ಕನ್ನಡಿಗರನ್ನು ಖುಷಿ ಪಡಿಸಿದ ವಿರಾಟ್ ಕೊಹ್ಲಿ : ಭಾರೀ ವೈರಲ್ ಆಯ್ತು ಈ ಒಂದು ಹೇಳಿಕೆ…!

ಕನ್ನಡ ಬಾರದವರು ಕನ್ನಡದಲ್ಲಿ ಮಾತನಾಡಿದರೆ ಅದೇನೋ ಖುಷಿ. ಅದರಲ್ಲೂ ಕನ್ನಡ ಬಾರದ ಸೆಲೆಬ್ರಿಟಿಗಳು, ಆಟಗಾರರು ಕನ್ನಡ ಮಾತನಾಡಿದರಂತೂ ಅಭಿಮಾನಿಗಳು ಸಿಕ್ಕಪಟ್ಟೆ ಖುಷಿ ಆಗ್ತಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಕುತೂಹಲಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಕೊಹ್ಲಿಗೆ ಅಭಿಮಾನಿಗಳು ಅತ್ಯುತ್ತಮ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕೊಹ್ಲಿ ಕೂಡ ಉತ್ತರಿಸಿದ್ದು ಅಭಿಮಾನಿಗಳು ಸಿಕ್ಕಾಪಟ್ಟೆ ಸಮತೋಷಗೊಂಡಿದ್ದಾರೆ. ಅಭಿಮಾನಿ ಕೊಹ್ಲಿಗೆ ನಿಮಗೆ ಕನ್ನಡ ಮಾತನಾಡಲು ಬರುತ್ತಾ? ಕನ್ನಡ ಅರ್ಥವಾಗುತ್ತಾ? ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಕೊಯ್ಲಿ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ ಎಂದು ಉತ್ತರಿಸಿದ್ದಾರೆ. ಕೊಹ್ಲಿ ಮಾತು ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಕನ್ನಡ ಅರ್ಥಮಾಡಿಕೊಳ್ಳೋಕೆ ಮಾತ್ರ ಬಹಳ ಕಷ್ಟವಾಗುತ್ತೆ. ಅರ್ಥವೇ ಆಗುವುದಿಲ್ಲ ಎಂದು ಹೇಳಿದ್ದಾರೆ. ಈ ಪ್ರಶ್ನೋತ್ತರ ವಿಚಾರ ಸದ್ದು ಮಾಡುತ್ತಿದೆ. ಸ್ವಲ್ಪ ಕನ್ನಡ ಬರುತ್ತೆ ಎಂದು ಉತ್ತರಿಸಿದ್ದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿ ಎಲ್ಲೆಡೆ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಕೊಹ್ಲಿ ಆಟವೂ ಹಾಗೆಯೇ. ಅಂತಾರಾಷ್ಟ್ರೀಯ ಪಂದ್ಯ ಆಡಲು ಆರಂಭಿಸಿದ ಅಂದಿನಿಂದ ಇಂದಿನವರೆಗೆ ಅತ್ಯುತ್ತಮ ಪರ್ಫಾಮೆನ್ಸ್ ತೋರಿದವರು ವಿರಾಟ್. ಒಂದೊಮ್ಮೆ

ಸಚಿನ್ ತೆಂಡೂಲ್ಕರ್ ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದ್ದರೆ ಅದು ಭಾರತದ ಮತ್ತೊಬ್ಬ ಆಟಗಾರ ವಿರಾಟ್ ಕೊಹ್ಲಿಗೆ ಬಹುಳ ದೊಡ್ಡ ಅಭಿಮಾನಿ ಬಳಗವಿದೆ. ಅಂತಾರಾಷ್ಟ್ರೀಯ ಪಂದ್ಯ ಆಡಲು ಆರಂಭಿಸಿದ ಅಂದಿನಿಂದ ಇಂದಿನವರೆಗೆ ಅತ್ಯುತ್ತಮ ಪರ್ಫಾಮೆನ್ಸ್ ತೋರಿದವರು ವಿರಾಟ್ ಏನೂ ಮಾಡಿದರೂ ಸುದ್ದಿಯಲ್ಲಿರುತ್ತಾರೆ. ಇನ್ನೂ ಬಾಲಿವುಡ್ ನಟಿ ಅನುಷ್ಕಾ ಹಾಗೂ ವಿರಾಟ ನಡುವೇ ಯಾವುದೇ ವಿಷಯ ಶೇರ್ ಮಾಡಿದರೂ ಅದು ಭಾರೀ ವೈರಲ್ ಆಗುತ್ತೆ. ಹೀಗಾಗಿ ವಿರಾಟ್ ಕನ್ನಡ ಭಾಷೆಯ ಬಗ್ಗೆ ಹೇಳಿದ ಆ ಒಂದು ಮಾತು ಸದ್ಯ ಅಭಿಮಾನಿಗಳಿಗೆ ಭಾರಿ ಮೆಚ್ಚುಗೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights