ಸ್ಥಗಿತಗೊಂಡಿರುವ NRC ಮರುಪರಿಶೀಲನೆ: 19 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ!

ಅಸ್ಸಾಂನ ಬಾರ್ಪೆಟಾ ಮತ್ತು ಬಕ್ಸಾ ಜಿಲ್ಲೆಗಳಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಮಾಡುತ್ತಿದ್ದ ಶಹಜಹಾನ್‌ ಅಲಿ ಅಹ್ಮದ್ ಎಂಬಾತ ಮಾರ್ಚ್‌ ತಿಂಗಳಿನಲ್ಲಿ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಚುನಾವಣೆಗೆ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, NRC ಕಾರಣದಿಂದಾಗಿ ಅವರು ಟೀಕೆಗಳನ್ನು ಎದರುಸಿದ್ದಾರೆ.

ಆಡಳಿತಾರೂಢ ಬೊಡೊಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಪಕ್ಷದ ಸ್ಥಳೀಯ ಕಾರ್ಯಕರ್ತರು ಅವರನ್ನು ಅಪಹಾಸ್ಯ ಮಾಡುವ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ. ಅದರಲ್ಲಿ ಒಂದು “ಅವರ ಹೆಸರು ಎನ್‌ಆರ್‌ಸಿಯಲ್ಲಿಲ್ಲ. ಈ ಸಮಸ್ಯಾತ್ಮಕ ವ್ಯಕ್ತಿ ಯುಪಿಪಿಎಲ್ ಅಭ್ಯರ್ಥಿಯಾಗುವುದು ಹೇಗೆ?”

ಮಾರ್ಚ್ 24, 1971 ರ ಕಟ್-ಆಫ್ ದಿನಾಂಕಕ್ಕಿಂತ ಮುಂಚೆಯೇ ಕುಟುಂಬವು 1951ರ ಹಿಂದಿನ ದಾಖಲೆಗಳನ್ನು ಹೊಂದಿದ್ದರೂ ಕೂಡ, ಕಳೆದ ವರ್ಷ ಆಗಸ್ಟ್‌ 31ಎಂದು  ಪ್ರಕಟವಾದ ಅಂತಿಮ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಅಹ್ಮದ್ ಮತ್ತು ಅವರ ಕುಟುಂಬದ 29 ಸದಸ್ಯರ ಹೆಸರು ಇರಲಿಲ್ಲ. ಹಾಗಾಗಿ, ಅವರು ಮೇಲ್ಮನವಿ ಸಲ್ಲಿಸಲು ಮತ್ತು ಅವರ ಹೆಸರುಗಳನ್ನು ಎನ್‌ಆರ್‌ಸಿಯಲ್ಲಿ ಮತ್ತೆ ಸೇರಿಸಲು ಮುಂದಾಗಿದ್ದಾರೆ. ಆದರೆ, ಹೇಗೆ ಎಂಬುದೇ ಅವರ ಮುಂದಿರುವ ಪ್ರಶ್ನೆಯಾಗಿದೆ.

ಎನ್‌ಆರ್‌ಸಿಯಿಂದ ಅಸ್ಸಾಂನ  19 ಲಕ್ಷ ಜನರನ್ನು ಹೊರಗಿಟ್ಟು ಒಂದು ವರ್ಷವಾಗಿದೆ. ಆದರೆ, ಇದೂವರೆಗೂ ಅವರಿಗೆ ಪೌರತ್ವ ನಿರಾಕರಣೆ ಆದೇಶದ ಪ್ರತಿ ನೀಡಿಲ್ಲ. ಆ ಪ್ರತಿ ಇದ್ದರೆ, ಅವರು ರಾಜ್ಯದ ವಿದೇಶಿಯರ ನ್ಯಾಯಮಂಡಳಿ (ಎಫ್‌ಟಿ)ಯಲ್ಲಿ ಮೇಲ್ಮನವಿ ಸಲ್ಲಿಸಬಹುದು. ಅದಕ್ಕಾಗಿ ಅವರು ಕಾಯುತ್ತಿದ್ದಾರೆ.

A year since publication of NRC in Assam, the process remains in limbo -  india news - Hindustan Times

ಎನ್‌ಆರ್‌ಸಿ ಪ್ರಕಟಣೆಯ ನಂತರ, ಕೇವಲ ಹೊರಗಿಡುವಿಕೆಯು ಜನರನ್ನು “ವಿದೇಶಿಯರು” ಎಂದು ತೀರ್ಮಾನಿಸುವುದಿಲ್ಲ. ವಿದೇಶಿಯವರ ನ್ಯಾಯಮಂಡಳಿ (ಎಫ್ಟಿ)ಗಳಿಂದ ಮಾತ್ರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಗೃಹ ಮತ್ತು ವಿದೇಶಾಂಗ ಸಚಿವಾಲಯಗಳು ಸ್ಪಷ್ಟಪಡಿಸಿದೆ.

ಆದರೆ ಗುವಾಹಟಿಯ ಎನ್‌ಆರ್‌ಸಿ ನಿರ್ದೇಶನಾಲಯದ ಅಧಿಕಾರಿಗಳು ಕಾಗದಪತ್ರಗಳಲ್ಲಿನ “ವ್ಯತ್ಯಾಸಗಳನ್ನು” ಮರುಪರಿಶೀಲನೆ ನಡೆಸಲು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸಾಕಷ್ಟು ಸಿಬ್ಬಂದಿ ಕೊರತೆಯಿದ್ದು, ನಿರಾಕರಣೆ ಆದೇಶಗಳನ್ನು ನೀಡುವ ಪ್ರಕ್ರಿಯೆಯು ವಿಳಂಬವಾಗಿದೆ ಎಂದು ಹೇಳಿದ್ದಾರೆ.

“ಎನ್‌ಆರ್‌ಸಿಯ ವಿಚಾರದಲ್ಲಿ ತಾರ್ಕಿಕ ತೀರ್ಮಾನ ತೆಗೆದುಕೊಳ್ಳದಿದ್ದರೆ,  ಪಟ್ಟಿಯಿಂದ ಹೊರಗಿಡಲ್ಪಟ್ಟಿರುವ 19 ಲಕ್ಷ ಜನರಿಗೆ ಸಂಕಷ್ಟದ ಶಾಪವಾಗುತ್ತದೆ. ನೀವು ಜನರನ್ನು ಶಾಶ್ವತವಾಗಿ ನೇಣಿಗೇರಿಸಲು ಅಥವಾ ದಮನಿಸಲಲು ಸಾಧ್ಯವಾಗುವುದಿಲ್ಲ. ನಿಮ್ಮ ನಡೆ ಅತ್ಯಂತ ಕ್ರೂರವಾಗಿದೆ” ಎಂದು ಅಹ್ಮದ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನ ಡರಂಗ್‌ ಜಿಲ್ಲೆಯ, ಏಳು ವರ್ಷದ ಮಗುವಿನ ತಾಯಿ ಹಾಗೂ ರೈತನ ಪತ್ನಿ ದಲಿಮನ್‌ ನೆಸ್ಸಾ ಅವರು ಹಜ್‌ ತೀರ್ಥಯಾತ್ರೆಗಾಗಿ ವರ್ಷಗಳಿಂದ 64,000 ರೂಗಳನ್ನು ಕೂಡಿಟ್ಟು ಹಜ್‌ಗೆ ಹೊರಟಿದ್ದರು. ಆದರೆ, ಸ್ಥಳೀಯ ಪೊಲೀಸರು ಅವರಿಗೆ ಪರಿಶೀಲನಾ ಪತ್ರವನ್ನು ನೀಡಲು ನಿರಾಕರಿಸಿದ್ದಾರೆ. ಕಾರಣ, ಅವರ ಹೆಸರನ್ನೂ ಎನ್‌ಆರ್‌ಸಿಯಿಂದ ಹೊರಗಿಡಲಾಗಿದೆ.

“ನನ್ನ ಗಂಡನ ಹೆಸರು ಎನ್‌ಆರ್‌ಸಿಯಲ್ಲಿದೆ. ಆದರೆ, ನನ್ನ ಹೆಸರು ಇರಲಿಲ್ಲ. ಈಗ ನನ್ನ ಹೆಸರನ್ನು ಸೇರಿಸಲಾಗಿದೆ. ಈ ಎನ್‌ಆರ್‌ಸಿ ಪ್ರಕ್ರಿಕೆ ತಾರ್ಕಿಕಗೊಳ್ಳಬೇಕೆಂದು ನಾವು ಬಯಸುತ್ತೇವೆ” ಎಂದು ನೆಸ್ಸಾ ಹೇಳಿದ್ದಾರೆ. “ದಾರಂಗ್‌ ಜಿಲ್ಲೆಯ ಹಲವಾರು ಜನರು ಪಾಸ್‌ಪೋಸ್ಟ್‌ಗಳಿಗಾಗಿ “ವೆರಿಫಿಕೇಷನ್ ಕ್ಲಿಯರೆನ್ಸ್‌”ಗಾಗಿ ಕಾಯುತ್ತಿದ್ದಾರೆ.

ಆದರೆ, ಹಲವಾರು ಅರ್ಜಿದಾರರ ಕುಟುಂಬದ ಒಬ್ಬರು ಅಥವಾ ಇಬ್ಬರು ಎನ್‌ಅರ್‌ಸಿ ಪಟ್ಟಿಯಿಂದ ಹೊರಗಿಡಲ್ಪಟ್ಟಿದ್ದು, ಸುಮಾರು ಕುಟುಂಬಗಳ ಹಜ್‌ ಯಾತ್ರೆ ರದ್ದಾಗಿದೆ” ಎಂದು ಟ್ರಾವೆಲ್ ಏಜೆಂಟ್ ಅಫಜುದ್ದೀನ್ ಅಹ್ಮದ್ ಹೇಳುತ್ತಾರೆ.

“ಹೆಸರು ಎನ್‌ಆರ್‌ಸಿಯಲ್ಲಿ ಇಲ್ಲದಿದ್ದರೆ ನೀವು ಪಾಸ್‌ಪೋರ್ಟ್ ಪರಿಶೀಲನೆಯನ್ನು ಹೇಗೆ ಕ್ಲಿಯರ್ ಮಾಡಿಕೊಳ್ಳಲು ಸಾಧ್ಯ? ಇದು ಪೌರತ್ವದ ಪ್ರಶ್ನೆ. ವಿಷಯವನ್ನು ತೆರವುಗೊಳಿಸುವವರೆಗೆ ನಾವು ವೆರಿಫಿಕೇಶನ್‌ ಅನ್ನು ತಡೆಹಿಡಿದಿದ್ದೇವೆ.” ಎಂದು ದಾರಂಗ್‌ನ ಎಸ್‌ಪಿ ಅಮೃತ್ ಭುಯಾನ್ ಹೇಳಿದ್ದಾರೆ.

ಬೊಂಗೈಗಾಂವ್ ಜಿಲ್ಲೆಯ ಅಭಯಪುರಿಯ 20 ವರ್ಷದ ಕಾರ್ಮಿಕ ರೋಹಿಮ್ ಅಲಿ ಎಂಬಾತನ ಹೆಸರು ಎನ್‌ಅರ್‌ಸಿ ಪಟ್ಟಿಯಲ್ಲಿದೆ. ಆದರೆ, ಆತ ಇನ್ನೂ “ಆತಂಕಕ್ಕೊಳಗಾಗಿದ್ದಾನೆ.” ಕಾರಣ, ಆತನ ತಂದೆ, ತಮ್ಮ ಮತ್ತು ಮೂವರು ಸಹೋದರಿಯರು ಎನ್‌ಆರ್‌ಸಿಯಿಂದ ಹೊರಗುಳಿದಿದ್ದಾರೆ.

ಆತನ ತಾಯಿ, ತಾಯಿ ಹಲೀಮಾ ಖತುನ್ ಅವರನ್ನು ಎಫ್‌ಟಿ ವರ್ಷಗಳ ಹಿಂದೆ ವಿದೇಶಿಯರೆಂದು ಘೋಷಿಸಿತ್ತು. ಅವರು 2019 ರಲ್ಲಿ ಜಾಮೀನಿನ ಮೇಲೆ ಜೊರಬರುವ ಮೊದಲು ಕೊಕ್ರಜಾರ್‌ನ ಬಂಧನ ಕೇಂದ್ರದಲ್ಲಿ ನಾಲ್ಕು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು.

ಅಲಿ ಮತ್ತು ಅವರ ಸೋದರರು ತಮ್ಮ ತಂದೆಯ ಪೂರ್ವಜರು 1951ಕ್ಕೂ ಹಿಂದೆಯೇ ಬಂದವರು ಎಂಬ ದಾಖಲೆಗಳನ್ನು ಹೊಂದಿದ್ದಾರೆ. ಆದರೆ, ಅಲಿಯ ಒಡಹುಟ್ಟಿದವರು ಅದೇ ದಾಖಲೆಗಳನ್ನು ಬಳಸಿದರೂ ಸಹ ಅವರು ಎನ್‌ಆರ್‌ಸಿ ಪಟ್ಟಿಯಿಂದ ಹೇಗೆ ಹೊರಗುಳಿದರು ಎಂದು ಅಲಿ ಹೇಳುತ್ತಾರೆ.

Read Also:  ಮೋದಿ ಹೆಸರನ್ನಷ್ಟೇ ಬಳಸಿ ಚುನಾವಣೆ ಗೆಲ್ಲಲು ಆಗುವುದಿಲ್ಲ: ಉತ್ತರಖಂಡ್ ಬಿಜೆಪಿ ರಾಜ್ಯಾಧ್ಯಕ್ಷ

“ನಾವು ಹೊರಗಿಟ್ಟ ಪ್ರತಿಯೊಬ್ಬ ವ್ಯಕ್ತಿಗೂ ನಿರಾಕರಣೆ ಆದೇಶ ಹೊರಡಿಸಬೇಕಾಗಿದೆ. ಈ ಆದೇಶದ ಜೊತೆಗೆ ‘ಸ್ಪೀಕಿಂಗ್ ಆರ್ಡರ್’ (ಮಾತನಾಡುವ ಆದೇಶ)ವನ್ನೂ ನೀಡಬೇಕು. ಇದು ಎನ್‌ಆರ್‌ಸಿಯಿಂದ ಹೊರಗಿಡುವ ನಿಖರವಾದ ಕಾರಣವನ್ನು ವಿವರಿಸುತ್ತದೆ. ಆದರೆ, ಈ ಸ್ಪೀಕಿಂಗ್ ಆದೇಶಗಳನ್ನು ಪರಿಶೀಲಿಸಿದಾಗ ಹಲವಾರು ವ್ಯತ್ಯಾಸಗಳು ಕಂಡುಬಂದಿವೆ. ಅನೇಕ ಆದೇಶಗಳನ್ನು ಇರಬೇಕಾದ ರೀತಿಯಲ್ಲಿ ಬರೆಯಲಾಗಿಲ್ಲ. ಆದ್ದರಿಂದ, ಮರು ಪರಿಶೀಲನೆಗೆ ಆದೇಶಿಸಿದ್ದೇನೆ” ಎಂದು ಎನ್‌ಆರ್‌ಸಿಯ ರಾಜ್ಯ ಸಂಯೋಜಕರಾದ ಹಿತೇಶ್‌ ಶರ್ಮಾ ಹೇಳಿದ್ದಾರೆ.

“ಕೋವಿಡ್ ಕಾರಣದಿಂದಾಗಿ ಎಲ್ಲಾ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಕೆಲಸದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಮರು ಪರಿಶೀಲನೆ ನಡೆಸಲಾಗಿಲ್ಲ. ಸೆಪ್ಟೆಂಬರ್ 1 ರಿಂದ ಕೆಲಸವನ್ನು ಪ್ರಾರಂಭಿಸಲು ನಾವು ಉದ್ದೇಶಿಸಿದ್ದೇವೆ. ನಂತರದಲ್ಲಿ ನಾವು ನಿರಾಕರಣೆ ಆದೇಶಗಳೊಂದಿಗೆ ಮುಂದುವರಿಯುತ್ತೇವೆ” ಎಂದು ಅವರು ಹೇಳಿದ್ದಾರೆ.

2013ರಿಂದ ಎನ್‌ಆರ್‌ಸಿ ಬಗೆಗಿನ ಗೊಂದಲಗಳು ಮುಂದುವರೆದೇ ಇವೆ. ಅಂದಿನಿಂದ ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆಯ ನೇತೃತ್ವ ವಹಿಸಿದ್ದ ಮಾಜಿ ರಾಜ್ಯ ಸಂಯೋಜಕ ಪ್ರತೀಕ್ ಹಜೆಲಾ ಅವರನ್ನು 2019ರ ಅಕ್ಟೋಬರ್‌ನಲ್ಲಿ ಅಸ್ಸಾಂನಿಂದ ಸುಪ್ರೀಂ ಕೋರ್ಟ್ ವರ್ಗಾಯಿಸಿತು. ಆದರೂ, ಈ ಗೊಂದಲಗಳಿಗೆ ತೆರೆಬಿದ್ದಿಲ್ಲ.

ಸುಪ್ರೀಂ ಕೋರ್ಟ್‌ನಲ್ಲಿ ಎನ್‌ಆರ್‌ಸಿ ಪ್ರಕರಣದಲ್ಲಿ ಪ್ರಾಥಮಿಕ ಅರ್ಜಿದಾರರಾಗಿರುವ ಎನ್‌ಜಿಒ ಅಸ್ಸಾಂ ಲೋಕೋಪಯೋಗಿ (ಎಪಿಡಬ್ಲ್ಯು) ಕೂಡ ಎನ್‌ಆರ್‌ಸಿ ಪಟ್ಟಿಯಲ್ಲಿ ಶೇ.100 ರಷ್ಟು ಮರುಪರಿಶೀಲನೆ ನಡೆಸಬೇಕು ಎಂದು ಕೋರಿದೆ.

ಏತನ್ಮಧ್ಯೆ, ಹೊರಗಿಡಲಾದ ಕೆಲವು ಕುಟುಂಬಗಳು 2014ರ ಡಿಸೆಂಬರ್ 31ರ ಮೊದಲು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಬಂದ ಮುಸ್ಲಿಮೇತರ ವಲಸಿಗರನ್ನು ಒಳಗೊಳ್ಳುವ ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ತಮ್ಮ ಭರವಸೆಯನ್ನು ಮೂಡಿಸುತ್ತಿವೆ.

ಕೃಪೆ: The times of India


ಇದನ್ನೂ ಓದಿಜನತಾ ಕರ್ಫ್ಯೂ: CAA, NPR, NRC ವಿರುದ್ಧ ಬಾಲ್ಕನಿ ಪ್ರತಿಭಟನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights