ಅಕ್ರಮ-ಸಕ್ರಮ ಸುಗ್ರೀವಾಜ್ಞೆಗೆ ಸಹಿ ಹಾಕಿದ ರಾಜ್ಯಪಾಲ ವಜುಬಾಯಿ ವಾಲಾ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಲಾಗಿರುವ ಮನೆಗಳನ್ನು ಸಕ್ರಮಗೊಳಿಸುವ ಬಿಡಿಎ ಕಾಯ್ದೆ ತಿದ್ದುಪಡಿಗಾಗಿ  ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.

ಮನೆ ನಿರ್ಮಿಸಿ 12 ವರ್ಷ ಆಗಿದ್ದರೆ ಮಾತ್ರ ಸಕ್ರಮಕ್ಕೆ ಅವಕಾಶ ನೀಡಲಾಗುತ್ತದೆ. ಆಯಾ ಜಾಗದ ಮಾರ್ಗಸೂಚಿ ದರದ ಪ್ರಕಾರ ದಂಡ ಶುಲ್ಕ ಪಾವತಿಸಬೇಕಾಗುತ್ತದೆ. 12 ವರ್ಷಗಳಿಂದ ಈಚೆಗೆ ಮನೆ ನಿರ್ಮಿಸಿದ್ದರೆ ಈ ಯೋಜನೆ ಅನ್ವಯವಾಗುವುದಿಲ್ಲ. ಇಂತಹವರ ವಿರುದ್ಧ ಇನ್ನೆರಡು ವರ್ಷಗಳಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಡಿಎ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.

20/30 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ ಶೇ.10ರಷ್ಟುದಂಡ ಕಟ್ಟಿಸಿಕೊಂಡು ಸಕ್ರಮ ಮಾಡಲು ಅವಕಾಶ ನೀಡಲಾಗಿದೆ. 30/40 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ ಶೇ.20ರಷ್ಟು,  40/60 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ ಶೇ.40ರಷ್ಟು ಮತ್ತು  50/80 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ ಶೇ.50 ರಷ್ಟು ದಂಡ ಕಟ್ಟಿಸಕ್ರಮ ಮಾಡಲು ಅವಕಾಶ ನೀಡಲಾಗಿದೆ.

ಸುಮಾರು 45 ಸಾವಿರದಷ್ಟುಇರಬಹುದಾದ ಮನೆಗಳನ್ನು ಸಕ್ರಮಗೊಳಿಸಲು ಮಾರ್ಗಸೂಚಿ ಆಧಾರದ ಮೇಲೆ ಕನಿಷ್ಠ ಶುಲ್ಕ ವಿಧಿಸಲಾಗುವುದು. ಇದರಿಂದ ಸರ್ಕಾರಕ್ಕೆ ಸುಮಾರು 10 ಸಾವಿರ ಕೋಟಿ ಆದಾಯ ಬರುವ ನಿರೀಕ್ಷಿಸಲಾಗಿದೆ. ಮೀಸಲು ಪಾರ್ಕ್, ಆಟದ ಮೈದಾನ, ರಸ್ತೆಗಳು ಮುಂತಾದವು ಇದರ ವ್ಯಾಪ್ತಿಗೆ ಬರುವುದಿಲ್ಲ.

ಕೆಲವು ತಿಂಗಳುಗಳ ಹಿಂದೆ ಮಾರತಹಳ್ಳಿ ಬಳಿಯಲ್ಲಿದ್ದ ಸ್ಲಂ ನಿವಾಸಿಗಳನ್ನು ಬ್ಲಾಂಗದೇಶದ ಅಕ್ರಮ ನಿವಾಸಿಗಳು ಎಂದು ಏಕಾಏಕಿ ಅವರು ಗುಡಿಸಲುಗಳನ್ನು ಕಿತ್ತೊಗೆಯಲ್ಲಾಗಿತ್ತು. ಅಲ್ಲಿನ ನಿವಾಸಿಗಳ ಗುಡಿಸಲುಗಳನ್ನು ಕಿತ್ತೆಸುಯುವಲ್ಲಿ ಅಲ್ಲಿಯ ಶಾಸಕ ಅರವಿಂದ ಲಿಂಬಾವಳಿಯವರ ಪಾತ್ರವಿದೆ ಎಂದೂ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂತಹ ಬಡ ಜನರು ಗುಡಿಸಲುಗಳನ್ನು ಕಿತ್ತೆಸೆದಿದ್ದ ಸರ್ಕಾರ, ಬಿಡಿಎ ಜಮೀನಿನಲ್ಲಿ ಅಕ್ರಮವಾಗಿ ಬಿಲ್ಡಿಂಗ್‌ ಕಟ್ಟಿಕೊಂಡಿರುವ ಬಿಲ್ಡರ್‌ಗಳಿಗೆ ಸಕ್ರಮ ಮಾಡಿಕೊಡಲು ಸುಗ್ರೀವಾಜ್ಞೆ ತರಲು ಮುಂದಾಗಿದೆ. ಲಾಕ್‌ಡೌನ್‌ ಮತ್ತು ಕೊರೊನಾ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಉಳ್ಳವರ ಖಜಾನೆ ತುಂಬಿಸಿ, ಅವರಿಗೆ ಬೇಕಾದ ರೀತಯ ಕಾನೂನುಗಳನ್ನು ತರಲು ಮುಂದಾಗಿರುವುದು ಪ್ರಜಾತಂತ್ರವನ್ನು ಪ್ರಶ್ನೆ ಮಾಡುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights