ಬೆಂಗಳೂರಿನಲ್ಲಿ ತಾಯಿ ಮಗನ ದಾರುಣ ಸಾವು : ಮಗನ ಸಾವಿನ ಸುದ್ದಿ ಕೇಳಿ ಅಪಘಾತದಲ್ಲಿ ತಾಯಿ ಮೃತ!

ಮಗನ ಸಾವಿನ ಸುದ್ದಿ ಕೇಳಿದ ತಾಯಿ ಅಪಘಾತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ.

ಲೀಲಾವತಿ ಸಾವಿಗೀಡಾದ ಮಹಿಳೆ. ಈಕೆಯ ಮಗ ಮೋಹನ್ ಗೌಡ ಸ್ನೇಹಿತರೊಂದಿಗಿನ ಮನಸ್ತಾಪದಿಂದ ಇಂದು ಮನೆಯಲ್ಲೇ ಆತ್ಮಹತ್ಯೆ ಗೆ ಯತ್ನಿಸಿದ್ದನು. ತಕ್ಷಣ ವಿಚಾರ ತಿಳಿದ ಸ್ಥಳೀಯರು ಮೋಹನ್ ಗೌಡನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ. ಅಘಾತಕ್ಕೊಳಗಾದ ತಾಯಿ ಲೀಲಾವತಿ ಮಗನ ಸಾವಿನ ವಿಚಾರ ಗೊತ್ತಾದ ತಕ್ಷಣ ಆಸ್ಪತ್ರೆ ಹೊರಗೆ ಓಡಿ ಬಂದಿದ್ದಾರೆ.

ಈ ವೇಳೆ ರಸ್ತೆ ಯಲ್ಲಿ ಬರುತ್ತಿದ್ದ ಕಾರಿಗೆ ಅಡ್ಡ ಬಿದ್ದು ತಾಯಿ ಲೀಲಾವತಿ ಸಾವನ್ನಪ್ಪಿದ್ದಾರೆ. ತಾಯಿ ಲೀಲಾವತಿ ಅಪಘಾತ ಸಂಬಂಧ ವಿಜಯನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಜೊತೆಗೆ ಯುವಕನ ಆತ್ಮಹತ್ಯೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೋಹನ್ ಗೌಡ ಆತ್ಮಹತ್ಯೆಗೆ ನಿಖರವಾದ ಕಾರಣ ಏನು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights