ತಂದೆಗಾಗಿ 1200 ಕಿ.ಮೀ ಸೈಕಲ್‌ ತುಳಿದಿದ್ದ ಬಾಲಕಿಯ ತಂದೆ ಸಾವು!

ಕಳೆದ ವರ್ಷದ ಲಾಕ್‌ಡೌನ್‌ ಸಮಯದಲ್ಲಿ 1200 ಕಿ.ಮೀ ಸೈಕಲ್‌ ತುಳಿದು ತಂದೆಯನ್ನು ಕೊರೆದೊಯ್ದು ಬಿಹಾರದ ‘ಸೈಕಲ್ ಹುಡುಗಿ’ ಎಂದು ಕರೆಸಿಕೊಂಡಿದ್ದ ಜ್ಯೋತಿ ಅವರ ತಂದೆ ಮೋಹನ್ ಪಾಸ್ವಾನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ದರ್ಬಂಗಾ ಜಿಲ್ಲೆಯ ಸಿರ್ಹುಲ್ಲಿ ಗ್ರಾಮದ ನಿವಾಸಿಯಾಗಿದ್ದ ಅವರು ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದು, ಮೃತರಿಗೆ ನೆರವು ಮತ್ತು ಗೌರವ ಸಲ್ಲಿಸಲು ಸಂಬಂಧಪಟ್ಟ ಸಿಂಗ್‌ಬರಾ ಬ್ಲಾಕ್‌ನ ಬಿಡಿಒ ಅವರನ್ನು ಗ್ರಾಮಕ್ಕೆ ಕಳಿಸಲಾಗಿದೆ ಎಂದು ಅಲ್ಲಿನ ಡಿಎಂ ತಿಳಿಸಿದ್ದಾರೆ.

2020ರ ಮಾರ್ಚ್‌ ಅಂತ್ಯದಲ್ಲಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ ಸಮಯದಲ್ಲಿ ಹದಿಮೂರು ವರ್ಷದ ಜ್ಯೋತಿ ಕುಮಾರಿ ಅವರು ತಮ್ಮ ತಂದೆಯನ್ನು ಗುರುಗ್ರಾಮದಿಂದ ಗ್ರಾಮಕ್ಕೆ ಮರಳಿ ಕರೆತರಲು 1200 ಕಿ.ಮೀ ದೂರವನ್ನು ಸೈಕಲ್‌ನಲ್ಲಿ ಪ್ರಯಾಣಿಸಿದ್ದಳು. ಈ ಘಟನೆಗೆ ಇಡೀ ದೇಶವೇ ಮರುಕ ಪಟ್ಟಿತ್ತು ಮತ್ತು ಇಂತಹ ಸಮಸ್ಯೆಯನ್ನು ಸೃಷ್ಟಿಸಿದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: ಅನಾರೋಗ್ಯ ತಂದೆಯನ್ನು ಕೂರಿಸಿಕೊಂಡು 1,200 ಕಿ.ಮೀ ಸೈಕಲ್ ತುಳಿದ ಮಗಳು..!

ಮಾಧ್ಯಮಗಳು ಅವಳ ಕಥೆಯನ್ನು ಪ್ರಸಾರ ಮಾಡಿದ ನಂತರ ಆಕೆಯಲ್ಲಿ ಬಿಹಾರದ ಸೈಕಲ್‌ ಹುಡುಗಿ ಎಂದು ಕರೆಯಲಾಗಿತ್ತು. ಅಲ್ಲದೆ, ಅಧಿಕಾರಿಗಳು ಆಕೆಗೆ ಕ್ರೀಡಾ ಬೈಸಿಕಲ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಆಕೆಗೆ ಕ್ರೀಡೆಯಲ್ಲಿ ತರಬೇತಿ ನೀಡಲು ಹಲವಾರು ರೀತಿಯ ನೆರವನ್ನು ಘೋಷಿಸಲಾಗಿತ್ತು.

ಇದನ್ನೂ ಓದಿ: ತಂದೆ ಕೂರಿಸಿ 1,200 ಕಿ.ಮೀ ಸೈಕ್ಲಿಂಗ್ ಮಾಡಿದ ಜ್ಯೋತಿಗೆ ಸೂಪರ್ 30 ಆಫರ್..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights