ತಮಿಳುನಾಡು: ಚುನಾವಣೆಗೂ ಮುನ್ನವೇ ಮೈತ್ರಿಯಲ್ಲಿ ಬಿಕ್ಕಟ್ಟು; DMK ವಿರುದ್ಧ ಸಿಟ್ಟಾದ ಕಾಂಗ್ರೆಸ್‌!

ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌-ಡಿಎಂಕೆ ನೇತೃತ್ವದ ಮೈತ್ರಿಯಲ್ಲಿ ಸೀಟು ಹಂಚಿಕೆಯ ಪ್ರಕ್ರಿಯೆ ಗರಿಗೆದರಿದೆ. ಅದರೆ, ಎಲ್ಲಾ ಪಕ್ಷಗಳು ಹೆಚ್ಚು ಸ್ಥಾನಗಳಿಗಾಗಿ ಪಟ್ಟು ಹಿಡಿದಿದ್ದು, ಸದ್ಯ ಮೈತ್ರಿಯಲ್ಲಿ ಬಿಕ್ಕಟ್ಟು ಶುರವಾಗಿದೆ.

ತಮಿಳುನಾಡಿನ 234 ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸುಮಾರು 35 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದು, 35 ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಡಿಎಂಕೆ ಮುಂದೆ ಬೇಡಿಕೆ ಇಟ್ಟಿದೆ. ಆದರೆ, ಕಾಂಗ್ರೆಸ್‌ 18 ರಿಂದ 20 ಕ್ಷೇತ್ರಗಳನ್ನಷ್ಟೇ ಬಿಟ್ಟು ಕೊಡುವುದಾಗಿ ಡಿಎಂಕೆ ಹೇಳುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟದ ದೊಡ್ಡ ಪಕ್ಷವಾಗಿದ್ದು, ಸಹಜವಾಗಿಯೇ ನಾಯಕತ್ವ ವಹಿಸಿಕೊಂಡಿದೆ.

ಅದಷ್ಟೇ ಅಲ್ಲದೆ, ಎಡ ಪಕ್ಷಗಳು ಸಹ ಡಿಎಂಕೆ ನಡೆಗೆ ಅಸಂತೋಷ ವ್ಯಕ್ತಪಡಿಸಿವೆ. ಸಿಪಿಐ, ಸಿಪಿಐಎಂ ಪಕ್ಷಗಳು ಕ್ರಮವಾಗಿ 10 ರಿಂದ 12 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇರಾದೆ ಹೊಂದಿವೆ. ಆದರೆ ಡಿಎಂಕೆ ಕೇವಲ 5 ರಿಂದ 6 ಕ್ಷೇತ್ರ ಬಿಟ್ಟುಕೊಡಲು ತಯಾರಾಗಿದೆ. ಹೀಗಾಗಿ ಸ್ಥಾನ ಹಂಚಿಕೆ ಗೊಂದಲಕ್ಕೆ ಬಿದ್ದಿದ್ದು, ಎಡ ಪಕ್ಷಗಳ ನಾಯಕರು ಸುದ್ದಿಗೋಷ್ಠಿಯಿಂದಲೇ ದೂರವುಳಿದಿದ್ದಾರೆ.

ಇದರ ನಡುವೆ ಡಿಎಂಕೆ ಪಕ್ಷ ಮುಸ್ಲಿಂ ಲೀಗ್ ಹಾಗೂ ಎಂಎಂಕೆ ಜೊತೆ ಸ್ಥಾನ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಎರಡು ಪಕ್ಷಗಳು ಕ್ರಮವಾಗಿ 3 ಹಾಗೂ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ. ಉಳಿದಂತೆ ವೈಕೋ ನಾಯಕತ್ವದ ಎಂಡಿಎಂಕೆ ಹಾಗೂ ವಿಸಿಕೆ ಪಾರ್ಟಿ ಜೊತೆ ಸ್ಥಾನ ಹೊಂದಾಣಿಕೆ ಬಹುತೇಕ ಅಂತಿಮಗೊಂಡಿದೆ.

ಇತ್ತ ಎನ್ ಡಿಎ ಮೈತ್ರಿಕೂಟದಲ್ಲೂ ಇದೆ ಪರಿಸ್ಥಿತಿ ಇದ್ದು, ಎಐಎಡಿಎಂಕೆ ಬಿಜೆಪಿ ಕೇಳಿದಷ್ಟು ಸ್ಥಾನ ನೀಡಲು ನಿರಾಕರಿಸಿದೆ. ಅಬ್ಬಬ್ಬಾ ಅಂದರೆ 20 ಸೀಟು ನೀಡುವುದಾಗಿ ಎಐಎಡಿಎಂಕೆ ಹೇಳುತ್ತಿದೆ. ಆದರೆ ಕೇಸರಿ ಪಡೆ ಶತಾಯಗತಾಯ ಇದನ್ನು ವಿರೋಧಿಸಿದ್ದು, ಹೆಚ್ಚಿನ ಸ್ಥಾನ ನೀಡುವಂತೆ ದುಂಬಾಲು ಬಿದ್ದಿದೆ.

ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ದ್ರಾವಿಡ ನಾಡಿನಲ್ಲಿ BJP ಮೈತ್ರಿಗೆ ಭಾರೀ ಮುಖಭಂಗ; DMK-ಕಾಂಗ್ರೆಸ್‌ಗೆ ಅಧಿಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights