ಭಾರತದಲ್ಲಿ 34 ಲಕ್ಷ ದಾಟಿದ ಕೊರೊನಾ ಪ್ರಕರಣಗಳು : ಹೊಸದಾಗಿ 76,472 ಕೇಸ್!
ಕಳೆದ 24 ಗಂಟೆಗಳಲ್ಲಿ 76,472 ಹೊಸ ಕೊರೊನಾ ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. ಆ ಮೂಲಕ ಭಾರತದಲ್ಲಿ ಕೋವಿಡ್ -19 ಸಂಖ್ಯೆ 34 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಹೆಚ್ಚುವರಿಯಾಗಿ 1,021 ಹೊಸ ಸಾವುಗಳು ಸೇರಿದಂತೆ ಒಟ್ಟಾರೆ ಸಾವಿನ ಸಂಖ್ಯೆ 62,550 ಕ್ಕೆ ತಲುಪಿದೆ.
ಭಾರತದಲ್ಲಿ ಗುರುವಾರ ಹೊಸ ಪ್ರಕರಣಗಳ ಸಂಖ್ಯೆ ವಿಶ್ವದಲ್ಲೇ ಅತಿ ಹೆಚ್ಚಾಗಿದ್ದು, ಇದು ಯುನೈಟೆಡ್ ಸ್ಟೇಟ್ಸ್ ಅನ್ನು ದಾಟಿದೆ ಎನ್ನಲಾಗುತ್ತಿದೆ. ಕೊರೊನಾವೈರಸ್ನಿಂದ ದೇಶ ದಿನಕ್ಕೆ ಸುಮಾರು 1,000 ಸಾವುಗಳನ್ನು ದಾಖಲಿಸುತ್ತಿದೆ.
ಈ ನಡುವೆ 34,63,973 ಮಂದಿ ಸೋಂಕಿತರ ಪೈಕಿ 26,48,999 ಮಂದಿ ಗುಣಮುಖರಾಗಿದ್ದು, ದೇಶದಲ್ಲಿ ಇನ್ನೂ 7,52,424 ಸಕ್ರಿಯ ಕೇಸುಗಳಿವೆ ಎಂದು ಸಚಿವಾಲಯದ ಮಾಹಿತಿ ತಿಳಿಸಿದೆ.

