Lockdown : ಜನರಿಂದ ಲಾಕ್ ಡೌನ್ ಸಡಿಲಿಕೆಯ ದುರುಪಯೋಗ – CM BSY ಆಕ್ರೋಶ…

ಜನರು  ಲಾಕ್ ಡೌನ್ ಸಡಿಲಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು  ಅಧಿಕಾರಿಗಳ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿಸದ್ದಾರೆ.. ಕೊರೋನಾ ಸೋಂಕು ತಡೆಗಟ್ಟಲು ಹೇರಲಾಗಿದ್ದ ಲಾಕ್ ಡೌನ್ ಸಡಿಲಗೊಳಿಸಿದ ಮೇಲೆ ಸೋಂಕು ಹೆಚ್ಚಾಗಿದೆ. ಜನರು ಲಾಕ್ ಡೌನ್ ಸಡಿಲಿಕೆ ದುರುಪಯೋಗಪಡಿಸಿಕೊಂಡಿದ್ದು ಕಾರಣ ಎಂದು ಅಧಿಕಾರಿಗಳ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಬೆಂಗಳೂರಿನಲ್ಲಿ ಕೊರೋನಾ ವೈರಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಲಾಕ್ ಡೌನ್ ಸಡಿಲಿಕೆಯನ್ನ ಅನ್ನ ಜನರು ದುರುಪಯೋಗಪಡಿಸಿಕೊಂಡರು. ಹೀಗಾಗಿ ಲಾಕ್ ಡೌನ್ ಸಡಿಲಿಕೆ ಬಳಿಕ ಸೋಂಕು ಹೆಚ್ಚಾಗಿದೆ. ಹೊರರಾಜ್ಯಗಳಿಂದ ಬಂದವರಿಂದ ಕೊರೋನಾ ವೈರಸ್ ಹೆಚ್ಚಾಗಿದೆ. ಅಲ್ಲದೇ ದಿನೇ ದಿನೇ ಕೊರೋನಾ ವೈರಸ್ ಹೆಚ್ಚುತ್ತಿದ್ದು ಇದು ಬಹಳ ನೋವು, ಆಘಾತಕಾರಿ ವಿಚಾರ ಎಂದು ಹೇಳಿದ್ದಾರೆ.

ಕೊರೋನಾ ಪ್ರಕರಣಗಳು ಏರುಗತಿ ಪಡೆದಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ಇದಕ್ಕಾಗಿಯೇ ಮೂರು ವಿಶೇಷ ತಂಡಗಳನ್ನು ರಚಿಸಲು ನಿರ್ಧರಿಸಲಾಗಿದೆ..ಕೊರೋನಾ ಸೋಂಕಿತರ ನಿಭಾವಣೆ (ಆಸ್ಪತ್ರೆಗಳೀಗೆ ರವಾನೆ), ಕಂಟೇನ್ಮೆಂಟ್ ವಲಯಗಳ ನಿಬಂಧನೆಗಳ ಪಾಲನೆಯ ಮೇಲ್ವಿಚಾರಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಸಾಮಾಜಿಕ ಅಂತರ, ಮುಸುಕು ಧರಿಸುವುದು, ಗುಂಟು ಕಟ್ಟದಿರುವ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕ ಪ್ರಕಟಣಾ ವ್ಯವಸ್ಥೆ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ. ಇದೇ ರೀತಿ ಕೊರೋನಾ ಹೆಚ್ಚಳ ಇರುವ ಪ್ರದೇಶಗಳಲ್ಲಿ ಸಹ ಅಗತ್ಯ ಕಂಡು ಬಂದರೆ ವಿಶೇಷ ತಂಡಗಳನ್ನು ರಚಿಸಲುನಿರ್ಧಾರ ಕೈಗೊಂಡಿದೆ..

ಕೋವಿಡ್ ಸೋಂಕಿನ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿಉರವ ಪೊಲೀಸರಲ್ಲಿಯೇ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಮೂವರನ್ನು ಬಲಿ ಪಡೆದುಕೊಂಡಿದೆ. ಸಹಜವಾಗಿಯೇ ಇದರಿಂದ ಪೊಲೀಸರಲ್ಲಿ ಸಹ ಆತಂಕ ಕಾಡುತ್ತಿದೆ.

ಈಗಿರುವ ಅಂಕಿ-ಅಂಶಗಳ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಆರಕ್ಷಕರು ಕೊರೋನಾ ಶಂಕೆಯ ಹಿನ್ನೆಲೆಯಲ್ಲಿ ಕ್ವಾರಂಟಿಯಲ್ಲಿದ್ದಾರೆಂದು ವರದಿಯಾಗಿದೆ. ಕೊರೋನಾ ಸೋಂಕಿತರ ಸಂಪರ್ಕದ ಕಾರಣಕ್ಕೆ ರಾಜ್ಯಾದ್ಯಂತ 17 ಪೊಲೀಸ್ ಠಾಣೆಗಳು ಸಂಪೂರ್ಣ ಸೀಲ್ ಡೌನ್ ಕೂಡ ಮಾಡಲಾಗಿದೆ. ಆರೋಪಿಗಳನ್ನು ಬಂಧೀಸುವಾಗ;ಲೂ ಸಾಕಷ್ಟು ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights