ಬಿಗ್ ಬಾಸ್ ಮನೆಯಲ್ಲಿ ಲ್ಯಾಗ್ ಮಂಜನ ನೋವಿನ ಕಥೆ ಕೇಳಿ ಕಣ್ಣೀರಿಟ್ಟ ಸ್ಪರ್ಧಿಗಳು!

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಆಟ ಜೋರಾಗಿದೆ. ಪ್ರತಿಯೊಂದು ಟಾಸ್ಕ್ ನಲ್ಲೂ ಮನೆಯ ಎಲ್ಲಾ ಸದಸ್ಯರು ತಮ್ಮ ವಯಸ್ಸಿಗೆ ತಕ್ಕಂತೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದರಲ್ಲಿ ಲ್ಯಾಗ್ ಮಂಜನ ಕಾಮಿಡಿ ಎಲ್ಲರಿಗೂ ಖುಷಿ ಕೊಟ್ಟಿದೆ. ಇದರ ಜೊತೆಗೆ ಕಾಮಿಡಿ ಲ್ಯಾಗ್ ಮಂಜ ಹಿಂದೆಂದೂ ಯಾರಿಗೂ ಹೇಳಿಕ್ಕೊಳದ ಜೀವನದ ನೋವಿನ ಕಥೆ ಬಿಗ್ ಬಾಸ್ ನೋಡುಗರ ಕಣ್ಣಲ್ಲಿ ನೀರು ತರಿಸಿದೆ.

ಹೌದು.. ನಿನ್ನೆ ಬಿಗ್ ಬಾಸ್ ಮನೆಯ ಎಲ್ಲಾ ಸದಸ್ಯರು ತಮ್ಮ ಜೀವನದಲ್ಲಿ ಬಹುಮುಖ್ಯವಾಗಿ ನೆನೆದುಕೊಳ್ಳು ವ್ಯಕ್ತಿ ಅಥವಾ ಘಟನೆ ಬಗ್ಗೆ ವಿವರವಾಗಿ ಹೇಳಿಕೊಳ್ಳಬೇಕಿತ್ತು. ಮನೆಯ ಎಲ್ಲಾ ಸದಸ್ಯರೂ ಒಂದೊಂದು ವಿಚಾರಗಳನ್ನು ಹೇಳಿಕೊಳ್ಳುತ್ತಾ ಬಹುತೇಕ ಮಂದಿ ತಮ್ಮ ಪೋಷಕರನ್ನು ನೆನೆದುಕೊಂಡರು.

ಇದರಲ್ಲಿ ಮಂಜ ಹೇಳಿದ ಕೆಲವೊಂದು ವಿಚಾರ ಸ್ಪೂರ್ತಿದಾಯಕವಾಗಿವೆ. “ಮಂಜು ತಾವು ಕಾಮಿಡಿ ಕಿಲಾಡಿಗಳಿಗೆ ಬರುವ ಮುನ್ನ ತುಂಬಾ ಸಂಕಷ್ಟದ ಜೀವನ ನಡೆಸ್ತಾಯಿದ್ರು. ಬಡ ಕುಟುಂಬದಲ್ಲಿ ಬೆಳೆದ ಮಂಜುಗೆ ತಾನು ಏನಾದರು ಮಾಡಬೇಕು ಅನ್ನೋ ಛಲವಿತ್ತು. ಹೀಗಾಗಿ ಬೆಂಗಳೂರಿಗೆ ಬಂದು ಗೆಳೆಯರೊಂದಿಗೆ ವಾಸವಾಗಿದ್ದ. ಪೆಟ್ರೋಲ್ ಬಂಕ್ ಇನ್ನಿತರ ಕೆಲಸಗಳನ್ನು ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ನಾಟಕದಲ್ಲಿ ಆಸಕ್ತಿ ಇರುವುದರಿಂದ ಪ್ರಾಕ್ಟೀಸ್ ಗೆ ಹೋಗುತ್ತಿದ್ದನಂತೆ. ಈ ವೇಳೆ ಆತನಿಗೆ ಬರುತ್ತಿದ್ದ ಹಣ ಕೂಡ ಅಷ್ಟಕಷ್ಟೇ. ಎಷ್ಟೋ ದಿನಗಳ ವರೆಗೆ ಊಟವಿಲ್ಲದೇ ಮಲಗುತ್ತಿದ್ದನಂತೆ ಮಂಜು. ರೂಂ ಗೆಳೆಯರು ಕೆಲವೊಂದು ಬಾರಿ ಈತ ಮನೆಗೋದರೆ ರೂಂ ಬಾಗಿಲು ಕೂಡ ತೆರೆಯುತ್ತಿರಲಿಲ್ಲವಂತೆ. ಬಿರಿಯಾನಿ ಮಾಡಿಕೊಂಡು ಮಂಜುಗೆ ಚೂರು ನೀಡದೇ ಖಾಲಿ ಮಾಡ್ತಾಯಿದ್ರಂತೆ. ಎಲ್ಲರೂ ಬಿರಿಯಾನಿ ತಿನ್ನುವಾಗ ಮಂಜು ಬಾಯಲ್ಲಿ ನೀರು ಬರುತ್ತಿತಂತೆ. ಆದರೂ ಅದನ್ನು ತೋರಿಸಿಕೊಳ್ಳದೇ ಖಾಲಿ ಹೊಟ್ಟೆಯಲ್ಲಿ ಮಲಗುತ್ತಿದ್ದರಂತೆ ಮಂಜು. ಇಂಥಹ ಘಟನೆಗಳು ನನಗೆ ಈ ಮಟ್ಟಕ್ಕೆ ಬೆಳೆಯಲು ಸ್ಪೂರ್ತಿಯಾಗಿವೆ. ಅಂದು ಆ ರೀತಿ ನಡೆದುಕೊಂಡ ನನ್ನ ಗೆಳೆಯರಿಗೆ ನಾನು ಥಾಂಕ್ಸ್ ಹೇಳುತ್ತೇನೆ” ಎಂದು ಹೇಳಿದಾಗ ಮನೆಯ ಎಲ್ಲಾ ಸದಸ್ಯರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.

ಹೀಗೆ ಮನೆಯ ಎಲ್ಲಾ ಸದಸ್ಯರು ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಹಾಗೂ ವ್ಯಕ್ತಿಗಳನ್ನು ನೆನೆದುಕೊಂಡು ಕಣ್ಣೀರಿಟ್ಟರು.

ಒಟ್ಟಿನಲ್ಲಿ ಯಾವಾಗಲೂ ಕಾಮಿಡಿ ಆಗಿ ಇರುತ್ತಿದ್ದ ಬಿಗ್ ಬಾಸ್ ಮನೆ ನಿನ್ನೆ ಮಾತ್ರ ಒಬ್ಬೊಬ್ಬರ ಸಮಸ್ಯೆಗಳು ಹೊರಬರುತ್ತಿದ್ದಂತೆ ದುಖ:ದಿಂದ ಕೂಡಿತ್ತು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights