ಆಶ್ರಯ ಮನೆಯಲ್ಲಿದ್ದ 57 ಬಾಲಕಿಯರಿಗೆ ಕೊರೊನಾ, 07 ಮಂದಿ ಗರ್ಭಿಣಿಯಾಗಿದ್ದಾರೆ, ಒಬ್ಬರಲ್ಲಿ HIV ಪತ್ತೆ

ಉತ್ತರಪ್ರದೇಶದ ಕಾನ್ಪುರ್ ಜಿಲ್ಲೆಯ ಸರ್ಕಾರಿ ಮಕ್ಕಳ ಆಶ್ರಯ ಮನೆಯಲ್ಲಿರುವ ಬಾಲಕಿಯಲ್ಲಿ 57 ಅಪ್ರಾಪ್ತ ಬಾಲಕಿಯರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಅವರಲ್ಲಿ 05 ಮಂದಿ ಗರ್ಭಿಣಿಯಾಗಿದ್ದು, ಬಾಲಕಿಯೊಬ್ಬಳಿಗೆ ಎಚ್ಐವಿ ಪಾಸಿಟಿವ್ ಇರುವುದು ಕಂಡುಬಂದಿದೆ.

ಈ ಪ್ರಕರಣಗಳು ದೃಢಪಡುತ್ತಿದ್ದಂತೆ ಯುಪಿ ಆಡಳಿತ ಆಕ್ರೋಶಕ್ಕೆ ಗುರಿಯಾಗಿದೆ. ಲಾಕ್‌ಡೌನ್‌ಗೂ ಮುಂಚೆಯೇ ಅಲ್ಲಿಯ ಬಾಲಕಿಯಲ್ಲಿ ಗರ್ಭಾವಸ್ಥೆ ಆರಂಭವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆಶ್ರಯ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ಆಶ್ರಮ ಮನೆ (ನಿರಾಶ್ರಿತರ ಮನೆ)ಯಲ್ಲಿದ್ದ ಕೆಲವು ಹುಡುಗಿಯರಿಗೆ ಕೆಲವು ದಿನಗಳ ಹಿಂದೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹಾಗಾಗಿ ಅವರನ್ನು ಪರೀಕ್ಷಿಸಿಲು ಆರಂಭಿಸಿದಾಗಿ ಏಳು ಮಂದಿ ಗರ್ಭಿಣಿಯರಾಗಿದ್ದು, ಒಬ್ಬರಿಗೆ ಹೆಚ್‌ಐವಿ ದೃಢಪಟ್ಟಿರುವುದಾಗಿ ಸ್ಥಳೀಯ ಆಡಳಿತ ರಾಜ್ಯ ಆರೋಗ್ಯ ಇಲಾಖೆಗೆ ವರದಿ ನೀಡಿದೆ.

ಬಾಲಕಿಯರು ಗರ್ಭಿಣಿಯರಾರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ಪ್ರಶ್ನೆಗಳನ್ನು ಎತ್ತಿದ್ದವು. ಆಶ್ರಯ ಮನೆಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರಬಹುದಾ ಎಂದು ಸ್ಥಳೀಯ ಜನರಲ್ಲಿ ಅನುಮಾನಗಳು ಸೃಷ್ಟಿಯಾಗಿದ್ದವು.  ಈ ಬಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರೂ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ, ‘ಆಶ್ರಮ ಮನೆಯಲ್ಲಿ ಏಳು ಮಂದಿ ಗರ್ಭಿಣಿಯರು ವಾಸಿಸುತ್ತಿದ್ದಾರೆ. ಅವರಲ್ಲಿ ಐದು ಮಂದಿಗೆ ಕೊರೊನಾ ದೃಢಪಟ್ಟಿದೆ. ವಿವಿಧ ಜಿಲ್ಲೆಗಳಲ್ಲಿನ ಮಕ್ಕಳ ಕಲ್ಯಾಣ ಸಮಿತಿಗಳ ಶಿಫಾರಸಿನ ಮೇರೆಗೆ ಈ ಬಾಲಕಿಯರನ್ನು ಆಶ್ರಯ ಮನೆಗೆ ಕರೆತರಲಾಗಿದೆ. ಅವರು ಇಲ್ಲಿಗೆ ಬರುವುದಕ್ಕೂ ಮುಂಚೆಯೇ ಗರ್ಭಿಣಿಯಾಗಿದ್ದರು. ಈ ಎಲ್ಲ ಪ್ರಕರಣಗಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (Protection of Children from Sexual Offences Act) ಅಡಿಯಲ್ಲಿ ತನಿಖೆ ನಡೆಯುತ್ತಿದೆ’ ಎಂದು ಮಾತನಾಡಿದ ಕಾನ್ಪುರ ಜಿಲ್ಲಾಧಿಕಾರಿ ಬ್ರಹ್ಮ ಡಿಯೋ ರಾಮ್ ತಿವಾರಿ ಅವರು ತಿಳಿಸಿದ್ದಾರೆ.

“2019 ರ ಡಿಸೆಂಬರ್‌ನಲ್ಲಿ ಇಬ್ಬರು ಬಾಲಕಿಯರು ಆಗ್ರಾ ಮತ್ತು ಕನ್ನೌಜ್‌ನಿಂದ ಬಂದಿದ್ದರು. ಕೊರೊನಾ ಸೋಂಕು ದೃಢಪಟ್ಟಿರುವ ಎಲ್ಲಾ ಹುಡುಗಿಯರು ಕಾನ್ಪುರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಕಾನ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್.ಪಿ ತಿಳಿಸಿದ್ದಾರೆ.

“ಈ ಹುಡುಗಿಯರು ಆಶ್ರಯ ಮನೆಯಲ್ಲಿದ್ದಾಗ ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳನ್ನು ಅನೇಕರು ಹರಡುತ್ತಿದ್ದಾರೆ, ಅದು ನಿಜವಲ್ಲ. ಇದು ಮುಜಾಫರ್‌ಪುರ ಪ್ರಕರಣಕ್ಕೆ ಹೋಲುವ ಪ್ರಕರಣವಲ್ಲ. ಆಶ್ರಯ ಮನೆಯನ್ನು ಸೀಲ್‌ಡೌನ್‌ ಮಾಡಿರುವುದರಿಂದ ನಮಗೆ ಎಲ್ಲಾ ದಾಖಲೆಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಅವರನ್ನು ಪರೀಕ್ಷಿಸಿದಾಗ, ಅವರು ಇಲ್ಲಿಗೆ ಬರುವ ಮುಂಚೆಯೇ ಅವರಲ್ಲಿ ಗರ್ಭಧಾರಣೆ ಆರಂಭವಾಗಿತ್ತು. ಅಲ್ಲದೆ, ಕಳೆದ ಎರಡು ತಿಂಗಳಲ್ಲಿ ಯಾರು ಇಲ್ಲಿಗೆ ಬಂದು ಹೋಗಿದ್ದಾರೆ, ಕೊರೊನಾ ವೈರಸ್‌ ಹೇಗೆ ಹರಡಿತು ಎಂಬುದನ್ನು ಹುಡುಕಲು ಆರಂಭಿಸಿದ್ದೇವೆ ” ಎಂದು ದಿನೇಶ್ ಕುಮಾರ್ ಹೇಳಿದ್ದಾರೆ.

ಆಶ್ರಮ ಮನೆಯ ಕೆಲವು ಸಿಬ್ಬಂದಿ ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಗೆ ಹೋಗಿ ಬಂದಿದ್ದಾರೆ. ಇದು ಕೊರೊನಾ ಸೋಂಕಿನ ಮೂಲವಾಗಿರಬಹುದು ಎಂದು ಯುಪಿ ಮಹಿಳಾ ಆಯೋಗದ ಸದಸ್ಯ ಪೂನಮ್ ಕಪೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಾಲಕಿಯರ ಗರ್ಭಧಾರಣೆಯ ವಿಷಯದ ಬಗ್ಗೆ ಹೇಳಿಕೆ ನೀಡಿರುವ ಕಪೂರ್, “ಯಾವುದೇ ಪುರುಷರು ಅಥವಾ ಗಂಡು ಮಕ್ಕಳಿಗೆ ಆಶ್ರಯ ಮನೆಯಲ್ಲಿ ಪ್ರವೇಶಿವಿಲ್ಲ. ಹುಡುಗಿಯರು ಇಲ್ಲಿಗೆ ಬರುವ ಮುಂಚೆಯೇ ಗರ್ಭೀಣಿಯಾಗಿದ್ದರು. ವಿಷಯಗಳನ್ನು ತಿರುಚಬಾರದು” ಎಂದು ಹೇಳಿದ್ದಾರೆ.

ಬಾಲಕಿಯರು ಗರ್ಭೀಣಿಯಾಗಿದ್ದಾರೆ ಎಂಬ ಕುರಿತು ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿಯವರು, “ಮುಜಫರ್ಪುರದ (ಬಿಹಾರ) ಆಶ್ರಯ ಮನೆಯಲ್ಲಿ ನಡೆದ ಪ್ರಕರಣವು ದೇಶದ ಮುಂದೆ ಇದೆ. ಯುಪಿಯ ಡಿಯೋರಿಯಾದಲ್ಲೂ ಇದೇ ರೀತಿಯ ಪ್ರಕರಣ ಹೊರಬಿದ್ದಿದೆ. ಆದ್ದರಿಂದ, ತನಿಖೆ ಮಾಡಲಾಗಿದೆ ಎಂಬ ಹೆಸರಿನಲ್ಲಿ ಅಂತಹ ಮತ್ತೊಂದು ಪ್ರಕರಣವು ಬೆಳಕಿಗೆ ಬಾರದೇ ಇರುವ ರೀತಿಯಲ್ಲಿ ಮುಚ್ಚಿಹಾಕುವ ಪ್ರಯತ್ನದಂತೆ ತೋರಿಸುತ್ತಿದೆ. ಆದರೆ, ಸರ್ಕಾರಿ ಮಕ್ಕಳ ಆಶ್ರಯ ಮನೆಗಳಲ್ಲಿ ಅನೇಕ ಅಮಾನವೀಯ ಘಟನೆಗಳು ನಡೆಯುತ್ತಿವೆ.” ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

कानपुर के सरकारी बाल संरक्षण गृह में 57 बच्चियों को कोरोना की जांच होने के बाद एक तथ्य आया कि 2 बच्चियां गर्भवती निकलीं…

Posted by Priyanka Gandhi Vadra on Sunday, June 21, 2020

ಜಿಲ್ಲಾಡಳಿತ ಹೇಳುವಂತೆ ಕನ್ಪರ ವಸತಿ ಮನೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯಿತ್ತಿಲ್ಲ ಎನ್ನಲಾಗಿದೆ. ಮತ್ತಷ್ಟು ಮಾಹಿತಿಗಳಿಗಾಗಿ ಕಾದುನೋಡಬೇಕಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights