Corona: ಮತ್ತೊಮ್ಮೆ ರೈಲು ಸಂಚಾರ ರದ್ದು ಮಾಡಿದ ಕೇಂದ್ರ ಸರ್ಕಾರ!

ದೇಶಾದ್ಯಂತ ಕೊರೊನಾ ಆಕ್ರಮಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ. ಜುಲೈ 01 ರಿಂದ ಆಗಸ್ಟ್‌ 12ರ ತನಕ ರೈಲು ಸಂಚಾರ ರದ್ದಾಗಲಿದೆ ಎಂದು ರೈಲ್ವೇ ತಿಳಿಸಿದೆ.

ಲಾಕ್‌ಡೌನ್‌ಗೂ ಮುನ್ನವೇ ಪ್ರಯಾಣಿಕ ರೈಲು ಸಂಚಾರವನ್ನು ಸಂಪೂರ್ಣವಾಗಿ ರುದ್ದುಗೊಳಿಸಿದ್ದ ರೈಲ್ವೇ, ಮೇ 12 ರಿಂದ ಶ್ರಮಿಕ್ ಸ್ಪೆಷಲ್‌ ರೈಲುಗಳು ಹಾಗೂ ಜೂನ್ 01 ರಿಂದ 15 ಜೋಡಿ ರೈಲುಗಳನ್ನು ಓಡಿಲು ಆರಂಭಿಸಿತ್ತು. ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆ ರೈಲುಗಳನ್ನು ರದ್ದುಗೊಳಿಸಿದ್ದು, ಟಿಕೆಟ್‌ ಬುಕ್‌ ಮಾಡಿದ್ದವರಿಗೆ ಮರುಪಾವತಿ ಮಾಡಲಾಗುತ್ತದೆ ಎಂದು ಹೇಳಿದೆ.

ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್‌ಡೌನ್‌ ನಾಲ್ಕನೇ ಹಂತ ಮುಗಿದ ನಂತರ ಮೇ ತಿಂಗಳಿನಲ್ಲಿ 200 ವಿಶೇಷ ರೈಲುಗಳನ್ನು ಪ್ರಾರಂಭಿಸಿತ್ತು, ನಂತರ ಕೇಂದ್ರ ಸರ್ಕಾರವು ಜೂನ್‌ 01 ರಿಂದ ದೆಹಲಿ ಕೇಂದ್ರಿತವಾಗಿ 15 ಜೋಡಿ ರೈಲುಗಳ ಸಂಚಾರವನ್ನು ಆರಂಭಿಸಿತ್ತು.  ಇದೀಗ ಮತ್ತೆ ರೈಲು ಸಂಚಾರವನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights