ಯಾವುದೇ ರಾಜಕೀಯ ಸ್ಥಾನ ಅಥವಾ ಪಕ್ಷವನ್ನು ಲೆಕ್ಕಿಸದೇ ಹಿಂಸಾತ್ಮಕ ಪೋಸ್ಟ್‌ಗಳನ್ನು ನಿರ್ಬಂಧಿಸುತ್ತೇವೆ: ಫೇಸ್‌ಬುಕ್‌

ಫೇಸ್‌ಬುಕ್‌ಅನ್ನು ಬಿಜೆಪಿ ನಿಯಂತ್ರಿಸುತ್ತಿದೆ. ಬಿಜೆಪಿಯ ದ್ವೇಷ ಹರಡುವ ಪೋಸ್ಟ್‌ಗಳನ್ನು ನಿರ್ಬಂಧಿಸುವುದಿಲ್ಲ ಎಂದು ಅಮೆರಿಕಾದ ಮಾಧ್ಯಮವೊಂದು ವರದಿ ಮಾಡಿದೆ. ಈ ವರದಿಗೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್‌, ವರದಿಯನ್ನು ನಿರ್ಲಕ್ಷಿಸಿದ್ದು, ನಾವು “ಯಾವುದೇ ರಾಜಕೀಯ ಪಕ್ಷ ಅಥವಾ ಸ್ಥಾನಗಳ ಸಂಬಂಧವನ್ನು ಪರಿಗಣಿಸದೆ, ದ್ವೇಷ ಭಾಷಣದ ಪೋಸ್ಟ್‌ಗಳ ವಿರುದ್ಧ  ನೀತಿಗಳನ್ನು ಜಾರಿಗೊಳಿಸುತ್ತೇವೆ” ಎಂದು ಹೇಳಿಕೊಂಡಿದೆ.

“ಹಿಂಸಾಚಾರವನ್ನು ಪ್ರಚೋದಿಸುವ ದ್ವೇಷದ ಮಾತು ಅಥವಾ ಪೋಸ್ಟ್‌ಗಳನ್ನು ನಾವು ನಿಷೇಧಿಸುತ್ತೇವೆ. ಯಾರೊಬ್ಬರ ರಾಜಕೀಯ ಸ್ಥಾನ ಅಥವಾ ಪಕ್ಷದ ಸಂಬಂಧವನ್ನು ಪರಿಗಣಿಸದೆ ನಾವು ಈ ನೀತಿ/ನಿರ್ಬಂಧಗಳನ್ನು ಜಾಗತಿಕವಾಗಿ ಜಾರಿಗೊಳಿಸುತ್ತೇವೆ. ನಾವು ನಮ್ಮ ನೀತಿಗಳನ್ನು ಜಾರಿಗೊಳಿಸುವಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ. ನ್ಯಾಯ ಮತ್ತು ನಿಖರತೆಯನ್ನು ಖಾತ್ರಿ ಪಡಿಸುವಂತಹ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.

“ಭಾರತೀಯ ರಾಜಕೀಯ ಬಿಜೆಪಿಯೊಂದಿಗೆ ಫೇಸ್‌ಬುಕ್‌ ಸಂಬಂಧಹೊಂದಿದೆ. ಬಿಜೆಪಿ ಕಾರ್ಯಕರ್ತರ ದ್ವೇಷ-ಭಾಷಣ, ಘರ್ಷಣೆ-ವಿವಾದಾತ್ಮಕ ಪೋಸ್ಟ್‌ಗಳನ್ನು ಹಾಗೂ ಖಾತೆಗಳನ್ನು ನಿಷೇಧಿಸದೇ ಇರುವ ಫೇಸ್‌ಬುಕ್ ನಿಯಮಗಳು ಮತ್ತು ಕ್ರಮಗಳನ್ನು ಕಂಪನಿಯ ಕಾರ್ಯನಿರ್ವಾಹಕರೊಬ್ಬರು ವಿರೋಧಿಸಿದ್ದಾರೆ” ಎಂಬ ಶೀರ್ಷಿಕೆಯ ಲೇಖನದಲ್ಲಿ, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಂದ ದ್ವೇಷದ ಮಾತು ಮತ್ತು ಆಕ್ಷೇಪಾರ್ಹ ಪೋಸ್ಟ್‌ಗಳ ಸಂದರ್ಭದಲ್ಲಿ ಫೇಸ್‌ಬುಕ್ ಬೇರೆ ರೀತಿಯಲ್ಲಿ ಕಾಣುತ್ತದೆ ಎಂದು ಅಮೆರಿಕಾದ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಬಿಜೆಪಿ ಕಾರ್ಯಕರ್ತರ ಫೇಸ್‌ಬುಕ್‌ ನೀತಿಯ ಉಲ್ಲಂಘನೆಗಳಿಗೆ ಶಿಕ್ಷೆ ನೀಡುವುದು “ಭಾರತದಲ್ಲಿ ಕಂಪನಿಯ ವ್ಯವಹಾರ ಭವಿಷ್ಯವನ್ನು ಹಾನಿಗೊಳಿಸುತ್ತದೆ” ಎಂದು ಸಾಮಾಜಿಕ ಮಾಧ್ಯಮ ಕಾರ್ಯನಿರ್ವಾಹಕರೊಬ್ಬರು ಹೇಳಿದ್ದಾರೆ. ಫೇಸ್‌ಬುಕ್ ಬಿಜೆಪಿಯ ಕಡೆಗೆ “ವಿಶಾಲವಾದ ಒಲವು ಹೊಂದಿದೆ” ಎಂದು ಜರ್ನಲ್ ವರದಿ ಮಾಡಿದೆ.

ಈ ವಿಷಯವು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ತಿಕ್ಕಾಟದ ಫ್ಲಾಶ್ ಕಾರಣವಾಗಿದೆ. ಈ ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್‌, ಸಾಮಾಜಿಕ ಜಾಲತಾಣವನ್ನು ಬಿಜೆಪಿಯು ನಿಯಂತ್ರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದೆ.

ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, “ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಮತದಾರರ ಮೇಲೆ ಪ್ರಭಾವ ಬೀರಲು ಫೇಸ್‌ಬುಕ್ ಮತ್ತು ವಾಟ್ಸಾಪ್ ಬಳಸಿ “ಸುಳ್ಳು ಸುದ್ದಿ” ಹರಡಿದ್ದಾರೆ. ಈ ಮೂಲಕ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ” ಎಂದು ಆರೋಪಿಸಿ ಟ್ವೀಟ್‌ ಮಾಡಿದ್ದರು.

ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಮುಖ್ಯಸ್ಥರಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, “ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು ಖಂಡಿತವಾಗಿಯೂ ಈ ವರದಿಗಳ ಬಗ್ಗೆ ಫೇಸ್‌ಬುಕ್‌ನಿಂದ ಪ್ರತಿಕ್ರಿಯೆ ಕೇಳಲು ಬಯಸುತ್ತದೆ ಮತ್ತು ಭಾರತದಲ್ಲಿ ದ್ವೇಷ-ಭಾಷಣದ ಬಗ್ಗೆ ಅವರು ಏನು ಮಾಡಲು ಮುಂದಾಗಿದ್ದಾರೆಂದು ಖಚಿತ ಪಡಿಸಬೇಕು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಾರ್ಚ್ 2018 ರಲ್ಲಿ, ಯುಕೆಯಲ್ಲಿರುವ ಕೇಂಬ್ರಿಡ್ಜ್ ಸಂಸ್ಥೆಯ ಅನಾಲಿಟಿಕಾವು – 2016 ರಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಸಹಾಯ ಮಾಡಲು ಲಕ್ಷಾಂತರ ಫೇಸ್ಬುಕ್ ಬಳಕೆದಾರರ ಡೇಟಾವನ್ನು ಫೇಸ್‌ಬುಕ್‌ ಕದ್ದಿದೆ ಎಂದು ಆರೋಪಿಸಿತ್ತು. ಇದಾದ ನಂತರ, ಭಾರತದ ಸಂಸದೀಯ ಚುನಾವಣೆಗೂ ಒಂದು ವರ್ಷ ಮುಂಚೆ ಕಾಂಗ್ರೆಸ್‌ ಮತ್ತು ಬಿಜೆಪಿ ಫೇಸ್‌ಬುಕ್‌ನೊಂದಿಗೆ ವ್ಯಾಪಾರ ನಡೆಸಿವೆ. ಭಾರತದ ಚುನಾವಣೆಗೂ ಸಂಪರ್ಕವಿದೆ ಎಂದು ಹೇಳಿತ್ತು.

2010 ರಲ್ಲಿ ಬಿಹಾರ ಚುನಾವಣೆಯ ಸಂದರ್ಭದಲ್ಲಿ ಫೇಸ್‌ಬುಕ್‌ ಕಂಪನಿಯು ತನ್ನ ಸೇವೆಗಳನ್ನು ಭಾರತದ ರಾಜಕೀಯ ಪಕ್ಷವೊಂದಕ್ಕೆ ಒದಗಿಸಿದೆ ಎಂದು ಕೇಂಬ್ರಿಡ್ಜ್ ಅನಾಲಿಟಿಕಾ ವೆಬ್‌ಸೈಟ್ ತಿಳಿಸಿದೆ. ಕೇಂಬ್ರಿಡ್ಜ್ ಅನಾಲಿಟಿಕಾದ ಭಾರತೀಯ ಅಂಗಸಂಸ್ಥೆ, ಒವ್ಲೆನೊ ಬ್ಯುಸಿನೆಸ್ ಇಂಟೆಲಿಜೆನ್ಸ್ (ಒಬಿಐ), ಬಿಜೆಪಿ, ಕಾಂಗ್ರೆಸ್ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಅನ್ನು ಗ್ರಾಹಕರಾಗಿ ಉಲ್ಲೇಖಿಸಿದೆ. ಈ ಆರೋಪವನ್ನು ಕಾಂಗ್ರೆಸ್‌ ತಿರಸ್ಕರಿಸಿದೆ.


ಇದನ್ನೂ ಓದಿ: ಫೇಸ್‌ಬುಕ್‌ಅನ್ನು ಬಿಜೆಪಿ ನಿಯಂತ್ರಿಸುತ್ತಿದೆ; RSSನ ದ್ವೇಷದ ಪೋಸ್ಟ್‌ಗಳಿಗೆ FB ನೆರವಾಗಿದೆ: ವರದಿ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights