ಫ್ಯಾಕ್ಟ್‌ಚೆಕ್ : ತಂದೆಯೊಬ್ಬ ತನ್ನ ಸ್ವಂತ ಮಗಳನ್ನೆ ನಾಲ್ಕನೇ ಪತ್ನಿಯಾಗಿ ಸ್ವೀಕರಿಸಿದ್ದು ನಿಜವೇ?

ತಂದೆ-ಮಗಳ ಸಂಬಂಧ ಅನ್ನೋದು ಅದು ಜನುಮ ಜನುಮದ ಅನಬಂಧ ಅಂತಾನೇ ಹೇಳಲಾಗುತ್ತದೆ. ಆದರೆ, ಈ ಘಟನೆಯಲ್ಲಿ ತಂದೆಯೊಬ್ಬರು ತನ್ನ ಸ್ವಂತ ಮಗಳನ್ನೆ ಮದುವೆಯಾಗಿದ್ದಾರೆ. ಅದೂ ಕೂಡ 4 ನೇ ಮದುವೆಯಾಗಿದ್ದು, ತಮ್ಮ ಪುತ್ರಿಯನ್ನು 4ನೇ ಪತ್ನಿಯಾಗಿ ಸ್ವೀಕರಿಸಿರುವ ಈ ಘಟನೆ  ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಮಗಳು ಕೂಡ ತನ್ನ ತಂದೆಯೊಂದಿಗೆ ಮದುವೆಯಾದ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಅವಳು ತನ್ನ ತಂದೆಯ ನಾಲ್ಕನೇ ಹೆಂಡತಿಯಾಗಿದ್ದಾಳೆ. ಇವರಿಬ್ಬರ ಮದುವೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೇಂದ್ರ ಬಿಜೆಪಿ ಸರ್ಕಾರವು ದೇಶಾದ್ಯಂತ ಏಕರೂಪದ ಸಾಮಾನ್ಯ ನಾಗರಿಕ ಸಂಹಿತೆಯನ್ನು ತರಲು ಪ್ರಯತ್ನಿಸುತ್ತಿರುವುದು ಯಾಕೆಂದು ಈಗಲಾದರೂ ಅರ್ಥ ಮಾಡಿಕೊಳ್ಳಿ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವೈರಲ್ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳನ್ನು 4ನೇ ಪತ್ನಿಯಾಗಿ ಮದುವೆಯಾದ ವಿಡಿಯೋ ‘ಝೆನ್ ಟಿವಿ ವ್ಲಾಗ್ಸ್’ ನಲ್ಲಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಜುಲೈ 2022 ರಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿರುವುದು ಕಂಡು ಬಂದಿದೆ.  ‘ರಬಿಯಾ ಅಮೀರ್ ಖಾನ್’ ಸಂದರ್ಶನ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಇದು ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್ ಆಗಿದೆ.

ಶೀರ್ಷಿಕೆಯ ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, 29 ಮೇ 2021 ರಂದು ‘ದಿ ಪಾಕಿಸ್ತಾನ್ ಅಬ್ಸರ್ವರ್’ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿ ಲಭ್ಯವಾಗಿದೆ. ಅದರಲ್ಲಿ ‘ನಾನು ನನ್ನ ವಿದ್ಯಾರ್ಥಿನಿಯನ್ನು 4ನೇ ಪತ್ನಿಯಾಗಿ ಮದುವೆಯಾಗಿದ್ದೇನೆ. ಆದರೆ, ನಾನು ವಿದ್ವಾಂಸ ಅಲ್ಲ (ಇಸ್ಲಾಮಿಕ್ ಕಾನೂನಿನ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರುವವನು) ಎಂದು ಅಮೀರ್ ಖಾನ್ ಹೇಳಿದ್ದಾರೆ,’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ದಂಪತಿಗಳು ಟಿಕ್ ಟಾಕ್‌ನಲ್ಲಿ ಹೆಚ್ಚು ಜನಪ್ರಿಯರಾಗಿರುವ ಕಾರಣಕ್ಕೆ ಪಾಕಿಸ್ತಾನಿ ಪತ್ರಕರ್ತ ಮೊಯಿನ್ ಜುಬೇರ್ ದಂಪತಿಗಳನ್ನು ಸಂದರ್ಶಿಸಿದ್ದಾರೆ. ಆ ಸಂದರ್ಶನದ ಆಧಾರದಲ್ಲಿ ‘ಡೈಲಿ ಪಾಕಿಸ್ತಾನ್’ ವೆಬ್ ಸೈಟ್ ನಲ್ಲಿ ಸುದ್ದಿ ಪ್ರಕಟಿಸಲಾಗಿದೆ. ಇದು ಮೇಲಿನ ಮಾಹಿತಿಯನ್ನು ಮಾತ್ರ ಒಳಗೊಂಡಿದೆ.

ರಬಿಯಾ ಅವರು ‘ರಾಬಿಯಾ ಅಮೀರ್’ ಹೆಸರಿನ Instagram ಖಾತೆಯನ್ನು ಹೊಂದಿದ್ದು, ಇವರು ಪಾಕಿಸ್ತಾನದ ಲಾಹೋರ್‌ನ ನಿವಾಸಿಗಳಾಗಿದ್ದಾರೆ. ರಬಿ ಟೇಸ್ಟಿ ಫುಡ್ ಮತ್ತು ವ್ಲಾಗ್ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಿದ್ದಾರೆ, ಅಲ್ಲಿ ದಂಪತಿಗಳು ನೀಡಿದ ಅಡುಗೆ ಮತ್ತು ಸಂದರ್ಶನಗಳನ್ನು ನೋಡಬಹುದು.

ವೈರಲ್ ವಿಡಿಯೋದಲ್ಲಿ ಕಂಡು ಬರುವ ದಂಪತಿಗಳು,ಪಾಕಿಸ್ತಾನಕ್ಕೆ ಸೇರಿದವರು. ಇವರಿಗೂ ಭಾರತಕ್ಕೂ ಯವುದೇ ಸಂಬಂಧವಿಲ್ಲ. ಅಲ್ಲದೆ ಭಾರತದಲ್ಲಿ ಚರ್ಚೆಯಾಗುತ್ತಿರುವ ಏಕರೂಪ ನಾಗಕರಿಕ ಸಂಹಿತೆ (UCC)ಯ ಹಿನ್ನಲೆಯಲ್ಲಿ, ವಿವಾದ ಸೃಷ್ಟಿಸಲು ಈ  ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ತಂದಯೇ ತನ್ನ ಮಗಳನ್ನು ನಾಲ್ಕನೇ ಹೆಂಡತಿಯಾಗಿ ಸ್ವೀಕರಿಸಿದ್ದಾರೆ ಎಂಬುದು ಸುಳ್ಳು, ವೈರಲ್ ವಿಡಿಯೋದಲ್ಲಿ ಕಂಡು ಬರುವ ದಂಪತಿಗಳಿಗೆ, ಮೂಲದಲ್ಲಿ ತಂದೆ-ಮಗಳ ಸಂಬಂಧವಿಲ್ಲ. ಶಿಕ್ಷಕ ಅಮೀರ್ ಖಾನ್‌ನನ್ನು ಆತನ ವಿದ್ಯಾರ್ಥಿ ರಾಬಿಯಾ ನಾಲ್ಕನೇ ಹೆಂಡತಿಯಾಗಿ ವಿವಾಹವಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ ಕನ್ನಡದ ಕೆಲವು ಮಾಧ್ಯಮಗಳು ಈ ಸುದ್ದಿಯನ್ನು ತಿರುಚಿ ತಂದೆ ಮಗಳು ಮದುವೆಯಾಗಿದ್ದಾರೆ ಎಂದು ತಪ್ಪಾದ ಶೀರ್ಷಿಕೆಯೊಂದಿಗೆ ಸುದ್ದಿಯನ್ನು ಪ್ರಕಟಿಸಿವೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿರ್ಬಂಧಿಸಲಾಗತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights