ಫ್ಯಾಕ್ಟ್‌ಚೆಕ್ : ಶಾಲಾ ವಿದ್ಯಾರ್ಥಿಗಳ ಪ್ರಣಯ ದೃಶ್ಯಗಳು ನೈಜ ಘಟನೆಯಲ್ಲ

ಸಮವಸ್ತ್ರದಲ್ಲಿಇರುವ ಕಾಲೇಜು ಯುವಕ ಮತ್ತು ಇಬ್ಬರು ಹುಡುಗಿಯರು ಒಂದು ವಸತಿ ಸಮುಚ್ಚಯದ ರಸ್ತೆಯೊಂದರಲ್ಲಿ ಪ್ರಣಯ, ಸರಸ ಸಲ್ಲಾಪ ಮಾಡುತ್ತಿರು ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯಗಳನ್ನು ಗಮನಿಸುತ್ತಿದ್ದ ವ್ಯಕ್ತಿಯೊಬ್ಬ ಅವರನ್ನು ಬೈಯ್ಯುತ್ತ ಮಹಡಿ ಮೇಲೆ ನಿಂತು ಬಕೆಟ್‌ನಿಂದ ನೀರನ್ನು ಸುರಿಯುತ್ತಾನೆ. ನಂತರ ಅಲ್ಲಿಂದ ಆ ವಿದ್ಯಾರ್ಥಿಗಳು ಓಡಿ ಹೋಗುತ್ತಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು, ‘ಜಸ್ಟ್ ಟೇಕ್ ಕೇರ್, ನಿಮ್ಮ ಮಕ್ಕಳು ಶಾಲೆ, ಕಾಲೇಜಿಗೆ ಮಾತ್ರ ಹೋಗ್ತಾರಾ? ಅಥವಾ..  ಎಂಬ ಹೇಳಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ.  ವೈರಲ್ ಆಗಿರುವ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.


ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್ :

ವೈರಲ್ ಆಗಿರುವ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಕೀವರ್ಡ್ ಸರ್ಚ್ ಮಾಡುವ ಮೂಲಕ ಪರಿಶೀಲಿಸಿದಾಗ ಜುಲೈ 25 ರಂದು ಬೀನು ಎಂಬ ಫೇಸ್‌ ಬುಕ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಈ ಪುಟದಲ್ಲಿ ವಿಡಂಬನಾತ್ಮಕ ವಿಡಿಯೋಗಳನ್ನು ಹಾಕುವುದಾಗಿ ವಿವರಣೆಯಲ್ಲಿ ಬರೆಯಲಾಗಿದೆ. ಅದನ್ನು ನೀವು ಕೆಳಗೆ ನೋಡಬಹುದು.

ಇದರಲ್ಲಿ ನೀವು 0.33 ನಿಮಿಷಗಳಲ್ಲಿ ನೀಡಿದ ಮಾಹಿತಿಯನ್ನು ನೋಡಬಹುದು. ಈ ವಿಡಿಯೋ ಕೇವಲ ಮನರಂಜನೆಗಾಗಿ ಮಾಡಲಾಗಿದೆ ಎಂದು ಅದರಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಇದು ನೈಜ ಘಟನೆಯಲ್ಲ. ಶಾಲಾ ಸಮವಸ್ತ್ರದಲ್ಲಿ ಇರುವ ಯುವಕ ಮತ್ತು ಯುವತಿಯರು ಅಭಿನಯಿಸಿರುವ ವಿಡಿಯೋ ಇದಾಗಿದೆ. ಇದರಲ್ಲಿ ಕಂಡುಬರುವುದು ಬರೀ ನಟನೆಯೇ ಹೊರತು ನೈಜ ದೃಶ್ಯಗಳಲ್ಲ ಎಂದು ಕೊನೆಯಲ್ಲಿ ಶೀರ್ಷಿಕೆಯಲ್ಲಿ ಹೇಳಲಾಗಿದೆ. ಅಂದರೆ ಇದು ಪಾತ್ರಗಳು ನಟಿಸಿವೆಯೆ ಹೊರತು ಅವರು ನಿಜವಾದ ಶಾಲಾ ವಿದ್ಯಾರ್ಥಿಗಳಲ್ಲ.

ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿದ ನಂತರ ಆ ಮಕ್ಕಳ ಮೇಲೆ ಬಕೆಟ್‌ನಿಂದ ನೀರು ಸುರಿದ ಕೊನೆಯ ವ್ಯಕ್ತಿಯನ್ನು ಕೆಳಗಿನ ಚಿತ್ರದಲ್ಲಿ ನೀವು  ನೋಡಬಹುದು.

ಈ ಚಿತ್ರವನ್ನು ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಅದರ ಮೂಲಕ ನಾವು ಅಂಕಿತ್ ಜತುಸ್ಕ್ರಾನ್ ಹೆಸರಿನ ಫೇಸ್ಬುಕ್ ಪುಟವನ್ನು ನೋಡಿದ್ದೇವೆ. ಅದರ ಮೇಲೆ ನಾವು ಈ ವ್ಯಕ್ತಿಯ ಅನೇಕ ವೀಡಿಯೊಗಳನ್ನು ಕಂಡುಕೊಂಡಿದ್ದೇವೆ. ನೀವು ಕೆಳಗೆ ನೋಡಬಹುದು. ಈ ಪುಟವನ್ನು ಪರಿಶೀಲಿಸಿದಾಗ, ಅಲ್ಲಿ ವೈರಲ್ ಆಗುತ್ತಿರುವ ವೀಡಿಯೊಗಳಂತಹ ಅನೇಕ ವೀಡಿಯೊಗಳನ್ನು ಲಭ್ಯವಾಗಿವೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಶಾಲಾ ವಿದ್ಯಾರ್ಥಿಗಳ ಪ್ರಣಯ ದೃಶ್ಯಗಳು ವಾಸ್ತವವಾಗಿ ನೈಜ ಘಟನೆಯಲ್ಲ. ಮನೋರಂಜನೆಗಾಗಿ ಸ್ಕ್ರಿಪ್ಟೆಡ್ ಮಾಡಲಾದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : BJP ಪ್ರಕಾರ ಸಿದ್ದರಾಮಯ್ಯನವರಿಗೆ 73 ವರ್ಷವಂತೆ! ಹೌದೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights