ದೆಹಲಿ ಕೋರ್ಟ್ ಕಾಂಪ್ಲೆಕ್ಸ್ನಲ್ಲಿ ಗುಂಡು ಹಾರಿಸಿ ಕೊಲೆ : ವಕೀಲರು ಸೇರಿ ನಾಲ್ವರ ಬಂಧನ!

ದೆಹಲಿಯ ದ್ವಾರಕಾ ನ್ಯಾಯಾಲಯದ ವಕೀಲರ ಕೊಠಡಿಯೊಳಗೆ 45 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಸೇರಿದಂತೆ ನಾಲ್ವರನ್ನು ಬುಧವಾರ ಬಂಧಿಸಲಾಗಿದೆ.

ಮೃತರನ್ನು ಸ್ವಿಕರ್ ಲುತ್ರಾ ಎಂದು ಗುರುತಿಸಲಾಗಿದೆ. ಲುತ್ರಾ ನಕಲಿ ನಾಣ್ಯ ದಂಧೆಯಲ್ಲಿ ಭಾಗಿಯಾಗಿದ್ದು, 2016 ರಲ್ಲಿ ದೆಹಲಿ ಪೊಲೀಸರ ವಿಶೇಷ ಕೋಶದಿಂದ ಆತನನ್ನು ಬಂಧಿಸಲಾಗಿತ್ತು. ಸೋಮವಾರ ರಾತ್ರಿ 8.30 ರ ಸುಮಾರಿಗೆ ನಡೆದ ಗುಂಡಿನ ಘಟನೆಯಲ್ಲಿ ಇವರು ಮೃತಪಟ್ಟಿದ್ದಾರೆ.

ಪ್ರಕರಣದಲ್ಲಿ ಅರುಣ್ ಶರ್ಮಾ, ರೋಹಿತ್ ಮತ್ತು ದರ್ಶನ್, ಪ್ರದೀಪ್‌ನನ್ನು ಬುಧವಾರ ಬಂಧಿಸಲಾಗಿದೆ.

ವಕೀಲ ಅರುಣ್ ಶರ್ಮಾ ಅವರ ಕ್ಲೈಂಟ್ ಆಗಿದ್ದ ಪ್ರಕರಣವೊಂದರಲ್ಲಿ ಲುತ್ರಾ ಜಾಮೀನಿನ ಮೇಲೆ ಹೊರಗಿದ್ದರು. ಲುತ್ರಾ ಅವರನ್ನು ಸಹವರ್ತಿ ಪ್ರದೀಪ್ ಮತ್ತು ಆಟೋರಿಕ್ಷಾ ಚಾಲಕ ದರ್ಶನ್ ಭೇಟಿ ಮಾಡಲು ಹೋಗಿದ್ದಾರೆ. ನಂತರ ಶರ್ಮಾ ತನ್ನ ಚಾಲಕ ರೋಹಿತ್‌ಗೆ ಕರೆ ಮಾಡಿ, ಸೋಮವಾರ ರಾತ್ರಿ 11.30 ರ ಸುಮಾರಿಗೆ ಐದು ಜನರು ನ್ಯಾಯಾಲಯದಲ್ಲಿ ಚೇಂಬರ್ ಸಂಖ್ಯೆ 444 ಒಳಗೆ ಮದ್ಯಪಾನ ಮಾಡಲು ಪ್ರಾರಂಭಿಸಿದ್ದಾರೆ.

ಈ ಸಮಯದಲ್ಲಿ ಲುತ್ರಾ ಅವರಿಗೆ ಗುಂಡು ಹಾರಿಸಲಾಗಿದೆ. ಬೆನ್ನಿಗೆ ತೀವ್ರ ಗಾಯವಾಗಿ ಸ್ಥಳದಲ್ಲಿದ್ದ ಜನರು ಲುತ್ರಾ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಲೂತ್ರಾ ಬದುಕುಳಿಯಲಿಲ್ಲ.

ಲುತ್ರಾ ಅವರನ್ನು ಉದ್ಯಾನವನದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಸಿಸಿಟಿವಿ ದೃಶ್ಯಾವಳಿಗಳು ಕೆಲವು ಜನರು ಕೊಠಡಿಯ ಹೊರಗೆ ರಕ್ತವನ್ನು ಸ್ವಚ್ಚಗೊಳಿಸುತ್ತಿರುವುದನ್ನು ತೋರಿಸಿದೆ. ಮೃತನ ದೇಹವನ್ನು ಪುರುಷರು ಎಳೆಯುವುದನ್ನು ಇದು ತೋರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿ ದೂ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ದ್ವಾರಕಾ) ಸಂತೋಷ್ ಕುಮಾರ್ ಮೀನಾ ಹೇಳಿದ್ದಾರೆ.

 

Spread the love

Leave a Reply

Your email address will not be published. Required fields are marked *