ವಿವಾಹ ಅತಿಥಿ ಪಟ್ಟಿಯನ್ನು 100ಕ್ಕೇರಿಸಿದ ಯುಪಿ ಸರ್ಕಾರ : ಡಿಜೆ-ಬ್ಯಾಂಡ್ ಬಂದ್!

ಉತ್ತರ ಪ್ರದೇಶ ಸರ್ಕಾರ ವಿವಾಹ ಅತಿಥಿ ಪಟ್ಟಿಯನ್ನು 100 ಕ್ಕೆ ಏರಿಸಿದ್ದು, ಮದುವೆ ಸಮಾರಂಭದಲ್ಲಿ ಡಿಜೆ ಅಥವಾ ಬ್ಯಾಂಡ್‌ಗಳಿಗೆ ಅವಕಾಶವಿಲ್ಲ ಎಂದಿದೆ.

ಹೌದು… ಕೊರೊನಾ ವೈರಸ್ ತೀವ್ರತೆಯನ್ನು ತಗ್ಗಿಸಲು ಸರ್ಕಾರ ಮದುವೆ ಸಮಾರಂಭಗಳಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಿತ್ತಾದರೂ ಕ್ರಮೇಣ ಮದುವೆಗೆ ಕೆಲ ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸದ್ಯ ಉತ್ತರ ಪ್ರದೇಶ ಸರ್ಕಾರ ಮದುವೆ ಅತಿಥಿ ಪಟ್ಟಿಯನ್ನು 100ಕ್ಕೇರಿಸಿದೆ.

ಭಾರತದಲ್ಲಿ ಮತ್ತೊಮ್ಮೆ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಪ್ರಸ್ತುತ ಕೋವಿಡ್ -19 ಪರಿಸ್ಥಿತಿಯನ್ನು ಎದುರಿಸಲು ಕೈಗೊಂಡ ಕ್ರಮಗಳನ್ನು ವಿವರಿಸುವ ಸ್ಥಿತಿ ವರದಿಗಳಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯಗಳನ್ನು ಕೇಳಿದೆ.

ದೆಹಲಿ ಮತ್ತು ಗುಜರಾತ್‌ನಂತಹ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿರುವುದನ್ನ ಗಮನಿಸಿದ ಸುಪ್ರೀಂ ಕೋರ್ಟ್, ಗುಜರಾತ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಿಂದ ಹೊರಗುಳಿಯುತ್ತಿದೆ ಎಂದು ಹೇಳಿದರು.

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಎಂಬಿಬಿಎಸ್ ವಿದ್ಯಾರ್ಥಿಗಳು ಮತ್ತು ದಂತವೈದ್ಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಾಯ ಮಾಡಲು ಆದೇಶ ಹೊರಡಿಸಿದೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಭಾರತದಲ್ಲಿ ಭಾನುವಾರದಿಂದ 44,059 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದು ಈವರೆಗೆ ಒಟ್ಟು 91.39 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights