ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಚಾಲೆಂಜ್ ಹಾಕಿದ ಇಂದ್ರಜಿತ್ ಲಂಕೇಶ್!
ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್ ರಾಜಿ ವಿಚಾರ ಮತ್ತೆ ರಾದ್ಧಾಂತ ಸೃಷ್ಟಿಸಿದೆ. ‘ದರ್ಶನ್ 25 ಕೋಟಿ ವಂಚನೆ ಆಗಿದೆ ಅಂತೀರಾ..? ಹಾಗಾದ್ರೆ ಅದನ್ನು ಸುಮ್ಮನೆ ಬಿಟ್ಟುಬಿಟ್ರಾ? ನಿಮಗೆ ಅರುಣಕುಮಾರಿ ಗೊತ್ತೇ ಇಲ್ಲ ಅಂದ್ರೆ ಆಕೆಯನ್ನು ಯಾಕೆ ಕರೆಸಿಕೊಂಡಿದ್ದಿದ್ರಿ? ಏನ್ ನಡೆದಿದೆ ಅಂತ ಹೇಳಬೇಕು. ಈ ವಿಚಾರ ಗೊತ್ತಾಗಬೇಕು’ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಇಂದು ಸುದ್ದಿಗಾರರ ಮುಂದೆ ಮಾತನಾಡಿದ ಇಂದ್ರಜಿತ್, ” ಮಾತ್ರವಲ್ಲದೇ ಸ್ಟಾರ್ ನಟರೊಬ್ಬರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಮೈಸೂರಿನ ಸಂದೇಶ್ ನಾಗರಾಜ್ ಮಾಲೀಕತ್ವದ ಹೋಟೆಲಿನಲ್ಲಿ ಈ ಘಟನೆ ನಡೆದಿದೆ. ಇದರ ಸಂಪೂರ್ಣ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಸ್ಟಾರ್ ನಟ, ಹೋಟೇಲಿನಲ್ಲಿ ದಲಿತ ವೇಟರ್ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಇಂದ್ರಜಿತ್ ಆರೋಪಿಸಿದ್ದಾರೆ.
ಮಾತ್ರವಲ್ಲದೇ ಈ ಬಗ್ಗೆ ದರ್ಶನ್ ವಿರುದ್ಧ ಆರೋಪಿಸಿ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರು ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ದೂರು ನೀಡಿದ್ದಾರೆ.
ಸಂದೇಶ್ ನಾಗರಾಜ್ ಹೋಟೆಲಿನಲ್ಲಿ ನಟರೊಬ್ಬರು ದಲಿತ ಸಮುದಾಯದ ವೇಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ವೇಟರ್ ಗೆ ಕಣ್ನೂಗಳಿಗೆ ಹಾನಿಯಾಗಿದೆ. ಸಿಸಿಟಿವಿ ದೃಶ್ಯ ಇದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಎಂದು ಇಂದ್ರಜಿತ್ ಆಗ್ರಹಿಸಿದ್ದಾರೆ.
ಮೈಸೂರು ಪೊಲೀಸರು ನೀವೇನ್ ಬಳೆ ತೊಟ್ಟಿದ್ದಾರಾ? ಮೈಸೂರಿನ ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಸ್ಟೇಷನ್ ಗಳಾಗಿವೆ. ಯಾರು ಕ್ರಮ ಕೈಗೊಳ್ಳಬೇಕೋ ಅವರು ಬಳೆ ತೊಟ್ಟುಕೊಂಡು ಕುಳಿತಿದ್ದಾರೆ. ಸಾಮಾನ್ಯರ ಸಮಸ್ಯೆಗಳು ಸೆಟ್ಲಮೆಂಟ್ ಗಳ ಮೂಲಕ ಕೊನೆಗೊಳ್ಳುತ್ತಿವೆ. ಸೆಲೆಬ್ರಿಟಿಗಳು ಮಾತನಾಡುವ ಶೈಲಿ ನೋಡಿದರೆ ಇದೆಲ್ಲವೂ ನಿಜ ಅನ್ಸಿಸುತ್ತಿದೆ ಎಂದು ಆಕ್ರೋಶಗೊಂಡಿದ್ದಾರೆ.
ಅವರು ಪ್ರತಿಬಾರಿ ರಾಯರ ಮಠಕ್ಕೆ ಹೋಗುತ್ತಾರೆ. ಅವರ ಮೇಲೆ ಆಣೆ ಮಾಡಿ ಹೇಳಲಿ ಸಪ್ಲೈಯರ್ ಮೇಲೆ ಹಲ್ಲೆ ಮಾಡಿಲ್ಲ ಎಂದು ಚಾಲೆಂಜ್ ಹಾಕಿದ್ದಾರೆ. ಆದರೆ ನಟನ ಹೆಸರನ್ನು ಮಾತ್ರ ಇಂದ್ರಜಿತ್ ಮನವಿಯಲ್ಲಿ ಉಲ್ಲೇಖ ಮಾಡಿಲ್ಲ.
ಈ ಪ್ರಕರಣಕ್ಕೆ ನ್ಯಾಯ ಸಿಗಲಿ ಎನ್ನುವುದು ನನ್ನ ಉದ್ದೇಶ ಎಂದು ಇಂದ್ರಜಿತ್ ಹೇಳಿದ್ದಾರೆ.