ನಂದಿಗ್ರಾಮದಲ್ಲಿ ಸುವೇಂದು ಗೆಲುವು ಸಂಶಯ: ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಮಮತಾ ಅರ್ಜಿ ಇಂದು ವಿಚಾರಣೆ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ದ ನಂದಿಗ್ರಾಮದಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿರುವ ಸುವೇಂದು ಅಧಿಕಾರಿ ಅವರ ಗೆಲುವನ್ನು ಪ್ರಶ್ನಿಸಿ ಟಿಎಂಸಿ ಬೆಂಗಾಲ್‌ ಹೈಕೋರ್ಟ್‌ ಮೆಟ್ಟಿಲೇರಿದೆ. ಕೊಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಕೌಸಿಕ್ ಚಂದಾ ಅವರು ಶುಕ್ರವಾರ ವಿಚಾರಣೆ ನಡೆಸಲಿದ್ದಾರೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದರೂ, ಬ್ಯಾನರ್ಜಿ ಅವರು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯ ವಿರುದ್ಧ 1,956 ಮತಗಳ ಅಂತರದಿಂದ ಸೋತರು. ಮೊದಲಿಗೆ ಮಮತಾ ನ್ಯಾನರ್ಜಿ ಗೆಲುವು ಸಾಧಿಸಿದ್ದಾರೆ ಎಂದಿದ್ದ ಆಯೋಗ, ನಂತರ ಮಮತಾ ಸೋತಿದ್ದಾರೆ ಎಂದು ಪ್ರಕಟಿಸಿತು. ಇದು ಬ್ಯಾನರ್ಜಿ ಅವರ 32 ವರ್ಷಗಳ ರಾಜಕೀಯದಲ್ಲಿ ಮೊದಲ ಸೋಲಾಗಿದೆ.

ಟಿಎಂಸಿ ನಾಯಕರ ಪ್ರಕಾರ ನಂದಿಗ್ರಾಮ ಕ್ಷೇತ್ರದ ಮತಗಳನ್ನು ಸರಿಯಾಗಿ ಎಣಿಸಲಾಗಿಲ್ಲ ಎಂದು ಆರೋಪಿಸಲಾಗಿದೆ. 2020 ರ ಡಿಸೆಂಬರ್‌ನಲ್ಲಿ ಬಿಜೆಪಿಗೆ ಸೇರಿದ ಅಧಿಕಾರಿಯು ಈ ಸ್ಥಾನವನ್ನು ಗೆದ್ದು ಬಂಗಾಳ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದಾರೆ.

ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಮೇ 3 ರಂದು ಟಿಎಂಸಿ ಮುಖ್ಯಸ್ಥರು ನ್ಯಾಯಾಲಯದಲ್ಲಿ ತಮ್ಮ ಸೋಲನ್ನು ಪ್ರಶ್ನಿಸುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: 2020 ದೆಹಲಿ ಗಲಭೆ ಪ್ರಕರಣ: ಮೂವರು ವಿದ್ಯಾರ್ಥಿ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಲು ಕೋರ್ಟ್‌ ಅದೇಶ!

“ನಾವು ಖಂಡಿತವಾಗಿಯೂ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ಇವಿಎಂ ಯಂತ್ರ, ವಿವಿಪಿಎಟಿ ಮತ್ತು ಅಂಚೆ ಮತಪತ್ರಗಳನ್ನು ಪ್ರತ್ಯೇಕವಾಗಿ ಇಡಲಾಗುವುದು ಎಂದು ಭಾರತದ ಚುನಾವಣಾ ಆಯೋಗದಿಂದ [ಇಸಿ] ಲಿಖಿತ ಹೇಳಿಕೆಯನ್ನು ನಾವು ಬಯಸುತ್ತೇವೆ. ಮತ ಎಣಿಕೆಯು ದೋಷಪೂರಿತವಾಗಿದೆ ಎಂದು ಕಂಡುಬಂದಲ್ಲಿ, ಅವರು ವಿಧಿವಿಜ್ಞಾನ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ”ಎಂದು ಬ್ಯಾನರ್ಜಿ ಹೇಳಿದ್ದಾರೆ.

ನಂದಿಗ್ರಾಮದಲ್ಲಿನ ಸೋಲು ಬ್ಯಾನರ್ಜಿಗೆ ಹಿನ್ನಡೆಯಾಗಿದೆ. ಅವರ ಪಶ್ಚಿಮ ಬಂಗಾಳ ವಿಧಾನಸಭೆಯ 292 ಸ್ಥಾನಗಳಲ್ಲಿ 213 ಸ್ಥಾನಗಳಲ್ಲಿ ತಮ್ಮ ಪಕ್ಷ ಭರ್ಜರಿಯಾಗಿ ಗೆಲುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರ ಪಕ್ಷದ ಮೂರನೇ ನೇರ ಗೆಲುವಾಗಿದೆ.

2016 ರ ವಿಧಾನಸಭೆಯಲ್ಲಿ ಭಬಾನಿಪುರದಲ್ಲಿ ಪ್ರತಿನಿಧಿಸಿದ ಬ್ಯಾನರ್ಜಿ, ಎಂಟು ಹಂತದ ಚುನಾವಣೆ ಪ್ರಾರಂಭವಾಗುವ ಒಂದು ತಿಂಗಳ ಮೊದಲು ನಂದಿಗ್ರಾಮದಿಂದ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.

2007 ರಲ್ಲಿ ನಂದಿಗ್ರಾಮದಿಂದ ಆರಂಭವಾಗಿದ್ದ ಭೂ ಆಂದೋಲನವು ರಾಜ್ಯದಲ್ಲಿ ಟಿಎಂಸಿಯನ್ನು ಅಧಿಕಾರಕ್ಕೆ ತರಲು ನೆರವಾಗಿತ್ತು. ಸುವೇಂದು ಅಧಿಕಾರಿ ಟಿಎಂಸಿಯಲ್ಲಿದ್ದಾಗ ಈ ನಂದಿಗ್ರಾಮದಿಂದ ಗೆದ್ದು ಎರಡು ಬಾರಿ ಶಾಸಕರಾಗಿದ್ದರು. ಇದು ಅವರ ಮೂರನೇ ಗೆಲುವಾಗಿದ್ದು, ಈಗ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ.

ಇದನ್ನೂ ಓದಿ: ಭೀಮಾ ಕೊರೆಗಾಂವ್‌‌: ಹದಗೆಡುತ್ತಿದೆ ಜೈಲಿನಲ್ಲಿರುವ ದೆಹಲಿ ವಿವಿ ಪ್ರಾಧ್ಯಾಪಕ ಹನಿ ಬಾಬು ಆರೋಗ್ಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights