ಫ್ಯಾಕ್ಟ್‌ಚೆಕ್: ಸಂಸತ್‌ನಲ್ಲಿ ಮೋದಿ ಭಾಷಣಕ್ಕೆ ನಿತಿನ್ ಗಡ್ಕರಿ ಮೇಜು ತಟ್ಟಲಿಲ್ಲವಂತೆ! ಹೌದೆ?

ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉತ್ತರಿಸಿದರು. ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರವಾಗಿ ತೀವ್ರ ವಾಗ್ದಾಳಿ ನಡೆಸಿದರು.

ಸಂಸತ್ತಿನಲ್ಲಿ ವಂದನಾ ನಿರ್ಣಯಕ್ಕೆ ಉತ್ತರ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಮೋದಿ ಭಾಷಣದ ನಂತರ BJP ಸಂಸದರು ತಮ್ಮ ಮೇಜುಗಳನ್ನು ತಟ್ಟುವ ಮೂಲಕ ಮೋದಿಯವರನ್ನು ಶ್ಲಾಘಿಸುತ್ತಿರುವುದನ್ನು ಕಾಣಬಹುದು, ಆದರೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಪ್ಪಾಳೆ ತಟ್ಟದ್ದೆ ಹಾಗೆಯೇ ಕುಳಿತು ಏನನ್ನು ಪ್ರತಿಕ್ರಿಯಿಸದೆ ಮೌನವಾಗಿರುತ್ತಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಪ್ಪಾಳೆ ತಟ್ಟಿಲ್ಲ” ಗಡ್ಕರಿ ಅವರು ‘ರಂಗಭೂಮಿ’ಯಲ್ಲಿ ತೊಡಗಿಕೊಳ್ಳದ ಕಾರಣ ಪ್ರಧಾನಿ ಮೋದಿ ಅವರ ಮಾತಿಗೆ ಮೇಜು ತಟ್ಟಿಲ್ಲ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಸಂಸತ್‌ನಲ್ಲಿ ನಿತಿನ್ ಗಡ್ಕರಿ ಮೋದಿ ಭಾಷಣಕ್ಕೆ ಮೇಜು ತಟ್ಟಿ ಬೆಂಬಲ ನೀಡಿಲ್ಲ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾನಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರವ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, Sansad TV ಯ ಪರಿಶೀಲಿಸಿದ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಲಾದ ವೀಡಿಯೊದ ದೀರ್ಘ ಆವೃತ್ತಿಯಲ್ಲಿ, ಗಡ್ಕರಿ ಅವರು ಇತರ ಸಂಸದರು ಮ್ತು ಮಂತ್ರಿಗಳೊಂದಿಗೆ ಟೇಬಲ್  ಬಡಿಯುವುದನ್ನು ನೋಡಬಹುದು, ಆದರೆ ಟೇಬಲ್ ಬಡಿಯುವಾಗ ಕೆಲವು ಸೆಕೆಂಡುಗಳ ಕಾಲ ಗಡ್ಕರಿ ವಿರಾಮ ತೆಗೆದುಕೊಳ್ಳುತ್ತಾರೆ. ಇದೇ ಸಂದರ್ಭದ ವಿಡಿಯೊವ್ನು ಎಡಿಟ್ ಮಾಡಿ ಮೋದಿ ಭಾಷಣಕ್ಕೆ ಗಡ್ಕರಿ ಟೇಬಲ್ ತಟ್ಟಿಲ್ಲ ಎಂದು ಹಂಚಿಕೊಳ್ಳಲಾಗಿದೆ.

‘ಹತಾಶೆಯ ಕೆಲವರು ಭಾರತದ ಬೆಳವಣಿಗೆಯ ಕಥೆಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ಅವರು 140 ಕೋಟಿ ಭಾರತೀಯರ ಸಾಧನೆಗಳನ್ನು ನೋಡಲು ಸಾಧ್ಯವಿಲ್ಲ. ಆಪತ್ಕಾಲದಲ್ಲಿ ಮೋದಿ ಅವರ ಸಹಾಯಕ್ಕೆ ಬಂದಿದ್ದಾರೆ ಎಂಬುದು ಜನರಿಗೆ ತಿಳಿದಿದೆ. ನಿಮ್ಮ ನಿಂದನೆ ಮತ್ತು ಆರೋಪಗಳನ್ನು ಅವರು ಒಪ್ಪುವುದಿಲ್ಲ. ಜನರು ಮೋದಿಯನ್ನು ನಂಬಿರುವುದು ಪತ್ರಿಕೆಗಳ ಮುಖ್ಯಾಂಶಗಳು ಅಥವಾ ಟಿವಿ ದೃಶ್ಯಗಳಿಂದಲ್ಲ, ಆದರೆ ಜನರ ಸೇವೆಯಲ್ಲಿ ನನ್ನ ಸಮರ್ಪಣೆಯಿಂದಾಗಿ ನಂಬಿಕೆ ಇಟ್ಟಿದ್ದಾರೆ ಎಂಬ ಮೋದಿ ಹೇಳಿಕೆಗೆ ಸಂಸದರು ಚಪ್ಪಾಳೆ ತಟ್ಟಲು ಪ್ರಾರಂಭಿಸುತ್ತಾರೆ.

54 ನಿಮಿಷ ಮತ್ತು 18 ಸೆಕೆಂಡ್‌ಗಳ ವಿಡಿಯೊದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವು ಸಚಿವರು ಮೇಜು ತಟ್ಟುವುದನ್ನು ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದಾಗ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟೇಬಲ್ ತಟ್ಟಿಲ್ಲ ಎಂದು ಎಡಿಟ್ ಮಾಡಿದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಗಡ್ಕರಿ ಮೋದಿ ಅವರ ಉತ್ತರಕ್ಕೆ ಬೆಂಬಲ ಸೂಚಿಸಿ ಮೇಜು ತಟ್ಟಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಟರ್ಕಿ ಭೂಕಂಪದ ಅವಶೇಷಗಳ ನಡುವೆ ನಾಯಿಯೊಂದು ತನ್ನ ಮಾಲೀಕನನ್ನು ಹುಡುಕುತ್ತಿರುವ ಫೋಟೊದ ವಾಸ್ತವವೇನು?


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights