ಮೋದಿ ಹೆಸರನ್ನಷ್ಟೇ ಬಳಸಿ ಚುನಾವಣೆ ಗೆಲ್ಲಲು ಆಗುವುದಿಲ್ಲ: ಉತ್ತರಖಂಡ್ ಬಿಜೆಪಿ ರಾಜ್ಯಾಧ್ಯಕ್ಷ

2022ರಲ್ಲಿ ನಡೆಯಲಿರುವ ಉತ್ತರಖಂಡ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಗೆಲ್ಲವು ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಸಾಕಾಗುವುದಿಲ್ಲ ಎಂದು ಉತ್ತರಖಂಡ್‌ ಬಿಜೆಪಿ ರಾಜ್ಯಾಧ್ಯಕ್ಷ ಬನ್ಸಿಧರ್ ಭಗತ್ ಹೇಳಿದ್ದಾರೆ.

ಪಕ್ಷಕ್ಕೆ ಜನರು ಮತ ಚಲಾಯಿಸಬೇಕಾದರೆ, ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ಗೆಲುವು ಸಾಧಿಸಬೇಕಾದರೆ, ಜನರೊಂದಿಗೆ, ಅವರಿಗಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ಶಾಸಕರಿಗೆ ತಿಳಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಜನ ಮೋದಿ ಹೆಸರು ನೋಡಿ ಮತ ಹಾಕಲ್ಲ. ಈಗಾಗಲೇ ಮೋದಿ ಎಂಬ ಹೆಸರಿಗಾಗಿ ಬಹಳಷ್ಟು ಸಲ ಮತ ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಶಾಸಕರ ಸಾಧನೆ ಮಾತ್ರ ಅವರಿಗೆ ಮತಗಳನ್ನು ತರುತ್ತದೆ. ಮೋದಿ ಎಂಬ ಹೆಸರಿನಲ್ಲಿ ಶಾಸಕರು ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂದು ಆಶಿಸಿದ್ದರೆ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
2022ರ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಪಕ್ಷದ ಪ್ರಮುಖ ಗುರಿಯಾಗಿದೆ. ಪಕ್ಷದ ಗುರಿ ಯಶಸ್ವಿಯಾಗಬೇಕಾದರೆ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಅದಕ್ಕಾಗಿ ಶ್ರಮಪಡಬೇಕು. ಅಲ್ಲದೆ, ವೈಯಕ್ತಿಕ ಸಾಮರ್ಥ್ಯದ ಆಧಾರದ ಮೇಲೆ ಮುಂದಿನ ಚುನಾವಣೆಗೆ ಪಕ್ಷದ ಟಿಕೆಟ್‌ ನೀಡಲಾಗುವುದು ಎಂದು ಅವರು ಹೇಳಿದರು.
ಭಗತ್‌ ಹೇಳಿಕೆಯನ್ನು ಬಳಸಿಕೊಂಡು ಮೋದಿ ವಿರುದ್ಧ ವ್ಯಂಗ್ಯವಾಡಿರುವ ಕಾಂಗ್ರೆಸ್‌, ಭಗತ್ ಅವರು ಸರಿಯಾದ ಹೇಳಿಕೆ ನೀಡಿದ್ದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ. ಮೋದಿ ಅಲೆ ಅಂತ್ಯವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದ್ದರಿಂದ, ಮತ ಬೇಕೆಂದರೆ ತಮ್ಮ ಶಾಸಕರು ಮತ್ತು ಮುಖಂಡರಿಗೆ ಶ್ರಮ ಪಡಬೇಕು ಎಂದು ಅವರು ಸಲಹೆ ನೀಡುತ್ತಿದ್ದಾರೆ ಎಂದು ಹೇಳಿದೆ.

2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 70 ಸ್ಥಾನಗಳ ಪೈಕಿ 57 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಏರಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಅಧಿಕಾರಕ್ಕೇರಿದ್ದ ಮಾಜಿ ಸಿಎಂ ಹರೀಶ್ ರಾವತ್ ಅವರು ಹರಿದ್ವಾರ ಗ್ರಾಮೀಣ ಮತ್ತು ಕಿಚ್ಚ ವಿಧಾನಸಭಾ ಕ್ಷೇತ್ರ ಎರಡೂ ಕ್ಷೇತ್ರಗಳಲ್ಲೂ ಸೋತಿದ್ದು ಕಾಂಗ್ರೆಸ್‌ಗೆ ದೊಡ್ಡ ಮುಜುಗರವಾಗಿತ್ತು. ಕೇವಲ 11 ಸ್ಥಾನಗಳನ್ನು ಗೆಲ್ಲುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿತ್ತು.


ಇದನ್ನೂ ಓದಿ:  ಜಮ್ಮುಕಾಶ್ಮೀರಕ್ಕೆ ಆಡಳಿತ ನಿಯಮ ಜಾರಿಗೊಳಿಸಿದ ಕೇಂದ್ರ: ಮುಖ್ಯಮಂತ್ರಿಗಿಲ್ಲ ಹೆಚ್ಚಿನ ಅಧಿಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights