ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆಟಗಾರರಿನಿಗೆ ಕೊರೊನಾ!

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ 23 ಕ್ರಿಕೆಟಿಗರಲ್ಲಿ ಒಬ್ಬ ಆಟಗಾರನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಆಗಸ್ಟ್ 4 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯಕ್ಕೆ 20 ದಿನಗಳು ಬಾಕಿ ಇದ್ದು, ಇಂದು (ಜುಲೈ 15) ಭಾರತ ತಂಡ ಡರ್ ಹ್ಯಾಮ್ ಗೆ ತೆರಳುತ್ತಿದೆ. ಆದರೆ ಟೀಮ್ ಇಂಡಿಯಾದ ಒಬ್ಬ ಆಟಗಾರನಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದರಿಂದ ಸೋಂಕಿತನನ್ನು ಹೊರತುಪಡಿಸಿ ಇನ್ನುಳಿದ ಆಟಗಾರರು ಡರ್ ಹ್ಯಾಮ್ ಗೆ ಪ್ರಯಾಣ ಬೆಳಸಲಿದ್ದಾರೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹೇಳಿದೆ.

“ಹೌದು, ಒಬ್ಬ ಆಟಗಾರನಿಗೆ ಪ್ರಸ್ತುತ ರೋಗಲಕ್ಷಣವಿಲ್ಲದಿದ್ದರೂ ಧನಾತ್ಮಕತೆಯನ್ನು ಪರೀಕ್ಷಿಸಿದ್ದಾನೆ. ಅವರು ಸಂಪರ್ಕತಡೆಯಲ್ಲಿದ್ದಾರೆ. ಗುರುವಾರ ಭಾರತೀಯ ತಂಡದೊಂದಿಗೆ ಡರ್ಹಾಮ್‌ಗೆ ಪ್ರಯಾಣಿಸುವುದಿಲ್ಲ” ಎಂದು ಬಿಸಿಸಿಐ ತಿಳಿಸಿದೆ.

 

Spread the love

Leave a Reply

Your email address will not be published. Required fields are marked *