ಫ್ಯಾಕ್ಟ್‌ಚೆಕ್: ಮೋದಿ ಕುರಿತು BBC ಸಾಕ್ಷ್ಯಚಿತ್ರದ ನಿರ್ಮಾಪಕರೊಂದಿಗೆ ರಾಹುಲ್ ಗಾಂಧಿ?

ಪ್ರಧಾನಿ ನರೇಂದ್ರ ಮೋದಿ ಕುರಿತಾದ BBC ಸಾಕ್ಷ್ಯಚಿತ್ರ ‘ಇಂಡಿಯಾ ದಿ ಮೋದಿ ಕ್ವೆಶನ್’ಗೆ ಸಂಬಂಧಿಸಿದ ಹಲವು ಯೂಟ್ಯೂಬ್ ವಿಡಿಯೊಗಳು ಮತ್ತು ಲಿಂಕ್‌ಗಳನ್ನು ಹಂಚಿಕೊಂಡಿರುವ ಟ್ವೀಟ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

2002ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದಿದ್ದ ಗಲಭೆಗಳಿಗೆ ಮೋದಿಯವರೆ ಹೊಣೆ ಮತ್ತು ಭಾರತದಲ್ಲಿ ಮೋದಿ ಆಡಳಿತದಲ್ಲಿ ಗಲಭೆಗಳು ಎಂದು ಎರಡು ಕಂತಿನ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ಆದರೆ, ಇದನ್ನು ತಳ್ಳಿಹಾಕಿರುವ ವಿದೇಶಾಂಗ ಸಚಿವಾಲಯವು, ಇದೊಂದು ಅಪಪ್ರಚಾರದ ಉದ್ದೇಶ ಹೊಂದಿರುವ ಸಾಕ್ಷ್ಯಚಿತ್ರ ಮತ್ತು ವಸ್ತುನಿಷ್ಠವಲ್ಲದ ಹಾಗೂ ವಸಾಹತುಶಾಹಿ ಮನಸ್ಥಿತಿಯ ಪ್ರತಿಬಿಂಬವಾಗಿದೆ ಎಂದು ಹೇಳಿದೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಸತ್ಯವನ್ನು ಬಚ್ಚಿಡಲು ಸಾಧ್ಯವಿಲ್ಲ ” ಎಂದು ಹೇಳಿ ಸಾಕ್ಷ್ಯಚಿತ್ರವನ್ನು ಬೆಂಬಲಿಸಿದರು.

“ಸರಿಯಾಗಿ ಆರು ತಿಂಗಳ ಹಿಂದೆ, ರಾಹುಲ್ ಗಾಂಧಿ ಯುಕೆ ಯಲ್ಲಿದ್ದಾಗ, “ಭಾರತದಾದ್ಯಂತ ಸೀಮೆಎಣ್ಣೆ ಸುರಿಯಲಾಗಿದೆ, ಈಗ ಅದಕ್ಕೆ ಬೆಂಕಿಯ ಕಿಡಿ ಬೇಕು” ಎಂದು ಹೇಳಿದ್ದರು. ಭಾರತದಲ್ಲಿ ಗಲಭೆಗಳನ್ನು ಪ್ರಚೋದಿಸಲು BBC ಸಾಕ್ಷ್ಯಚಿತ್ರದ ಹಿಂದೆ ಕಾಂಗ್ರೆಸ್ ಪಿತೂರಿ? BBC ಸಾಕ್ಷ್ಯಚಿತ್ರ ನಿರ್ಮಾಪಕರೊಂದಿಗೆ ಪಪ್ಪು!” ಎಂದು ಪ್ರತಿಪಾದಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ವಿವಾದಾತ್ಮಕ BBC ಸಾಕ್ಷ್ಯಚಿತ್ರದ ನಿರ್ಮಾಪಕರ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇರುವ ಫೋಟೋ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಅವರು ಮೋದಿಯ ಕುರಿತು BBC ಸಾಕ್ಷ್ಯಚಿತ್ರ ನಿರ್ಮಿಸಿದ ನಿರ್ಮಾಪಕರೊಂದಿಗೆ ಪೋಸ್ ನೀಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಪ್ರಸಾರ ಮಾಡಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ,  ವೈರಲ್ ಫೋಟೊದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಕಂಡುಬರುವ ವ್ಯಕ್ತಿಗಳು ಬ್ರಿಟನ್‌ನ ಲೇಬರ್ ಪಕ್ಷದ ಮಾಜಿ ನಾಯಕ ಜೆರೆಮಿ ಕಾರ್ಬಿನ್ ಮತ್ತು ಭಾರತೀಯ ಹೂಡಿಕೆದಾರ ಸ್ಯಾಮ್ ಪಿತ್ರೋಡಾ ಎಂಬ ಮಾಹಿತಿ ಲಭ್ಯವಾಗಿದೆ.

ಮೇ 2022 ರಿಂದ ಒಂದೇ ಫೋಟೋವನ್ನು ಹೊಂದಿರುವ ಅನೇಕ ಮಾಧ್ಯಮ ವರದಿಗಳು ಲಭ್ಯವಾಗಿದ್ದು , ಈ ವರದಿಗಳ ಪ್ರಕಾರ, ಫೋಟೋವು 2022 ರಲ್ಲಿ ಬ್ರಿಟನ್‌ನ ಅಂದಿನ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಮತ್ತು ಭಾರತೀಯ ಹೂಡಿಕೆದಾರ ಸ್ಯಾಮ್ ಪಿತ್ರೋಡಾ ಅವರನ್ನು ಇಂಗ್ಲೆಂಡ್‌ನ  ಲಂಡನ್‌ನಲ್ಲಿ ಭೇಟಿಯಾದ ರಾಹುಲ್ ಗಾಂಧಿ ಎಂದು ವರದಿ ಮಾಡಿದೆ.

2022ರಲ್ಲಿ ಬ್ರಿಟನ್‌ನ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಅವರೊಂದಿಗೆ ರಾಹುಲ್ ಗಾಂಧಿ ಭೇಟಿಯಾದಾಗ ಸೆರೆಹಿಡಿದ ಫೋಟೋವನ್ನು ಮೇ 23, 2022 ರಂದು ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್‌ನ ಟ್ವಿಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವೈರಲ್ ಫೋಟೋದಲ್ಲಿ ಇರುವುದು ಪ್ರಧಾನಿ ನರೇಂದ್ರ ಮೋದಿ ಕುರಿತಾದ ವಿವಾದಾತ್ಮಕ BBC ಸಾಕ್ಷ್ಯಚಿತ್ರ ‘ಇಂಡಿಯಾ ದಿ ಮೋದಿ ಕ್ವೆಶನ್’ ಚಿತ್ರದ ನಿರ್ಮಾಪಕರಲ್ಲ ಎನ್ನುವುದು ಸ್ಪಷ್ಟವಾಗಿದೆ.

BBC ಸಾಕ್ಷ್ಯಚಿತ್ರದ ನಿರ್ಮಾಕರು ಯಾರು?

BBC ಪ್ರಕಾರ, ಸರಣಿಯ ನಿರ್ಮಾಪಕ ರಿಚರ್ಡ್ ಕುಕ್ಸನ್ ಮತ್ತು ಅದರ ಕಾರ್ಯನಿರ್ವಾಹಕ ನಿರ್ಮಾಪಕ ಮೈಕ್ ರಾಡ್ಫೋರ್ಡ್.

BBCಯು ಅದರ ಕಾರ್ಯನಿರ್ವಾಹಕ ಮಂಡಳಿ ಮತ್ತು UKಯ ಸರ್ಕಾರ-ಅನುಮೋದಿತ ನಿಯಂತ್ರಣ ಪ್ರಾಧಿಕಾರ, Ofcom ನಿಂದ ನಿಯಂತ್ರಿಸಲ್ಪಡುತ್ತದೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, BBC ಯ ಹಣದ ಪ್ರಮುಖ ಭಾಗವು ವಾರ್ಷಿಕ ದೂರದರ್ಶನ ಶುಲ್ಕದಿಂದ ಬರುತ್ತದೆ. ಬ್ರಿಟಿಷ್ ಬ್ರಾಡ್‌ಕಾಸ್ಟರ್ ತನ್ನ ವಾಣಿಜ್ಯ ಅಂಗಸಂಸ್ಥೆಗಳಾದ BBC ಸ್ಟುಡಿಯೋಸ್ ಮತ್ತು BBC ಸ್ಟುಡಿಯೋವರ್ಕ್ಸ್‌ನಿಂದ ಆದಾಯವನ್ನು ಪಡೆಯುತ್ತದೆ.

ಮೋದಿ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದೊಂದಿಗೆ ಕಾರ್ಬಿನ್ ಅವರ ಸಂಬಂಧದ ಬಗ್ಗೆ ನಮಗೆ ಯಾವುದೇ ವಿಶ್ವಾಸಾರ್ಹ ವರದಿಯನ್ನು ಕಂಡುಹಿಡಿಯಲಾಗಲಿಲ್ಲ. ವಾಸ್ತವವಾಗಿ, 2019 ರಲ್ಲಿ, ಕಾರ್ಬಿನ್ ಬೆಂಬಲಿಗರು ಬಿಬಿಸಿ ಬೋರಿಸ್ ಜಾನ್ಸನ್ ಪರವಾಗಿದ್ದಾರೆ ಎಂದು ಆರೋಪಿಸಿದರು.

BBC ಸಾಕ್ಷ್ಯಚಿತ್ರದ ನಿರ್ಮಾಪಕರನ್ನು ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ ಎಂದು 2022 ರಲ್ಲಿ ಬ್ರಿಟನ್‌ನ ಅಂದಿನ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಮತ್ತು ಭಾರತೀಯ ಹೂಡಿಕೆದಾರ ಸ್ಯಾಮ್ ಪಿತ್ರೋಡಾ ಅವರೊಂದಿಗೆ ತೆಗಿಸಿದ ಫೋಟೋವನ್ನು BBC ಸಾಕ್ಷ್ಯಚಿತ್ರದ ನಿರ್ಮಾಪಕರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಇಂಗ್ಲೆಂಡ್‌ನ ಸೌತ್ ಹೌಸ್‌ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ರಿಯಲ್ ಫೋಟೊ ಇದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights