಪಿ ಮತ್ತು ವಾಟ್ಸಾಪ್‌ ಸಂಸ್ಥೆಯ ಒಡನಾಟದ ಬಗ್ಗೆ ಕಾಂಗ್ರೆಸ್ ಫೇಸ್‌ಬುಕ್‌ಗೆ‌ ಪತ್ರ ಬರೆದಿದೆ.

ಈ ಹಿಂದೆ ದೇಶದಲ್ಲಿ ದೇಶದಲ್ಲಿ ಫೇಸ್‌ಬುಕ್ ಮತ್ತು ವಾಟ್ಸಪ್ ಅನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಯಂತ್ರಿಸುತ್ತಿದೆ. ಮತದಾರರ ಮೇಲೆ ಪ್ರಭಾವ ಬೀರಲು ಅವರು ಈ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನಕಲಿ ಸುದ್ದಿ ಮತ್ತು ದ್ವೇಷ ಸಂದೇಶ ಹರಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.


ಇದನ್ನೂ ಓದಿ: ಯಾವುದೇ ರಾಜಕೀಯ ಸ್ಥಾನ ಅಥವಾ ಪಕ್ಷವನ್ನು ಲೆಕ್ಕಿಸದೇ ಹಿಂಸಾತ್ಮಕ ಪೋಸ್ಟ್‌ಗಳನ್ನು ನಿರ್ಬಂಧಿಸುತ್ತೇವೆ: ಫೇಸ್‌ಬುಕ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.