ಫ್ಯಾಕ್ಟ್‌ಚೆಕ್: ಪಠಾಣ್ ಚಿತ್ರದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು ನಿಜವೇ?

‘ ಕೇಸರಿ ಉಡುಪಿನಲ್ಲಿ ಬೇಷರಮ್‌ ರಂಗ್‌’ ಹಾಡಿಗೆ ದೀಪಿಕಾ ಪಡುಕೋಣೆ ನೃತ್ಯ ಮಾಡಿರುವುದು ಹಿಂದೂ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಚಿತ್ರವನ್ನು ಬಹಿಷ್ಕರಿಸುವಂತೆ ಬಲಪಂಥೀಯ ಸಂಘಟನೆಗಳು ಕರೆ ನೀಡಿದ್ದವು. ಬಾಯ್ಕಾಟ್ ನಡುವೆಯೇ ಶಾರುಖ್‌, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ‘ಪಠಾಣ್‌’ ಚಿತ್ರ ಇಂದು ತೆರೆಕಂಡಿದೆ.

ಪಠಾಣ್ ಚಿತ್ರದ ಬಗ್ಗೆ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಇದು ಶಾರೂಖ್ ಖಾನ್ ಅವರ ಕೆಟ್ಟ ಚಿತ್ರ ಎಂದು ಸಿನಿಮಾ ವೀಕ್ಷಿಸಿ ಹೊರ ಬರುತ್ತಿರುವ ಪ್ರೇಕ್ಷಕರು ಹೇಳುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

https://twitter.com/RaviSANKHI/status/1618139542040776705?s=20&t=l1ROZQhHeGC-QooF4ihBIA

ಪ್ರೇಕ್ಷಕರು ಪಠಾನ್ ಚಿತ್ರವನ್ನು “ಪ್ಯಾಥಟಿಕ್ ಮತ್ತು SRK ಅವರ ಕೆಟ್ಟ ಚಲನಚಿತ್ರ” ಎಂದು ವಿಮರ್ಶಿಸುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಈ ಚಿತ್ರದ ಬಗ್ಗೆ ವೈರಲ್ ಆಗಿರುವ ವಿಡಿಯೋ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಪಠಾಣ್ ಚಿತ್ರದ ಬಗ್ಗೆ ವ್ಯಕ್ತವಾದ ಪ್ರತಿಕ್ರಿಯೆಯನ್ನು ಪರಿಶೀಲಿಸಿದಾಗ, ಇದು 21 ಡಿಸೆಂಬರ್ 2018 ರದ್ದು ಎಂದು ತಿಳಿದು ಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಶಾರುಖ್ ಖಾನ್, ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಅಭಿನಯದ “ಝೀರೋ” ಚಿತ್ರದ ವಿಮರ್ಶೆಗೆ ಸಂಬಂಧಿಸಿದೆ ಎಂದು ತಿಳಿದು ಬಂದಿದೆ.

ಕೆಲವು ಕೀ ಫ್ರೇಮ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, ಇದು 21 ಡಿಸೆಂಬರ್ 2018 ರಂದು ಪರಿಶೀಲಿಸಿದ YouTube ಚಾನೆಲ್ FilmiFever ಪ್ರಕಟಿಸಿದ “Zero” ಚಲನಚಿತ್ರದ ಸಾರ್ವಜನಿಕ ವಿಮರ್ಶೆಯ ವೀಡಿಯೊ ಎಂಉದು ಸ್ಪಷ್ಟವಾಗಿದೆ.ವೈರಲ್ ಕ್ಲಿಪ್ ಶಾರೂಖ್ ಅಭಿನಯದ 2018 ರಲ್ಲಿ ತೆರೆಕಂಡ “ಝೀರೋ” ಚಿತ್ರದ ಬಗ್ಗೆ ಪ್ರೇಕ್ಷಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ  ಎಂಬುದು ಸ್ಪಷ್ಟವಾಗಿದೆ.

ದಾಖಲೆ ಬರೆದ ಪಠಾಣ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೊ ಹಳೆಯದು ಮತ್ತು ಪಠಾಣ್ ಚಿತ್ರಕ್ಕೆ ಸಂಬಂಧಿಸಿಲ್ಲ. ಆದರೆ ಪಠಾಣ್ ಚಿತ್ರ ತೆರೆಕಂಡ ಮೊದಲೆ ದಿನವೇ ದಾಖಲೆಯನ್ನು ನಿರ್ಮಿಸಿದೆ ಎಂದು ಹೇಳಲಾಗಿದೆ.

‘ಬೇಷರಮ್‌ ರಂಗ್‌’ ಹಾಡಿನಿಂದ ವಿವಾದಕ್ಕೆ ಗುರಿಯಾಗಿದ್ದ ಶಾರುಖ್‌, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ‘ಪಠಾಣ್‌’ ಮೊದಲ ದಿನವೇ ₹57 ಕೋಟಿ ದಾಖಲೆ ಗಳಿಕೆ ಕಂಡಿದೆ. ವಿಶ್ಲೇಷಕರ ಪ್ರಕಾರ ಮುಂದಿನ 5 ದಿನಗಳವರೆಗೂ ಗಳಿಕೆ ಹೆಚ್ಚುವ ನಿರೀಕ್ಷೆಯಿದೆ. ಜ.26ರಂದು ರಜೆಯಿದ್ದು, ಬಿಡುಗಡೆಗೊಂಡ 2ನೇ ದಿನವೇ ಚಿತ್ರ ₹100 ಕೋಟಿ ಕ್ಲಬ್‌ ಸೇರುವ ನಿರೀಕ್ಷೆಯಿದೆ ಎಂದು ಚಿತ್ರೋದ್ಯಮ ವಿಶ್ಲೇಷಕ ತರಣ್‌ ಆದರ್ಶ್‌ ಟ್ವೀಟ್‌ ಮಾಡಿದ್ದಾರೆ.

ಇದರೊಂದಿಗೆ ಪಠಾಣ್‌ ಮೊದಲ ದಿನ ಗರಿಷ್ಠ ಗಳಿಕೆ ಕಂಡ ಬಾಲಿವುಡ್‌ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೀರ್‌ ಖಾನ್‌ ಅವರ ಹಿಂದೂಸ್ತಾನ್‌ ಮೊದಲ ದಿನ ₹50 ಕೋಟಿ ಗಳಿಸಿ ದಾಖಲೆ ಬರೆದಿತ್ತು. ಪಠಾಣ್‌ ಗಳಿಕೆ ಓಟ ನೋಡುತ್ತಿದ್ದಂತೆ ಬಾಯ್ಕಾಟ್‌ಗೆ ಕರೆ ನೀಡಿದ್ದ ಬಹುತೇಕರು ವರಸೆ ಬದಲಿಸಿ ತಣ್ಣಗಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪಠಾಣ್‌ ಪರ ಮತ್ತು ವಿರೋಧದ ಪೋಸ್ಟ್‌ಗಳು ಬರುತ್ತಿದ್ದು,  ಮೊದಲ ದಿನ ಪ್ರತಿಭಟನೆ, ಹನುಮಾನ್‌ ಚಾಲೀಸ್‌ ಪಠಿಸಿದವರಿಗೆ ಶಾರುಖ್‌ ಅಭಿಮಾನಿಗಳು ಚಿತ್ರ ಗೆಲ್ಲಿಸುವ ಮೂಲಕ ಖಾರವಾದ ಉತ್ತರ ನೀಡುತ್ತಿದ್ದಾರೆ.

ಬಹುತೇಕ ನೆಟ್ಟಿಗರು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಬಾಲಿವುಡ್‌ ಚಿತ್ರ ವಿಮರ್ಶಕ ತರಣ್‌ ಆದರ್ಶ್‌, ಚಿತ್ರವನ್ನು ಒಂದೇ ಸಾಲಿನಲ್ಲಿ ಬ್ಲಾಕ್‌ಬಸ್ಟರ್‌ ಎಂದು ಬಣ್ಣಿಸಿದ್ದಾರೆ. ಸುದೀರ್ಘ ವಿರಾಮದ ಬಳಿಕ ಶಾರುಖ್‌ ಖಾನ್‌ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದು, ಭರ್ಜರಿ ಆ್ಯಕ್ಷನ್‌ನೊಂದಿಗೆ ಅಭಿಮಾನಿಗಳ ಮನ ಗೆದ್ದಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊ 2018ರಲ್ಲಿ ತೆರೆಕಂಡ ಝೀರೋ ಚಿತ್ರಕ್ಕೆ ಸಂಬಂಧಿಸಿದ ಅಭಿಪ್ರಾಯವನ್ನು, ಪಠಾಣ್ ಚಿತ್ರವನ್ನು ಕಟ್ಟ ಸಿನಿಮಾ ಎಂದು ಪ್ರೇಕ್ಷಕರು ಸಿನಿಮಾ ಬಗ್ಗೆ ಬೇಸರ  ವ್ಯಕ್ತಪಡಿಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್‌ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿ ಕುರಿತು BBC ಸಾಕ್ಷ್ಯಚಿತ್ರದ ನಿರ್ಮಾಪಕರೊಂದಿಗೆ ರಾಹುಲ್ ಗಾಂಧಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights