ಹೃದಯಾಘಾತದಿಂದ ಪ್ರಯಾಣಿಕ ಸಾವು : ತುರ್ತು ಲ್ಯಾಂಡಿಂಗ್ ಆದ ಇಂಡಿಗೋ ವಿಮಾನ!

ಕರಾಚಿಯ ಜಿನ್ನಾ ಟರ್ಮಿನಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಭಾರತೀಯ ವಾಣಿಜ್ಯ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಭಾರತದ ಖಾಸಗಿ ವಿಮಾನಯಾನ ಇಂಡಿಗೊ ವಿಮಾನ ಶಾರ್ಜಾದಿಂದ ಲಕ್ನೋಗೆ ಹೋಗುವಾಗ ಘಟನೆ ಸಂಭವಿಸಿದೆ. ಪ್ರಯಾಣಿಕನೊಬ್ಬನಿಗೆ ತೀವ್ರ ಎದೆ ನೋವು ಕಾಣಿಸಿಕೊಂಡ ಪರಿಣಾಮ ವಿಮಾನದ ಕ್ಯಾಪ್ಟನ್ ಕರಾಚಿ ವಾಯು ಸಂಚಾರ ನಿಯಂತ್ರಣವನ್ನು ಸಂಪರ್ಕಿಸಿ ಮಾನವೀಯ ನೆಲೆಯಲ್ಲಿ ಕರಾಚಿಯಲ್ಲಿ ಇಳಿಯಲು ಅನುಮತಿ ಕೋರಿದರು.

ಪಾಕಿಸ್ತಾನದ ವಾಯು ಸಂಚಾರ ನಿಯಂತ್ರಣ ಅಧಿಕಾರಿಗಳು ವಿಮಾನವನ್ನು ಮಾನವೀಯ ನೆಲೆಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಅನುಮತಿಸಿದರೆ, ಪ್ರಯಾಣಿಕರನ್ನು ಉಳಿಸಲಾಗಲಿಲ್ಲ. ವಿಮಾನದಲ್ಲೇ ತುರ್ತು ಚಿಕಿತ್ಸೆ ನೀಡಲಾಗಿದ್ದರೂ ಪ್ರಯಾಣಿಕ ಬದುಕುಳಿಯಲಿಲ್ಲ ಎಂದು ಇಂಡಿಗೋ ಅಧಿಕಾರಿಗಳು ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights