ಪ. ಬಂಗಾಳ ಚುನಾವಣೆ: TMCಯಲ್ಲಿ ಭಿನ್ನಾಭಿಪ್ರಾಯ; BJP ಗೆಲುವಿಗೆ ವರದಾನ?

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ರಾಜ್ಯದಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡುತ್ತೇವೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಭಾರೀ ಸಿದ್ದತೆ ಮಾಡುತ್ತಿದೆ. ಈ ನಡುವೆ ಟಿಎಂಸಿಯ ಹಲವಾರು ಸದಸ್ಯರು ಪಕ್ಷದ ನಾಯಕತ್ವದ ವಿರುದ್ಧ ಭಿನ್ನಾಭಿಪ್ರಾಯ, ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹಲವು ತಿಂಗಳುಗಳಿಂದ ಮಮತಾ ಬ್ಯಾನರ್ಜಿಯವರ ವಿರುದ್ಧ ಸಿಟ್ಟಾಗಿರುವ, ಹೈಕಮಾಂಡ್‌ನಿಂದ ಅಂತಹ ಕಾಯ್ದುಕೊಂಡಿರುವ ರಾಜ್ಯ ಸಾರಿಗೆ ಸಚಿವ ಸುವೆಂಡು ಅಧಿಕಾರಿ ಮತ್ತು ಅವರ ಜೊತೆಗಿರುವ ಕೆಲವು ಮುಖಂಡರನ್ನು ಸಮಾಧಾನಗೊಳಿಸಲು ಪಕ್ಷದ ಹಿರಿಯ ಮುಖಂಡರು ತೀವ್ರವಾಗಿ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಲ್ಲದೆ, ಹಲವು ನಾಯಕರು ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಪೂರ್ವ ಮಿಡ್ನಾಪೋರ್ ಮತ್ತು ಜಂಗಲ್‌ಮಹಲ್ ಪ್ರದೇಶದಲ್ಲಿರುವ ಸುಮಾರು 45 ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿರುವ ಮತ್ತು ನಂದಿಗ್ರಾಮ್ ಭೂಸ್ವಾಧೀನ ವಿರೋಧಿ ಆಂದೋಲನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸುವೆಂಡು ಅಧಿಕಾರಿ ಅವರ ನಡೆಯ ಬಗ್ಗೆ  ಪಕ್ಷದ ಹಿರಿಯ ನಾಯಕರು ಆತಂಕದಲ್ಲಿದ್ದಾರೆ.

“2021ರ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳಲು ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅವರು ಪಕ್ಷವನ್ನು ತೊರೆದರೆ ಅದು ಚುನಾವಣೆಯಲ್ಲಿ ಮತ್ತು ರಾಜಕೀಯವಾಗಿ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪಕ್ಷದ ವಿರುದ್ಧ ಮಾತನಾಡುವ ಅಥವಾ ಭಿನ್ನಾಭಿಪ್ರಾಯಹೊಂದಿರುವ ಅನೇಕ ನಾಯಕರು ಅವರೊಂದಿಗೆ ಸೇರಬಹುದು” ಎಂದು ಟಿಎಂಸಿ ಪಕ್ಷದ ಹಿರಿಯ ನಾಯಕ ಹೇಳಿದ್ದಾರೆ.

ಇದನ್ನೂ ಓದಿ: ರಾಜಕೀಯ ತೊರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ; ಬಿಜೆಪಿ ಸೇರುವುದಿಲ್ಲ: ಸೌಗತ್‌ ರಾಯ್

ಕೆಲವು ತಿಂಗಳುಗಳ ಹಿಂದೆ ಪಕ್ಷದಲ್ಲಿ ತರಲಾದ ಸಾಂಸ್ಥಿಕ ಪುನರ್‌ರಚನೆಯ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ. ಪಕ್ಷದಲ್ಲಿ ಜಿಲ್ಲಾ ಮೇಲ್ವಿಚಾರಕ/ವಿಕ್ಷಕರ ಹುದ್ದೆಯನ್ನು ರದ್ದುಗೊಳಿಸಿರುವುದು ಸರಿಯಲ್ಲ. ಈ ಮೂಲಕ ತನ್ನ ಪ್ರಭಾವವನ್ನು ಕಸಿದುಕೊಳ್ಳಲು ಪಕ್ಷದ ಹೈಕಮಾಂಡ್‌ ಪ್ರಯತ್ನಿಸಿದೆ ಎಂದು ಸುವೆಂಡು ಅಧಿಕಾರಿ ಆರೋಪಿಸಿದ್ದಾರೆ. ಅಲ್ಲದೆ, ಚುನಾವಣಾ ತಂತ್ರಜ್ಞರಾಗಿ ನೇಮಕವಾಗಿರುವ ಪ್ರಶಾಂತ್‌ ಕಿಶೋರ್‌ ಅವರ ಬಗೆಗೆ ಅವರಿಗೆ ಅಸಮಾಧಾನವಿದೆ ಎಂದು ಮೂಲಗಳು ಹೇಳಿವೆ.

ಸಚಿವ ಸುವೆಂಡು ಅಧಿಕಾರಿ ಅವರ ಜೊತೆಗೆ ಭೂಸ್ವಾಧೀನ ವಿರೋಧಿ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಂಗೂರ್ ಶಾಸಕ ರವೀಂದ್ರನಾಥ್ ಭಟ್ಟಾಚಾರ್ಯ, ಕೂಚ್‌ಬೆಹಾರ್ ದಕ್ಷಿಣ ಶಾಸಕ ಮಿಹಿರ್ ಗೋಸ್ವಾಮಿ, ಅರಂಬಾಗ್ ಶಾಸಕ ಕೃಷ್ಣಚಂದ್ರ ಸಾಂತ್ರಾ, ಬರಾಕ್‌ಪುರ ಶಾಸಕ ಸಿಲ್ಭದ್ರ ದತ್ತಾ ಅವರು ನಾಯಕತ್ವವನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಕೆಲವರು ಪಕ್ಷವನ್ನು ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇವರಲ್ಲದೆ, ರಾಜ್ಯ ಅರಣ್ಯ ಸಚಿವ ರಾಜೀಬ್ ಬ್ಯಾನರ್ಜಿ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಸಾಧನ್ ಪಾಂಡೆ ಸೇರಿದಂತೆ ನಾಲ್ವರು ಸಚಿವರು, ಅನೇಕ ಶಾಸಕರು, ಕೌನ್ಸಿಲರ್‌ಗಳು, ಜಿಲ್ಲೆಯ ಮುಖಂಡರು ಪಕ್ಷದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ವಿಶೇಷವಾಗಿ ಐ-ಪಿಎಸಿ ತಂಡದ ಕಾರ್ಯಚಟುವಟಿಕೆಗಳ ವಿರುದ್ದ ಅವರು ಕಿಡಿಕಾರುತ್ತಿದ್ದಾರೆ.

ಆಡಳಿತದಲ್ಲಿರುವ ಟಿಎಂಸಿ ಶಾಸಕರ ಜನಪ್ರಿಯತೆಯನ್ನು ಅಳೆಯಲು ರಾಜ್ಯದಾದ್ಯಂತ ನಡೆಸಿದ ಸಮೀಕ್ಷೆ ಮತ್ತು ಇತರ ಪಕ್ಷಗಳಾದ ಎಡ ಮತ್ತು ಕಾಂಗ್ರೆಸ್ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಇದು ಐ-ಪಿಎಸಿ ತಂಡದ ವಿರುದ್ಧ ಕೋಪಗೊಳ್ಳಲು ಕಾರಣವಾಗಿದೆ.

“ಐ-ಪಿಎಸಿ ಸಮೀಕ್ಷೆಯು ಕೆಳ ಮತ್ತು ಮಧ್ಯಮ ವರ್ಗದ ಸದಸ್ಯರ ಭ್ರಷ್ಟಾಚಾರ ಮತ್ತು ಒಳನೋಟವನ್ನು ಪ್ರಮುಖ ಸಮಸ್ಯೆಯೆಂದು ಗುರುತಿಸಿದೆ. ಪಕ್ಷವು ಸಹ ಕ್ರಮ ಕೈಗೊಂಡಿದೆ. ಹಾಗಾಗಿ ಪಕ್ಷದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಇದು ಕೆಲವು ಮುಖಂಡರಿಗೆ ಕೋಪವನ್ನುಂಟು ಮಾಡಿದೆ. ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಟಿಎಂಸಿ ಶಾಸಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದೂ ಸ್ಥಾನ ಗೆಲ್ಲದ ತಮಿಳುನಾಡಿನಲ್ಲಿ ಖಾತೆ ತೆರೆಯಲು ಹಪಾಹಪಿಸುತ್ತಿದೆ ಬಿಜೆಪಿ !

2021 ರ ವಿಧಾನಸಭಾ ಚುನಾವಣೆಯ ಭವಿಷ್ಯವು ಸುವೆಂಡು ಅಧಿಕಾರಿಯ ನಡೆಯ ಮೇಲಿದೆ. ಸುವೆಂಡು ಅವರು ಟಿಎಂಸಿಯಲ್ಲಿದ್ದರೆ ಮುಂದಿನ ಚುನಾವಣೆಯಲ್ಲಿ ಟಿಎಂಸಿಗೆ ಭಾರೀ ಅನುಕೂಲವಾಗಲಿದೆ. ಅವರು ಬಿಜೆಪಿ ಸೇರಿದರೆ ಚುನಾವಣಾ ಚಿತ್ರಣವೇ ಬದಲಾಗಲಿದೆ. ಆಗಾಗಿ ಟಿಎಂಸಿ ಮತ್ತು ಬಿಜೆಪಿ ಎರಡೂ ಪಕ್ಷಗಳು ಸುವೆಂಡು ಅವರ ನಡೆಯನ್ನು ತೀಕ್ಷ್ಣವಾಗಿ ಗಮನಿಸುತ್ತಿವೆ ಎಂದು ರಾಜಕೀಯ ವಿಶ್ಲೇಷಕ ಬಿಸ್ವಂತ್ ಚಕ್ರವರ್ತಿ ಹೇಳಿದ್ದಾರೆ.

“ಸುವೇಂಡು ಅಧಿಕಾರಿ ಪಕ್ಷದಲ್ಲಿದ್ದರೆ, ಟಿಎಂಸಿ ಅನುಕೂಲಕರ ಸ್ಥಾನದಲ್ಲಿರುತ್ತದೆ. ಅವರು ಬಿಜೆಪಿಗೆ ಬದಲಾದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಇದು ಟಿಎಂಸಿಗೆ ಒಂದು ಜಲಪಾತದ ಕ್ಷಣವಾಗಿದೆ” ಎಂದು ಚಕ್ರವರ್ತಿ ಹೇಳಿದ್ದಾರೆ.

ಸುವೆಂಡು ಅಧಿಕಾರಿ ಪಕ್ಷದಲ್ಲಿಯೇ ಇದ್ದಾರೆ. ಮಾಧ್ಯಮಗಳು ಊಹಾಪೋಹ ಹಬ್ಬಿಸುತ್ತಿವೆ. ಸುವೆಂಡು ಮತ್ತವರ ಜೊತೆಗಿರುವ ಶಾಸಕರು, ಪಕ್ಷದ ಕಾರ್ಯಕರ್ತರು, ರಾಜ್ಯದ ಜನರು ಮಮತಾ ಬ್ಯಾನರ್ಜಿಯವರ ಜೊತೆಗಿದ್ದಾರೆ. ಶಾಸಕರು ಅಭಿಪ್ರಾಯ ವ್ಯಕ್ತಪಡಿಸುವುದು ಸಮಸ್ಯೆಯಲ್ಲ. ಎಲ್ಲವೂ ಸರಿಯಾಗಿದೆ. ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ಸೌಗತ್ ರಾಯ್‌ ಹೇಳಿದ್ದಾರೆ.

“ಟಿಎಂಸಿ ಹೆಚ್ಚಾಗಿ ಸರ್ವಾಧಿಕಾರಿಯಂತೆ ಕಾರ್ಯನಿರ್ವಹಿಸುತ್ತದೆ, ಇದು ಎಂದಿಗೂ ಸುವೇಂಡು ಅಧಿಕಾರಿಯಂತಹ ಸಮರ್ಥ ನಾಯಕರನ್ನು ಜೊತೆಗಿರಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

294 ಸದಸ್ಯರನ್ನು ಹೊಂದಿರುವ ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.


ಇದನ್ನೂ ಓದಿ: ಪ. ಬಂಗಾಳದಲ್ಲಿ ವೈರಿ ಯಾರು? BJPಯೋ-TMCಯೋ? ಗೊಂದಲದಲ್ಲಿ ಎಡರಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights