ಫ್ಯಾಕ್ಟ್‌ಚೆಕ್: 1857ರ ದಂಗೆಯಲ್ಲಿ ಹೋರಾಡಿದ ಗಂಗಪ್ಪ ವಾಲ್ಮೀಕಿ ಎಂಬ ಯೋಧನನ್ನು ಕನ್ನಡ ನಾಡು ಮರೆತಿದೆಯೇ?

ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದ್ದು ಗಂಗಪ್ಪ ವಾಲ್ಮೀಕಿ ಎಂಬ ಸ್ವಾಂತತ್ರ ಸೇನಾನಿಯನ್ನು ಕನ್ನಡಿಗರು ಮತ್ತು ಕನ್ನಡ ಪರ ಸಂಘಟನೆಗಳು ಮೆರೆತು ಮಲಗಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಬರಹ ಕೆಳಗಿನಂತಿದೆ.

ಈ ಚಿತ್ರದಲ್ಲಿರುವ ಸ್ವಾತಂತ್ರ್ಯ ಸೇನಾನಿಯ ಹೆಸರು ಗಂಗಪ್ಪ ವಾಲ್ಮೀಕಿ. ಏಕಾಂಗಿಯಾಗಿ ಹೋರಾಡಿ ಬರೋಬ್ಬರಿ 200 ಬ್ರಿಟಿಷರ ಹೆಣ ಉರುಳಿಸಿದ್ದರು. 1859 ಸೆಪ್ಟೆಂಬರ್ 18 ರಂದು ಇವರನ್ನು ಖಾನಾಪುರದ ನಡುರಸ್ತೆಯಲ್ಲಿ ಗಲ್ಲಿಗೇರಿಸಲಾಯಿತು. ದೌರ್ಭಾಗ್ಯ ಏನೆಂದರೆ ಇವರು ಯಾವ ಇತಿಹಾಸದ ಪುಟ ಸೇರಿಲ್ಲ. ಎಂದು ಬರೆಯಲಾಗಿದೆ.

ಕನ್ನಡ ಪರ ಸಂಘಟನೆಗಳು ಕನ್ನಡಿಗನಾದ ಗಂಗಪ್ಪ ವಾಲ್ಮೀಕಿಯನ್ನು ಸ್ಮರಿಸುವ ಕೆಲಸ ಇಲ್ಲಿವರೆಗೂ ಮಾಡಿಲ್ಲ.ಪ್ರತಿಯೊಬ್ಬ ಸ್ವಾತಂತ್ರ್ಯ ಯೋಧರನ್ನು ಸ್ಮರಿಸಿ, ಗೌರವಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮನ್ನು ಬ್ರಿಟಿಷರಿಂದ ವಿಮೋಚನೆಗೊಳಿಸಿದ ಅಪ್ರತಿಮ ವೀರ ಸ್ವಾತಂತ್ರ್ಯ ಸೇನಾನಿ ಗಂಗಪ್ಪ ವಾಲ್ಮೀಕಿಯವರಿಗೆ ಶತಕೋಟಿ ನಮನಗಳು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಬಹುಪಾಲು ಬಲಪಂಥೀಯ ಪ್ರತಿಪಾದಕ ಫೇಸ್‌ಬುಕ್ ಪೇಜ್‌ಗಳಿಂದ ಈ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಮತ್ತು ಇದೇ ಹೇಳಿಕೆಯನ್ನು ದಾಖಲಿಸಿ ಫೋಟೊದೊಂದಿಗೆ ಪೋಸ್ಟ್‌ಅನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ಹಾಗಿದ್ದರೆ ಈ ಎಲ್ಲಾ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಫೊಸ್ಟ್‌ಗಳನ್ನು ಗಮನಿಸಿದ ಏನ್‌ಸುದ್ದಿ.ಕಾಂ ಫೇಸ್‌ಬುಕ್ ಪೋಸ್ಟ್‌ನ ಕೀ ವರ್ಡ್‌ಗಳಮ್ಮು ಬಳಸಿಕೊಂಡು ಹುಡುಕಾಟ ನಡೆಸಿದಾಗ ವೈರಲ್ ಫೋಟೊದಲ್ಲಿರುವ ವ್ಯಕ್ತಿ ಹೆಸರು ಗಂಗಪ್ಪ ವಾಲ್ಮೀಕಿ ಅಲ್ಲ ಎಂಬುದನ್ನು ಪತ್ತೆ ಹಚ್ಚಿದೆ.

ಫೋಟೋದಲ್ಲಿರುವ ವ್ಯಕ್ತಿ ಯಾರು?

ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಇಂತಹ ಉದಾತ್ತ ಧ್ಯೇಯದೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿರುವ ಕನ್ನಡಿಗನ ಇತಿಹಾಸದ ಬಗ್ಗೆ ತಿಳಿಯೋಣವೆಂದು ಗೂಗಲ್ ನಲ್ಲಿ ಸರ್ಚ್ ಮಾಡಿ ಪರಿಶೀಲಿಸಿದಾಗ, ಫೊಟೋದಲ್ಲಿರುವ ವ್ಯಕ್ತಿ ಹೆಸರು “ಮಾತಾದಿನ್ ಭಂಗಿ” ಎಂಬ ಮಾಹಿತಿ ಲಭ್ಯವಾಗಿದ್ದು ಈ ಕುರಿತು ನ್ಯೂಸ್‌ ಚೆಕ್ಕರ್ ವರದಿ ಮಾಡಿದೆ.

ಮಾತಾದಿನ್ ಭಂಗಿ ಬಗ್ಗೆ ತಿಳಿಯಲು ಮತ್ತಷ್ಟು ಸರ್ಚ್ ಮಾಡಿದಾಗ ಹೆರಿಟೇಜ್ ಎಂಬ ವೆಬ್‌ಸೈಟ್‌ನಲ್ಲಿ ಲೇಖನವನ್ನು ಕಂಡುಕೊಂಡಿದ್ದೇವೆ, ಅಲ್ಲಿ ವೈರಲ್ ಚಿತ್ರವನ್ನು ತೋರಿಸಲಾಗಿದ್ದು, ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ‘ಮಾತಾದಿನ್ ಭಂಗಿ’ ಎಂದು ಉಲ್ಲೇಖಿಸಲಾಗಿದೆ.
ಗಂಗೂ ಮೆಹ್ತಾರ್ (ಮಾತಾದಿನ್ ಭಂಗಿ) ಅವರ ಪೂರ್ವಜರು ಈಗಿನ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಅಕ್ಬರ್‌ಪುರ ಗ್ರಾಮದ ನಿವಾಸಿಗಳು. ಮೇಲ್ಜಾತಿಗಳ ಬಲವಂತದ ದುಡಿಮೆ, ಶೋಷಣೆ ಮತ್ತು ಅಮಾನವೀಯ ವರ್ತನೆಯಿಂದ ಬೇಸತ್ತು ಅವರ ಪೂರ್ವಜರು ಕಾನ್ಪುರ ನಗರದ ಚುನ್ನಿ ಗಂಜ್ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದರು.
ಯೂಟ್ಯೂಬ್ ಚಾನೆಲ್‌ನಲ್ಲಿ ಹಿಸ್ಟರಿ & ಮಿಸ್ಟರಿ ಎಂಬ ವೀಡಿಯೊದಲ್ಲಿ ವೈರಲ್ ಚಿತ್ರವನ್ನು ತೋರಿಸಲಾಗಿದೆ. ವಿಡಿಯೋ ನೋಡಿದ ನಂತರ ವೈರಲ್ ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ‘ಮಾತಾದಿನ್ ಭಂಗಿ’ ಎಂದು ತಿಳಿದುಬಂದಿದೆ.
ವಿಡಿಯೋವನ್ನು ಸೂಕ್ಷ್ಮವಾಗಿ ಹುಡುಕಿದಾಗ, ಮೇಲಿನ ವಿಡಿಯೊಗೆ ಸಂಬಂಧಿಸಿದ ಸುದ್ದಿ ‘ನ್ಯಾಷನಲ್ ದಸ್ತಕ್’  ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ನಮಗೆ ಕಂಡುಬಂದಿದೆ. ಸುದ್ದಿಯ ಪ್ರಕಾರ, ‘ಮಾತಾದಿನ್ ‘ 1857 ರ ಪ್ರಥಮ  ಸ್ವಾತಂತ್ರ್ಯ ಸಂಗ್ರಾಮದ ಪಿತಾಮಹ ಮಂಗಲ್ ಪಾಂಡೆಗೆ ಗ್ರೀಸ್ ಕಾಟ್ರಿಡ್ಜ್‌ಗಳ ಬಗ್ಗೆ ತಿಳಿಸಿದ ವ್ಯಕ್ತಿ ಎಂದು ವಿವರಿಸಲಾಗಿದೆ.
ಆ ಸಮಯದಲ್ಲಿ, ಹಸು ಮತ್ತು ಹಂದಿಮಾಂಸದಿಂದ ಕಾರ್ಟ್ರಿಡ್ಜ್ ಕ್ಯಾಪ್‌ಗಳನ್ನು ತಯಾರಿಸಲಾಗುತ್ತಿತ್ತು. ಈ ವಿಷಯ ಮಾತಾದಿನ್ ಮೆಹ್ತಾರ್ ಅವರಿಗೂ ತಿಳಿದಿತ್ತು ಏಕೆಂದರೆ ಅವರು ಸ್ವತಃ ಕಾರ್ಟ್ರಿಡ್ಜ್ ಮಾಡುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಗ್ರೀಸ್ ಕಾಟ್ರಿಡ್ಜ್‌ಗಳು ಪತ್ತೆಯಾದ ತಕ್ಷಣ, ಮಂಗಲ್ ಪಾಂಡೆ 1857 ರಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಗುಂಡಿಕ್ಕಿ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಬೆಂಕಿಯನ್ನು ಹೊತ್ತಿಸಿದರು.

ಯೂಟ್ಯೂಬ್‌ನಲ್ಲಿ ಕಂಡುಬರುವ ವೀಡಿಯೊದ ಪ್ರಕಾರ, ಬ್ರಿಟಿಷರು ಮಾತಾದಿನ್ ಮೆಹ್ತಾರ್ ಅವರನ್ನು ಕ್ರಾಂತಿಯನ್ನು ಪ್ರಚೋದಿಸಿದ ಪ್ರಮುಖ ಆರೋಪಿಯನ್ನಾಗಿ ಮಾಡಿದರು, ನಂತರ ಅವರನ್ನು ಗಲ್ಲಿಗೇರಿಸಲಾಯಿತು. ಆದರೆ ಅವರು 200 ಬ್ರಿಟಿಷರನ್ನು ಕೊಂದ ವಿಷಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಇಲ್ಲಿ ಒಂದು ಅಂಶವನ್ನು ಗಮನಿಸಬೇಕು ಅದೇನೆಂದರೆ, ಈತನ ಹೆಸರನ್ನು ಮಾತಾದಿನ್ ಭಂಗಿ, ಮಾತಾದಿನ್ ಮೆಹ್ತಾರ್ ಮತ್ತು ಗಂಗೂ ಮೆಹ್ತಾರ್ ಎಂದು ಉಲ್ಲೇಖಿಸಲಾಗಿದೆ. ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ ವೀರ ಮಂಗಲ ಪಾಂಡೆಯನ್ನು ಬ್ರಿಟಿಷರ ವಿರುದ್ದ ಅಣಿನೆರಸಿದ್ದು ಇದೇ ಮತದಿನ್ ಭಂಗಿ ಎನ್ನಲಾಗಿದೆ.

ಮಾತಾದಿನ್ ಭಂಗಿ ಅವರ ಪುಣ್ಯಸ್ಮರಣೆಯಂದು 2020 ಏಪ್ರಿಲ್ 7 ರಂದು ಪ್ರಿಯಾಂಕ ಗಾಂಧಿ ವಾದ್ರಾ ತಮ್ಮ ಫೇಸ್‌ಬುಕ್ ನಲ್ಲಿ ಪೋಸ್ಟ್‌ ಹಾಕುವ ಮೂಲಕ ಮತದಿನ್ ಭಂಗಿ ಅವರಿಗೆ ಹುತಾತ್ಮ ದಿನದ ನಮನಗಳನ್ನು ಸಲ್ಲಿಸಿದ್ದರು. ಅದನ್ನು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಗಂಗಪ್ಪ ವಾಲ್ಮಿಕಿ ಎಂದು ಉಲ್ಲೇಖಿಸಿರುವ ವ್ಯಕ್ತಿ ಹೆಸರು ಮಾತಾದಿನ್ ಭಂಗಿ ಎಂದು ಉಲ್ಲೇಖಿಸಲಾಗಿದ್ದು, 1857ರ ಹೋರಾಟದಲ್ಲಿ ಭಾಗವಹಿಸಿ 1859ರವರೆಗೂ ಮಂಗಲ್ ಪಾಂಡೆಯೊಂದಿಗೆ ಜೊತೆಯಾಗಿದ್ದರು. 1859 ರಲ್ಲಿ ಬ್ರಿಟಿಷರು ಮಾತಾದಿನ್ ಭಂಗಿ (ಗಂಗೂ ಮೆಹ್ತರ್) ಅವರನ್ನು ಗಲ್ಲಿಗೇರಿಸಿದರು.

ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಹೋರಾಡಿದ ಪ್ರತಿಯೊಬ್ಬರನ್ನು ಈ ನಾಡು ಸ್ಮರಿಸಬೇಕು ನಿಜ, ಆದರೆ ಸ್ಮರಿಸುವ ಬರದಲ್ಲಿ ಸುಳ್ಳ ಇತಿಹಾಸವನ್ನು ಸೃಷ್ಟಿಸಿ ಜನರನ್ನು ಧಿಕ್ಕು ತಪ್ಪಿಸಬಾರದು. ಈಗಾಗಲೇ ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಮೂಲವನ್ನೆ ನಾಶ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಪೋಸ್ಟ್‌ಗಳು ಇನ್ನಷ್ಟು ಅನಾಹುತ ಮಾಡುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ, ಫೇಸ್‌ಬುಕ್‌ನಲ್ಲಿ ಬಲಪಂಥೀಯ ಪ್ರತಿಪಾದಕರು ಹಂಚಿಕೊಂಡಿರುವ ಪೋಸ್ಟ್‌ಗಳಲ್ಲಿ ಹೇಳಿರುವಂತೆ ಗಂಗಪ್ಪ ವಾಲ್ಮೀಕಿ ಎಂಬುವ ಯಾವ ವ್ಯಕ್ತಿಯು 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಇರಲಿಲ್ಲ. ಮತ್ತು ಅವರು ಕನ್ನಡಿಗರಾಗಿದ್ದು  200 ಬ್ರಿಟಿಷ್ ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ಆಧಾರಗಳಿಲ್ಲ. ಇಂತಹ ಆಧಾರ ರಹಿತ ಪೋಸ್ಟ್‌ಗಳನ್ನು ಹಾಕುವ ಮೂಲಕ ಕನ್ನಡ ಪರ ಸಂಘಟನೆಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ.

ರಾಘವೇಂದ್ರ ಹಾಸನ
ಏನ್‌ಸುದ್ದಿ.ಕಾಂ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಠಾಣ್ ಚಿತ್ರದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights