ಪೌರತ್ವ ತಿದ್ದುಪಡಿ ಕಾಯ್ದೆ ಸ್ವಾಗತಿಸಿದ ರಾಯಚೂರಿನ ಬಾಂಗ್ಲಾ ವಲಸಿಗರು…

ದೇಶದಲ್ಲಿ CAB ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಪರ ವಿರೋಧ ಚರ್ಚೆ ನಡೆಯುತ್ತಿದ್ದರೆ. ರಾಯಚೂರು ಜಿಲ್ಲೆಯ ಬಾಂಗ್ಲಾ ವಲಸಿಗರು ಪೌರತ್ವ ಕಾಯ್ದೆ ತಿದ್ದಪಡಿಗೆ ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದರು.

೪೦ ವರ್ಷಗಳ ಹಿಂದೆ ಭಾರತ ಬಾಂಗ್ಲಾ ವಿಭಜನೆಯಾದಾಗ ಅಲ್ಲಿದ್ದ ಹಿಂದೂಗಳು ಭಾರತಕ್ಕೆ ವಲಸೆ ಬಂದಿದ್ದರು. ಅಂತರಲ್ಲಿ ಅಂದಿನ ನೆಹರು ಸರಕಾರ ಸಿಂಧನೂರು ಬಳಿ ಪುನರ್ವಸತಿ ಕಲ್ಪಿಸಲಾಗಿತ್ತು, ಅಂದು ಭಾರತೀಯ ಪೌರತ್ವ ಕೆಲವರಿಗೆ ಸಿಕ್ಕರೆ ಇನ್ನೂ ಕೆಲವರಿಗೆ ಪೌರತ್ವ ಸಿಕ್ಕಿರಲಿಲ್ಲ. ಇದರಿಂದ ೪೦ ವರ್ಷದಿಂದ ಅನ್ ಸೆಟ್ಲೆರ್ ಆಗಿ ಕ್ಯಾಂಪಿನಲ್ಲಿ ವಾಸವಾಗಿದ್ದರು.

ಇಂದು ಸರಕಾರ ವಲಸಿಗರಿಗೆ ಭಾರತೀಯ ಪೌರತ್ವ ನೀಡಲು ಮುಂದಾಗಿರುವುದು ಅವರಲ್ಲಿ ಸಂಭ್ರಮವನ್ನುಂಟು ಮಾಡಿದೆ. ಇಲ್ಲಿರುವ ಆರ್ ಎಚ್ ೨ ರಲ್ಲಿ ಬಾಂಗ್ಲಾ‌ ವಲಸಿಗರು ಮೋದಿ, ಅಮಿತ್ ಶಾ ಹಾಗು ಕೊಪ್ಪಳ ಸಂಸದ ಸಂಗಣ್ಣ ಕರಡಿ ಪರ ಘೋಷಣೆ ಹಾಕಿ ಬಣ್ಣ ಹಾಕಿಕೊಂಡು ಸಂಭ್ರಮಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights