ಸಾಮಾಜಿಕ ಅಂತರ ಸಂಸತ್ತಿಗಿಲ್ಲವೇ, ಮೋದಿಯವರು ಸದನ ನಡೆಸುತ್ತಿರುವುದೇಕೆ? ಶಿವಸೇನೆ ಪ್ರಶ್ನೆ

ಕೊರೊನಾ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಇನ್ನೊಂದೆಡೆ ಅವರೇ ಸಂಸತ್ತು ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿದ್ದಾರೆ. ಇಂತಹ ಕ್ರಮದ ಅರ್ಥವೇನು ಎಂದು ಶಿವಸೇನೆ ಪ್ರಶ್ನಿಸಿದೆ.

ಶಿವಸೇನೆ ತರುತ್ತಿರುವ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಈ ಬಗ್ಗೆ ಬರೆಯಲಾಗಿದ್ದು, ಸಾವಿರಾರು ಜನ ಸಂಸದರು, ಅಧಿಕಾರಿಗಳು ಸಂಸತ್ತಿಗೆ ಬಂದು-ಹೋಗುತ್ತಿದ್ದಾರೆ. ಸಂಸತ್‌  ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಒಂದೆಡೆ ಸರ್ಕಾರದ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನೊಂದೆಡೆ ಸಂಸತ್ತಿನಲ್ಲಿ ಕಲಾಪಗಳು ನಡೆಯುತ್ತಿವೆ. ಪ್ರಧಾನಿಗಳ ಈ ನಡೆ ಪ್ರಜಾಪ್ರಭುತ್ವ ಸರ್ಕಾರದ ಸಂಪ್ರದಾಯಗಳನ್ನು ಉಳಿಸಿಕೊಳ್ಳುವಂತೆ ಕಾಣುತ್ತಿಲ್ಲ ಎಂದಿದ್ದಾರೆ.

ಮರಾಠಿ ಭಾಷೆಯಲ್ಲಿ ಪ್ರಕಟವಾಗುವ ಸಾಮ್ನಾ ದಿನಪತ್ರಿಕೆಯಲ್ಲಿ ಶಿವಸೇನೆಯು ಮಧ್ಯ ಪ್ರದೇಶ ಸರ್ಕಾರವನ್ನು ಉರುಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸಂಸತ್ತಿನಲ್ಲಿ ಕಲಾಪ ನಡೆಸಲಾಗುತ್ತಿದೆ ಎಂದು ಆರೋಪಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights