ಚುನಾವಣಾ ಸಮೀಕ್ಷೆ: ದ್ರಾವಿಡ ನಾಡಿನಲ್ಲಿ BJP ಮೈತ್ರಿಗೆ ಭಾರೀ ಮುಖಭಂಗ; DMK-ಕಾಂಗ್ರೆಸ್‌ಗೆ ಅಧಿಕಾರ

ಪಂಚರಾಜ್ಯಗಳ ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ, ಚುನಾವಣಾ ಸಮೀಕ್ಷೆಗಳ ಸದ್ದು ಹೆಚ್ಚಾಗಿದೆ. ತಮಿಳುನಾಡಿನ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆಗಳು ನಡೆಯಲಿದ್ದು, ಈ ಬಾರಿ ಡಿಎಂಕೆ-ಕಾಂಗ್ರೆಸ್‌ ಮೈತ್ರಿ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾ ಪೂರ್ವ ಎಬಿಪಿ ಸಿ-ವೋಟರ್‌ ಸಮೀಕ್ಷೆ ತಿಳಿಸಿದೆ.

ತಮಿಳುನಾಡಿನಲ್ಲಿ ಆಡಳಿತ ವಿರೋಧ ಅಲೆ ಭಾರೀ ಪ್ರಮಾಣದಲ್ಲಿದ್ದು, ಎಐಡಿಎಂಕೆ ಪಕ್ಷಕ್ಕೆ ಬಿನ್ನಡೆಯಾಗಲಿದೆ. ಅಲ್ಲದೆ, ಎಐಡಿಎಂಕೆ-ಬಿಜೆಪಿ ಮೈತ್ರಿಗೆ ಇದು ದೊಡ್ಡ ಪೆಟ್ಟುಕೊಡಲಿದ್ದು, ಆಡಳಿತಾರೂಢ ಮೈತ್ರಿ ಪಕ್ಷಗಳು ಸೋಲನ್ನು ಅನುಭವಿಸಲಿವೆ ಎಂದು ಸಮೀಕ್ಷೆ ಹೇಳಿದೆ.

ದ್ರಾವಿಡ ನಾಡಿನ 234 ಕ್ಷೇತ್ರಗಳ ಪೈಕಿ 158-166 ಕ್ಷೇತ್ರಗಳನ್ನು ಡಿಎಂಕೆ ಪಡೆದುಕೊಳ್ಳಲಿದೆ. ಆಡಳಿತಾರೂಢ ಅಣ್ಣಾಡಿಎಂಕೆ ಪಕ್ಷವು 60-68 ಸ್ಥಾನಕ್ಕೆ ಕುಸಿಯಲಿದೆ. ಉಳಿದ ಪಕ್ಷಗಳು 06-10 ಸ್ಥಾನಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದೆ.

ಜಯಲಲಿತಾ ಮತ್ತು ಕರುಣಾನಿಧಿ ಅವರ ನಿಧನದ ನಂತರ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಚುನಾವಣೆ ನಡೆಯುತ್ತಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಕಣಕ್ಕಿಳಿದರೆ, ಡಿಎಂಕೆಯೊಂದಿಗೆ ಕಾಂಗ್ರೆಸ್‌ ಅಖಾಡಕ್ಕಿಳಿಯಲಿದೆ. ಅಲ್ಲದೆ, ಸ್ಟಾರ್‌ ನಟ ಕಮಲ್‌ ಹಾಸನ್‌ ಅವರ ಪಕ್ಷವು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿರುವ ಶಶಿಕಲಾ ಕೂಡ ಚುನಾವಣಾ ಕಣದಲ್ಲಿ ಸದ್ದು ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

ತಮಿಳುನಾಡಿನಲ್ಲಿ ಏಪ್ರಿಲ್‌ 06 ರಂದು ಚುನಾವಣೆ ನಡೆಯಲಿದೆ. ಮೇ 02ರಂದು ಫಲಿತಾಂಶ ಪ್ರಕಟವಾಗಿಲಿದೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಅಮಿತ್‌ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪುದುಚೇರಿ ಮಾಜಿ ಸಿಎಂ ಎಚ್ಚರಿಕೆ!

ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ರಾಹುಲ್‌ಗಾಂಧಿ ಬೆಸ್ಟ್‌; ಕಾಂಗ್ರೆಸ್‌ಗೆ ಚುನಾವಣಾ ಕಣದಲ್ಲಿರುವ 2 ರಾಜ್ಯಗಳ ಬೆಂಬಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights