ರಾಜ್ಯಸಭಾ ಸಂಸದ, ಮಾತೃಭೂಮಿ ಸಂಸ್ಥೆಯ ಎಂಡಿ ವೀರೇಂದ್ರ ಕುಮಾರ್ ನಿಧನ!

ಕೇರಳದ ಸಮಾಜವಾದಿ ನಾಯಕ, ರಾಜ್ಯಸಭಾ ಸಂಸದ ಮತ್ತು ಮಾತೃಭೂಮಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವೀರೇಂದ್ರ ಕುಮಾರ್(83) ಅವರು ನಿಧನರಾಗಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಅವರನ್ನು ಗುರುವಾರ ರಾತ್ರಿ 8.30 ಕ್ಕೆ ಕೋಝೀಕೋಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಲ್ಪ ಸಮಯದ ನಂತರ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಮಗ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ.

ಕೇರಳದ ಪ್ರಸಿದ್ಧ ರಾಜಕಾರಣಿ ಮತ್ತು ಸಾಹಿತ್ಯಿಕ ವ್ಯಕ್ತಿ ವೀರೇಂದ್ರ ಕುಮಾರ್ ಅವರು ರಾಷ್ಟ್ರೀಯ ಮತ್ತು ರಾಜ್ಯ ರಾಜಕಾರಣ ಹಾಗೂ ಮಾಧ್ಯಮ ಮತ್ತು ಸಾಹಿತ್ಯ ಜಗತ್ತಿನಲ್ಲಿ ತಮ್ಮ ಪ್ರಭಾವವನ್ನು ಬೀರಿದ್ದಾರೆ.  ಕೋಝಿಕೋಡ್‌ನಿಂದ ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಇವರು ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

2010 ರಲ್ಲಿ ಅವರ ಪ್ರವಾಸ ಕಥನ ‘ಹೈಮಾವತಾ ಭೋವಿಲ್’ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದರು. ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅವರ ಸಾಹಿತ್ಯ ಕೃತಿಗಳಿಗಾಗಿ 100ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಜಯಪ್ರಕಾಶ್ ನಾರಾಯಣ್ ನೇತೃತ್ವದ ರಾಜಕೀಯ ಚಳವಳಿಯ ಭಾಗವಾಗಿ ವೀರೇಂದ್ರ ಕುಮಾರ್ ರಾಜಕೀಯ ಪ್ರವೇಶಿಸಿದರು. ಕೇರಳದ ಮಲಬಾರ್ ಪ್ರದೇಶದಲ್ಲಿ ಜೆಪಿ ಚಳವಳಿಯನ್ನು ಬಲಪಡಿಸಿದರು. ಅವರು ತಮ್ಮ ರಾಜಕೀಯ ಜೀವನವನ್ನು ಸಮಾಜವಾದಿ ಪಕ್ಷದೊಂದಿಗೆ ಪ್ರಾರಂಭಿಸಿದರು. ಅವರು ಜನತಾದಳ ಮತ್ತು ಜನತಾದಳ (ಯುನೈಟೆಡ್ ಜೊತೆಗೆ ಇದ್ದರು.

ವಿರೇಂದ್ರ ಕುಮಾರ್ ಅವರು 1987 ರಲ್ಲಿ ತಮ್ಮ ಸ್ವಕ್ಷೇತ್ರ ಕಲ್ಪೆಟ್ಟದಿಂದ ಕೇರಳ ವಿಧಾನಸಭೆಗೆ ಆಯ್ಕೆಯಾದರು ಮತ್ತು 1991 ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದರು. ಅವರು ಕೇರಳದಲ್ಲಿ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 11 ಮತ್ತು 13 ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಎರಡು ವರ್ಷ ಕೇಂದ್ರ ಸಚಿವರಾಗಿದ್ದರು. 1997 ರಲ್ಲಿ ಕೆಲವು ತಿಂಗಳು ರಾಜ್ಯ ಸಚಿವರೂ ಆಗಿದ್ದರು.

ಅವರ ರಾಜಕೀಯ ಕಾರ್ಯಕ್ಷೇತ್ರ ಹೆಚ್ಚಾಗಿ ಉತ್ತರ ಪ್ರದೇಶಕ್ಕೆ ಸೀಮಿತವಾಗಿತ್ತು. ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಮಾತ್ರ ಪಾಲಕ್ಕಾಡ್‌ನಿಂದ ಸ್ಪರ್ಧಿಸಿ ಸಿಪಿಐ(ಎಂ)ನ ಎಂಬಿ ರಾಜೇಶ್ ವಿರುದ್ಧ ಸೋತರು. ಸೋಲಿನ ಹೊರತಾಗಿಯೂ, ಅವರು ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದರು ಮತ್ತು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.

ಅವರು ರಾಜ್ಯದ ರಾಜಕೀಯದಲ್ಲಿ ಮಾತ್ರವಲ್ಲದೆ ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಛಾಪು ಮೂಢಿಸಿದ್ದಾರೆ. ನವೆಂಬರ್ 1979 ರಲ್ಲಿ, ವೀರೇಂದ್ರ ಕುಮಾರ್ ಅವರು ಹೋರಾಟದ ಹಾದಿಯಲ್ಲಿ ಸಾಗುತ್ತಿದ್ದಾಗ 1979 ರಲ್ಲಿ ಮಾತೃಭೂಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಕಂಪನಿ ಲಿಮಿಟೆಡ್‌ನ ನಿರ್ದೇಶಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದರು. ಕಳೆದ ಕೆಲವು ದಶಕಗಳಲ್ಲಿ, ಮಾತೃಭೂಮಿ ಚಿಮ್ಮಿ ಬೆಳೆದಿದೆ, ಬದಲಾಗುತ್ತಿರುವ ಕಾಲದಲ್ಲಿ ಹೊಸತನವನ್ನು ಹೊಂದಿದೆ ಮತ್ತು ಈಗ ಹಲವಾರು ಪತ್ರಿಕೆ ಆವೃತ್ತಿಗಳು, ಟಿವಿ ಚಾನೆಲ್ ಮತ್ತು ಅನೇಕ ಆನ್‌ಲೈನ್ ಮಾದ್ಯಮಗಳನ್ನು ನಡೆಸುತ್ತಿದೆ.

1992-1993, 2003-2004 ಮತ್ತು 2011-2012ರ ನಡುವೆ ಅವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights