Lock down : ದೇವಸ್ಥಾನಗಳಲ್ಲಿ ಮತ್ತೆ ಘಂಟಾನಾದ, ತೀರ್ಥವಿಲ್ಲ, ಪ್ರಸಾದವಿಲ್ಲ ಕೇವಲ ದರ್ಶನ..
ಲಾಕ್‌ಡೌನ್ ಕಾರಣ ಕಳೆದೆರಡು ತಿಂಗಳುಗಳಿಂದ ಬಾಗಿಲು ಬಂದ್ ಆಗಿರುವ ದೇವಸ್ಥಾನಗಳಲ್ಲಿ ಮತ್ತೆ ಘಂಟಾನಾದ ಮೊಳಗುವ ಲಕ್ಷಣಗಳಿವೆ.ದೇವಸ್ಥಾನಗಳ ಬಾಗಿಲು ತೆರೆಯಲು ತೀವ್ರ ಒತ್ತಡ ಇದ್ದು, ಮುಂದಿನ ವಾರದಿಂದ ಭಕ್ತರಿಗೆ ದೇವರು ದರುಶನ ಕರುಣಿಸವ ಸಾಧ್ಯತೆ ಇದೆ.

ಒಂದು ವೇಳೆ ಸರಕಾರ ಅವಕಾಶ ನೀಡಿದರೇ ದೇವಸ್ಥಾನಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಇಲಾಖೇ ಸಿದ್ಧಪಡಿಸಿದೆ ಎಂದು ವರದಿಯಾಗಿದೆ.ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರೂ ಸಾಮಾಜಿಕ ಅಂತರ, ಮುಸುಕು ಕಡ್ಡಾಯ ಮಾಡಲಾಗುತ್ತದೆ. ಮುಖ್ಯವಾಗಿ ತೀರ್ಥ, ಪ್ಸಾದಗಳ ವಿತರಣೆಗೆಊ ಬ್ರೇಕ್ ಬೀಳಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.
ಇದೇ ವೇಳೆ ಮುಮದಿನ ವಾರದಿಂದ ತನ್ನ ಬಾಗಿಲು ತೆರೆಯಲು ತಿರುಪತಿಯ ತಿಮ್ಮಪ್ಪನ ದೇವಸ್ಥಾನ ಸಹ ಸಜ್ಜಾಗುತ್ತಿರುವ ವರದಿಗಳಿವೆ.ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರತಿ ಸಾಲಿನಲ್ಲಿ ಬರುವವರಿಗೆ ಕಟಕಟೆಗಳನ್ನು ಹಾಕಲಾಗುತ್ತಿದೆ ಎಂದು ವರದಿಯಾಗಿದೆ.

ಕೊರೋನಾ ವಿರುದ್ಧ ಸಮರದ ಅಂಗವಾಗಿ ಮಾರ್ಚ್ 25ರಿಂದ ಹೇರಲಾದ ಲಾಕ್‌ಡೌನ್ ಕಾರಣ ದೇಶಾದ್ಯಂತ ಎಲ್ಲ ದೇಗುಲಗಳನ್ನು ಸಹ ಬಂದ್ ಮಾಡಲಾಗಿತ್ತು.ದೇವಸ್ಥಾನಗಳಿಗೆ ಭಕ್ತರ ಪ್ರವೇಶವನ್ನು ನಿಶೇಧಿಸಲಾಗಿದ್ದರೂ ನಿತ್ಯ ದೇವರ ಪೂಜಾ ವಿಧಿ ನೆರವೇರಿಸಲು ಅರ್ಚಕರಿಗೆ ಅವಕಾಶ ಮಾಡಿಕೊಡಲಾಗಿತ್ತು.
ದೇವಾಲಯಗಳು ಬಂದ್ ಆದ ಕಾರಣ ಅರ್ಚಕ ವೃತ್ತಿ ಮಾತ್ರವಲ್ಲದೇ ಇತರ ಹಲವಾರು ಉಪ ವೃತ್ತಿಗಳ ಅಸಂಖ್ಯ ಜನರ ದಿನದ ಬದುಕಿತೆ ತೀವ್ರ ತೊಂದರೆ ಉಂಟಾಗಿದೆ.ಮೂರನೇ ಹಂತದ ಲಾಕ್‌ಡೌನ್ ಆರಮಭದ ಸಂದರ್ಭದಲ್ಲಿ ಹಲವಾರು ವಾಣಿಜ್ಯಿಕ ಮತ್ತು ಇತರ ವೃತ್ತಿಗಳ ಪುನಾರಂಭಕ್ಕೆ ಅವಕಾಶ ಮಾಡಿಕೊಡಲಾಗಿತ್ತು, ಆದರೆ ದೇವಾಲಯಗಳಿಗೆ ಯಾವುದೇ ವಿನಾಯಿತಿ ನೀಡಿರಲಿಲ್ಲ.
ಇದೇ ವೇಳೆ ಅರ್ಚಕರು ಮತ್ತು ದೇವಾಲಯಗಳಿಗೆ ಸಂಬಂಧಿಸಿದ ಇತರ ಉಪ ಕಸುಬುಗಳಲ್ಲಿ ತೊಡಗಿರುವವರ ಜೀವನೋಪಾಯಕ್ಕೆಂದು ವಿಶೇಷ ಧನ ಸಹಾಯ ನೀಡವಂತೆ ಸರಕಾರಕ್ಕೆ ಮೊರೆ ಇಡಲಾಗಿತ್ತು.
ಈ ಮಧ್ಯೆ ಮೂರನೇ ಹಂತದ ಲಾಕ್‌ಡೌನ್ ಇದೇ 17ಕ್ಕೆ ಕೊನೆಗೊಳ್ಳಲಿದ್ದು, ಒಂದು ವೇಳೆ ವಿಸ್ತರಣೆಯಾದರೂ ಬಹುತೇಕ ಎಲ್ಲ ಸಾರ್ವಜನಿಕ ಚಟುವಟಿಕೆಗಳಿಗೆ ರಿಯಾಯಿತಿ ನೀಡುವ ಸಾಧ್ಯತೆ ಇದೆ.

