ನಟ ವಿಜಯ್ ಅಭಿನಯದ ‘ಮಾಸ್ಟರ್‌’ ರಿಲೀಸ್‌ಗೂ ಮೊದಲೇ ಲೀಕ್‌! ವಿಡಿಯೋ ಹಂಚಿಕೊಳ್ಳಬೇಡಿ ಎಂದ ನಿರ್ದೇಶಕ

ತಮಿಳು ನಟ ವಿಜಯ್‌ ಮತ್ತು ವಿಜಯ್ ಸೇತುಪತಿ ಅಭಿನಯದ ಮಾಸ್ಟರ್‌ ಸಿನಿಮಾ ಬಿಡುಗಡೆಗೂ ಎರಡು ದಿನಗಳ ಮುಂಚೆಯೇ ಸೋರಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ಹಲವು ತುಣುಕುಗಳು ಹರಿದಾಡುತ್ತಿದ್ದು, ವಿತರಕರಿಗಾಗಿ ಆಯೋಜಿಸಲಾಗಿದ್ದ ಪ್ರದರ್ಶನದ ವೇಳೆ ರೆಕಾರ್ಡ್‌ ಮಾಡಿ, ಹರಿಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ನಟ ವಿಜಯ್ ಅಭಿನಯದ, ಲೋಕೇಶ್‌ ಕನಗರಾಜ್ ನಿರ್ದೇಶನದ ಮಾಸ್ಟರ್ ಚಿತ್ರ ಜನವರಿ 13 ರಂದು ಜಗತ್ತಿನಾದ್ಯಂತ ರಿಲೀಸ್‌ ಆಗಲಿದೆ. ಸುಮಾರು ಒಂಬತ್ತು ತಿಂಗಳುಗಳ ನಂತರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ತಮಿಳು ಸಿನಿಮಾ ಮಾಸ್ಟರ್‌. ಆದರೆ, ಇದೀಗ ಸಿನಿಮಾ ಲೀಕ್‌ ಆಗಿದ್ದು, ಚಿತ್ರತಂಡ ಎಚ್ಚೆತ್ತುಕೊಂಡಿದೆ.

ಮಾಸ್ಟರ್‌ ತಂಡವು ಒಂದೂವರೆ ವರ್ಷಗಳ ಚಿತ್ರಕ್ಕಾಗಿ ಶ್ರಮಿಸಿದೆ. ನೀವೆಲ್ಲರೂ ಸಿನಿಮಾವನ್ನು ಥಿಯೇಟರ್‌ನಲ್ಲಿಯೇ ಆನಂದಿಸುತ್ತೀರಿ ಎಂಬ ನಂಬಿಕೆ ನಮಗಿದೆ. ಸೋರಿಕೆಯಾಗಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಅಂತಹ ವಿಡಿಯೋಗಳು ನಿಮಗೆ ಕಂಡು ಬಂದಲ್ಲಿ, ಅವುಗಳನ್ನು ನಿರ್ಬಂಧಿಸುವಂತೆ ರಿಪೋರ್ಟ್‌ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿ ನಿರ್ದೇಶಕ ಲೋಕೇಶ್‌ ಕನಗರಾಜ್ ಟ್ವೀಟ್‌ ಮಾಡಿದ್ದಾರೆ.

https://twitter.com/Dir_Lokesh/status/1348665784306982918?s=20

ಕ್ಸೇವಿಯರ್ ಬ್ರಿಟ್ಟೊ ನಿರ್ಮಿಸಿದ ಮಾಸ್ಟರ್, ಏಪ್ರಿಲ್ 9, 2020 ರಂದು ಬಿಡುಗಡೆಯಾಗಬೇಕಿತ್ತು.  ಕೊರೊನಾ ಕಾರಣದಿಂದಾಗಿ ಚಿತ್ರದ ಬಿಡುಗಡೆಯನ್ನು 2021 ಕ್ಕೆ ಮುಂದೂಡಲಾಗಿತ್ತು. ಸಿನಿಮಾದಲ್ಲಿ ನಟ ವಿಜಯ್, ವಿಜಯ್ ಸೇತುಪತಿ, ಮಾಳವಿಕಾ ಮೋಹನನ್ ಮತ್ತು ಆಂಡ್ರಿಯಾ ಜೆರೆಮಿಯ ನಟಿಸಿದ್ದಾರೆ.


ಇದನ್ನೂ ಓದಿ: ದರ್ಶನ್ ಅಭಿನಯದ ರಾಬರ್ಟ್ ಮಾರ್ಚ್‌ 11ಕ್ಕೆ‌ ರಿಲೀಸ್‌‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights