ನಿಜವಾದ ಪ್ರೀತಿ: ವಯಸ್ಸಾದ ದಂಪತಿಗಳ ಹೃದಯ ಸ್ಪರ್ಶಿಸುವ ವಿಡಿಯೋ ವೈರಲ್!

ಮನುಷ್ಯನಿಗೆ ಸಾವು ಬಂದ್ರು ಪ್ರೀತಿಗೆ ಮಾತ್ರ ಸಾವಿಲ್ಲ ಅನ್ನೋದಕ್ಕೆ ಇಲ್ಲೋಂದು ಒಳ್ಳೆ ನಿದರ್ಶನವಿದೆ. ಇಳಿ ವಯಸ್ಸಿನ ವೃದ್ಧ ದಂಪತಿ ವೀಡಿಯೋ ನಿಜಕ್ಕೂ ಪ್ರೀತಿಗೆ ಸಾವಿಲ್ಲ ಎನ್ನುವುದನ್ನ ತೋರಿಸಿದೆ. ಈ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್ ಆಗಿದೆ. ವಯಸ್ಸಾದ ದಂಪತಿಗಳ ಈ ವೀಡಿಯೊ ತುಂಬಾ ಹೃದಯಸ್ಪರ್ಶಿಯಾಗಿದ್ದು ವೀಡಿಯೊವನ್ನು ನೋಡಿದರೆ ನಿಮ್ಮ ಮುಖದಲ್ಲಿ ಮಂದಹಾಸ ಮೂಡುವುದು ಖಚಿತ.

ಈ ವೀಡಿಯೊದಲ್ಲಿ ನೀವು ನೋಡುವಂತೆ, ದಂಪತಿಗಳು ಕಡಲತೀರದ ಮೇಲೆ ಸಾಕಷ್ಟು ಆನಂದಿಸುತ್ತಿದ್ದಾರೆ. ವಾಸ್ತವವಾಗಿ, ಈ ವಯಸ್ಸಾದ ದಂಪತಿಗಳು ಸಮುದ್ರ ತೀರದಲ್ಲಿ ವಿಭಿನ್ನ ಶೈಲಿಯಲ್ಲಿ ಆನಂದಿಸುತ್ತಿದ್ದಾರೆ. ವಯಸ್ಸಾದ ದಂಪತಿಗಳು ಸಮುದ್ರದಲ್ಲಿ ಸ್ನಾನ ಮಾಡಲು ಹೋಗಲಿಲ್ಲ . ಬದಲಿಗೆ ಪತಿ ಹೆಂಡತಿಯನ್ನು ಕುರ್ಚಿಯ ಮೇಲೆ ಕೂಡಿಸಿ ನಂತರ ಮಗ್ನಿಂದ ಅವರ ಮೇಲೆ ನೀರು ಸುರಿಯುತ್ತಾರೆ.

ಅಂದಹಾಗೆ, ಈ ಮುದ್ದಾದ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪನ್ಶು ಕಬ್ರಾ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ನೋಡಿದ ಜನ ಸಂತೋಷದ ಕಾಮೆಂಟ್ ಮಾಡಿದ್ದಾರೆ.

ಈ ವೀಡಿಯೊವನ್ನು ಹಂಚಿಕೊಂಡ ಐಪಿಎಸ್ ಅಧಿಕಾರಿ, ‘ನಿಜವಾದ ಪುರುಷರು ಯಾವಾಗಲೂ ತಮ್ಮ ಪಾಲುದಾರನಿಗೆ ಗೌರವ, ಬೆಂಬಲ ಮತ್ತು ಕಾಳಜಿಯನ್ನು ತೋರಿಸುತ್ತಾರೆ ‘ ಈ ವೀಡಿಯೊ ಅನೇಕ ಜನರ ಹೃದಯವನ್ನು ಗೆದ್ದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights